ಕನ್ನಡಪ್ರಭ ವಾರ್ತೆ ಸಿಂಧನೂರು
ತಾಲೂಕಿನ ಜಾಲಿಹಾಳ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದಲಿತ ಸಾಹಿತ್ಯ ಪರಿಷತ್ ಕಲಬುರಗಿ ವಿಭಾಗ, ರಾಯಚೂರು ಜಿಲ್ಲಾ ಘಟಕ ಹಾಗೂ ಸಿಂಧನೂರು ತಾಲೂಕು ಘಟಕದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಾತಿ ವಿನಾಶ ಚಳವಳಿ; ಮುಂದಿನ ಹೆಜ್ಜೆಗಳು ವಿಷಯ ಕುರಿತು ಎರಡು ದಿನಗಳ ಅಧ್ಯಯನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ಜಾತಿ ವ್ಯವಸ್ಥೆಯನ್ನು ಬೇರು ಸಮೇತ ಕಿತ್ತೆಸೆಯುವ ನಿಟ್ಟಿನಲ್ಲಿ ಚಳವಳಿ ಅಗತ್ಯವಾಗಿದೆ. ಎಲ್ಲ ಶೋಷಿತ ಜನಾಂಗದವರಿಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಕರೆ ನೀಡಿದರು.
ಶಿಬಿರದ ನಿರ್ದೇಶಕ ತಾಯಿರಾಜ್ ಮರ್ಚೆಟ್ಹಾಳ ಮಾತನಾಡಿ, ಸಮಾಜದಲ್ಲಿ ನಡೆಯುವ ಜಾತಿ ವ್ಯವಸ್ಥೆಯ ಕರಾಳತೆಯ ವಿರುದ್ಧ ಹೋರಾಟ ರೂಪಿಸಲು ಆಲೋಚನಾ ಕ್ರಮದ ನಿರ್ಮಾಣಕ್ಕಾಗಿ ಇಂತಹ ಶಿಬಿರಗಳು ಅಗತ್ಯ ಎಂದು ಹೇಳಿದರು.ಶಿಬಿರದ ಮೊದಲನೇ ಗೋಷ್ಠಿಯಲ್ಲಿ ವಚನಪೂರ್ವ ಚಿಂತನೆಗಳು ವಿಷಯ ಕುರಿತು ಸಂಪನ್ಮೂಲ ವ್ಯಕ್ತಿ ಡಾ.ವೈ.ಎಂ.ಭಜಂತ್ರಿ, ಎರಡನೇ ಚಿಂತನಾ ಗೋಷ್ಠಿಯಲ್ಲಿ ವಚನ ಸಾಹಿತ್ಯ ಚಳವಳಿ ಕುರಿತು ಬೆಳಗಾವಿಯ ಸಾಹಿತಿ ಡಾ.ಎಚ್.ಬಿ.ಕೋಲ್ಕಾರ್, ಮೂರನೇ ಗೋಷ್ಠಿಯಲ್ಲಿ ಹೋರಾಟದ ಹಾಡುಗಳ ಕುರಿತು ಹೋರಾಟಗಾರ ಅಂಬಣ್ಣ ಆರೋಲಿಕರ್ ಮಾತನಾಡಿದರು. ದಲಿತ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಡಾ.ಅರುಣಕುಮಾರ ಭೇರಿಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಬುರಗಿ ವಿಭಾಗ ಸಂಚಾಲಕ ಎಚ್.ಎಫ್.ಮಸ್ಕಿ ಅಧ್ಯಕ್ಷತೆ ವಹಿಸಿಕೊಂಡಿದ್ದರು.