ಗೆದ್ದವರು ಮೇಲ್ಮನೆಯಲ್ಲಿ ಪದವೀಧರರ ಪರ ಧ್ವನಿ ಎತ್ತಲಿಲ್ಲ

KannadaprabhaNewsNetwork |  
Published : Oct 19, 2026, 01:30 AM IST
ಪದವೀಧರ ಕ್ಷೇತ್ರದಿಂದ ಗೆದ್ದಂತಹ ಅಭ್ಯರ್ಥಿಗಳು ಮೇಲ್ಮನೆಯಲ್ಲಿ ಪದವೀಧರರ ಪರ ಧ್ವನಿ ಎತ್ತಲಿಲ್ಲ : ಬರೀದ್ | Kannada Prabha

ಸಾರಾಂಶ

ಪದವೀಧರರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಗಳಿಗೆ ಅವಕಾಶ ನೀಡಿದಾಗ ವಿಧಾನಪರಿಷತ್ ಚುನಾವಣೆಗೆ ಗೌರವ ಸಿಗುತ್ತದೆ ಎಂದು ಆಗ್ನೇಯ ಪದವೀಧರರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಅಡ್ವೋಕೇಟ್ ಬರೀದ್ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ತಿಪಟೂರು

ಪದವೀಧರರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಗಳಿಗೆ ಅವಕಾಶ ನೀಡಿದಾಗ ವಿಧಾನಪರಿಷತ್ ಚುನಾವಣೆಗೆ ಗೌರವ ಸಿಗುತ್ತದೆ ಎಂದು ಆಗ್ನೇಯ ಪದವೀಧರರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಅಡ್ವೋಕೇಟ್ ಬರೀದ್ ಅಭಿಪ್ರಾಯಪಟ್ಟರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾದ ಅವರು, ಆಗ್ನೇಯ ಪದವೀಧರ ಕ್ಷೇತ್ರದಿಂದ ಗೆದ್ದಂತಹ ಅಭ್ಯರ್ಥಿಗಳು ಮೇಲ್ಮನೆಯಲ್ಲಿ ಪದವೀಧರರ ಪರ ಧ್ವನಿ ಎತ್ತಲಿಲ್ಲ. ರಾಜಕೀಯ ಪಕ್ಷಗಳು ಈ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಬಾರದು. ಪ್ರಜ್ಞಾವಂತ ಮತದಾರರು ತಮ್ಮನ್ನು ಆಯ್ಕೆ ಮಾಡಿದರೆ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪದವೀಧರರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಶ್ರಮಿಸುತ್ತೇನೆ. ಪದವೀಧರರು ಆನ್‌ಲೈನ್‌ ಪೋರ್ಟಲ್ ಮೂಲಕ ದೂರು ಮತ್ತು ಸಲಹೆ, ಬೇಡಿಕೆಗಳನ್ನು ದಾಖಲಿಸಿದರೆ ಸ್ಪಂದಿಸುತ್ತೆನೆ. ಜಿಲ್ಲಾ ಸಾರ್ವಜನಿಕ ಗ್ರಂಥಾಲಯಗಳು, ಜಿಲ್ಲಾ ನ್ಯಾಯಾಲಯಗಳ ಗ್ರಂಥಾಲಯಗಳನ್ನು ಡಿಜಿಟಲ್ ಗ್ರಂಥಾಲಯಗಳಾಗಿ ಆಧುನೀಕರಿಸಿ ಓದುಗರಿಗೆ ಸೌಲಭ್ಯ ಕಲ್ಪಿಸುತ್ತೇನೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಅನ್ವಯಿಸುವಂತೆ ಕನಿಷ್ಠ ವೇತನ, ಪಿಎಫ್, ಇಎಸ್‌ಐ ಸೇರಿ ಕಾನೂನುಬದ್ಧ ಕಾರ್ಮಿಕ ಸೌಲಭ್ಯ ದೊರೆಯುವಂತೆ ವಿಶೇಷ ಸಮಿತಿ ರಚಿಸಲು ಶ್ರಮಿಸುತ್ತೇನೆ. ನ್ಯಾಯಾಲಯದ ಕಲಾಪಗಳಿಗೆ ಅಡಚಣೆಯಾಗದಂತೆ ಸೌರ ವಿದ್ಯುತ್ ಸೌಲಭ್ಯ ಕಲ್ಪಿಸಿ ಕೊಡುತ್ತೇನೆ. ಪದವಿ ನಂತರದ ವೈದ್ಯಕೀಯ, ಇಂಜಿನಿಯರಿಂಗ್ ವೃತ್ತಿಪರ ಕೋರ್ಸ್‌ಗಳಿಗೆ ತಜ್ಞರ ಸಹಯೋಗದೊಂದಿಗೆ ವೈಜ್ಞಾನಿಕವಾಗಿ ಉನ್ನತ ಗುಣಮಟ್ಟದಲ್ಲಿ ಕನ್ನಡ ಪಠ್ಯ ಪುಸ್ತಕಗಳನ್ನು ಸಿದ್ಧಪಡಿಸಿ ಲಭ್ಯವಾಗುವಂತೆ ಶ್ರಮಿಸುತ್ತೇನೆ. ವೃತ್ತಿಪರ ಶಿಕ್ಷಣದಲ್ಲಿ ಸಮಾನ ಅವಕಾಶಗಳು ಲಭ್ಯವಾಗುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಈ ಮೊದಲು ದೇಶದ ಮಾಜಿ ಪ್ರಧಾನಿ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರು ನಮ್ಮ ಮುಸ್ಲಿಂ ಸಮುದಾಯವನ್ನು ವಿಶೇಷ ರೀತಿಯಲ್ಲಿ ಗೌರವಿಸುತ್ತಿದ್ದರು. ನಮ್ಮ ಸಮುದಾಯ ಒಂದು ರಾಷ್ಟ್ರೀಯ ಪಕ್ಷದ ಜೊತೆಯಲ್ಲಿ ಇದ್ದೇವೆ ಎಂದು ಜನರು ತಿಳಿದಿದ್ದರೆ ಅದು ತಪ್ಪು ಅಭಿಪ್ರಾಯ. ಪಕ್ಷಕ್ಕಿಂತ ವ್ಯಕ್ತಿ ಮುಖ್ಯವಾಗಿರುತ್ತಾರೆ. ಅಂತಹ ಯೋಗ್ಯ ಅಭ್ಯರ್ಥಿಗೆ ಮತ ನೀಡಬೇಕೆ ಹೊರತು ಪಕ್ಷ ನೋಡಬಾರದು ಎಂದು ತಿಳಿಸಿದರು. ಈ ಸಮಯದಲ್ಲಿ ನವೀನ್, ಆದರ್ಶ್, ಜಮೀರ್. ಸಬ್ದರ್. ಇಮ್ರಾನ್ ಮುಂತಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಿಜಿ ಪಾಳ್ಯ ಡೊಡ್ಡಕೆರೆ ಮಣ್ಣು ಮಾರಾಟದಿಂದ ಭ್ರಷ್ಟಾಚಾರ: ನಿಶಾಂತ್
ಇರುವೆಯ ಹೆಜ್ಜೆ ಸಪ್ಪಳವನ್ನೂ ಆಲಿಸುವವನೇ ನಿಜ ಕವಿ