ಕಾರ್ಖಾನೆಗೆ ಭೂಮಿ ಕೊಡಲ್ಲವೆಂದು ಹೇಳಿದ್ದೇವು

KannadaprabhaNewsNetwork |  
Published : Mar 19, 2026, 02:00 AM IST
18ಕೆಪಿಎಲ್29 ಕೊಪ್ಪಳ ನಗರದಲ್ಲಿ ಕಾರ್ಖಾನೆಯನ್ನು ವಿರೋಧಿಸಿ ಧರಣಿ ನಡೆಸುತ್ತಿರುವುದು. | Kannada Prabha

ಸಾರಾಂಶ

2007ರಲ್ಲಿ ಭೂಮಿಯ ದರ ನಿಗದಿ ಮಾಡುವ ಜಿಲ್ಲಾಧಿಕಾರಿ, ಧಾರವಾಡ ವಿಶೇಷ ಭೂಸ್ವಾಧೀನ ಅಧಿಕಾರಿ, ಜಂಟಿ ಕೈಗಾರಿಕಾ ನಿರ್ದೇಶಕರು ಇರುವ ನಡಾವಳಿಯಲ್ಲಿ ಜಮೀನು ಕಾರ್ಖಾನೆಗೆ ನೀಡುವುದು ಸರಿಯಲ್ಲ.

ಕೊಪ್ಪಳ: ಕೊಪ್ಪಳಕ್ಕೆ ಕೇವಲ 500 ಮೀಟರ್ ಅಂತರದಲ್ಲಿಯೇ ಕಾರ್ಖಾನೆ ಸ್ಥಾಪಿಸುವುದು ಬೇಡ, ಹೀಗಾಗಿ, ನಾವು ಭೂಮಿ ಕೊಡುವುದಿಲ್ಲ ಎಂದು ಅಂದೇ ಹೇಳಿದ್ದೇವು ಎಂದು ಭೂಮಿ ಕಳೆದುಕೊಂಡಿರುವ ಬದರಿನಾರಾಯಣ ವರ್ಣೆಕರ್ ಹೇಳಿದ್ದಾರೆ.

ಬಿಎಸ್ ಪಿಎಲ್ ಕಾರ್ಖಾನೆ ವಿರೋಧಿಸಿ ನಡೆಯುತ್ತಿರುವ ಹೋರಾಟದ 139ನೇ ದಿನದಲ್ಲಿ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು.

2007ರಲ್ಲಿ ಭೂಮಿಯ ದರ ನಿಗದಿ ಮಾಡುವ ಜಿಲ್ಲಾಧಿಕಾರಿ, ಧಾರವಾಡ ವಿಶೇಷ ಭೂಸ್ವಾಧೀನ ಅಧಿಕಾರಿ, ಜಂಟಿ ಕೈಗಾರಿಕಾ ನಿರ್ದೇಶಕರು ಇರುವ ನಡಾವಳಿಯಲ್ಲಿ ಜಮೀನು ಕಾರ್ಖಾನೆಗೆ ನೀಡುವುದು ಸರಿಯಲ್ಲ. ಯಾಕೆಂದರೆ ಕಾರ್ಖಾನೆಗಳು ಪರಿಸರ ಮಾಲಿನ್ಯವನ್ನುಂಟು ಮಾಡುತ್ತವೆ. ಅಲ್ಲದೇ ಕೊಪ್ಪಳದಿಂದ ಕೇವಲ 500 ಮೀ ಒಳಗೆ ಜಮೀನು ಕೊಡುವುದು ಸರಿಯಲ್ಲ. ಮುಂದೆ ಜೀವನ ನಡೆಸುವುದು ಅಸಾಧ್ಯವಾಗಿ ಅಶುದ್ಧ ವಾತಾವರಣದಲ್ಲಿ ಜೀವನ ಸಾಗಿಸಬೇಕಾಗುತ್ತದೆ. ಈ ಕುರಿತು ಇಲ್ಲಿನ ಅಧಿಕಾರಿಗಳು ಮೊದಲು ಚಿಂತಿಸಬೇಕು. ಬೇಕಾದರೆ ಕೊಪ್ಪಳದಿಂದ ದೂರದಲ್ಲಿ ಕಾರ್ಖಾನೆ ಸ್ಥಾಪನೆಗೆ ಜಮೀನು ತೆಗೆದುಕೊಳ್ಳಿ ಎಂದು ಹೇಳಿದಾಗಲೂ ಒತ್ತಾಯಪೂರ್ವಕವಾಗಿ ನಮ್ಮ ಭೂಮಿ ಸ್ವಾಧೀನ ಮಾಡಿದರು. ನನ್ನ ಜಮೀನು ರೈಲ್ವೆ ಹಳಿ ಪಕ್ಕದಲ್ಲಿ ಇದ್ದು ಅಧಿಸೂಚನೆ ಮಾಡಿದ ನಕ್ಷೆಯಲ್ಲಿ ಇರಲಿಲ್ಲ. ಆದರೂ ಅವರ ಭೂದಾಹಕ್ಕೆ ಬಲಿಯಾಗಿ ಇದುವರೆಗೆ ನನ್ನ ನಾಲ್ಕು ಏಕರೆಗೆ ಹಣ ತೆಗೆದುಕೊಳ್ಳದೆ ಹೋರಾಡುತ್ತಿದ್ದೇನೆ.ಎಲ್ಲ ರೈತರು ನನ್ನ ಹಾಗೇ ಕೇವಲ ಭೂಮಿ ವಾಪಸ್ ಕೊಡಬೇಕೆಂದು ಹೋರಾಟ ಮಾಡಲು ಈ ವೇದಿಕೆಗೆ ಶಕ್ತಿ ತುಂಬೋಣ ಎಂದರು.

ಭಾನುವಾರ ರಾತ್ರಿ 10 ಗಂಟೆಗೆ ಕೊಪ್ಪಳ ನಗರಸಭೆ ಮುಂದಿನ ಧರಣಿ ಸ್ಥಳದಿಂದ ಬೆಂಗಳೂರು ಚಲೋ ನಡೆಸಲು ಮುಂದಾಗಿದ್ದು, ಯುದ್ಧದ ಕಾರಣಕ್ಕೆ ಬೆಂಗಳೂರು ಹೋಟೇಲ್ ಬಂದ್ ಆಗಿದ್ದು ರೊಟ್ಟಿ ಬುತ್ತಿ ಕಟ್ಟಿಕೊಂಡು ಸತ್ಯಾಗ್ರಹ ನಡೆಸೋಣ ಎಂದರು.

ಧರಣಿಯಲ್ಲಿ ಸಂಚಾಲಕ ಮಲ್ಲಿಕಾರ್ಜುನ ಬಿ‌.ಗೋನಾಳ, ಮಂಜುನಾಥ ಜಿ. ಗೊಂಡಬಾಳ, ನಿವೃತ್ತ ಪ್ರಾಚಾರ್ಯ ಬಿ.ಜಿ. ಕರಿಗಾರ, ಎಲ್.ಎಫ್. ಪಾಟೀಲ್, ಪ್ರಕಾಶಕ ಡಿ.ಎಂ. ಬಡಿಗೇರ, ರಮೇಶ ಸುರ್ವೆ, ನಿವೃತ್ತ ನ್ಯಾಯಾಂಗ ಅಧಿಕಾರಿ ಜಿ.ಬಿ. ಪಾಟೀಲ್, ರವಿ ಕಾಂತನವರ, ಚಾರಣ ಬಳಗದ ಸಿ.ಬಿ. ಪಾಟೀಲ್, ಗಂಗಾಧರ ಖಾನಾಪೂರ, ರಾಜಶೇಖರ ಏಳುಬಾವಿ, ಶರಣು ಶೆಟ್ಟರ್, ಯಮನೂರಪ್ಪ ಹಾಲಳ್ಳಿ ಬಸಾಪುರ, ಕಿಶನ್ ಸುರ್ವೆ, ಎಸ್. ಮಹಾದೇವಪ್ಪ ಮಾವಿನಮಡು, ವೈ. ಸತ್ಯನಾರಾಯಣ, ಶಿವಪ್ಪ ಜಲ್ಲಿ, ವಿಜಯ ಮಹಾಂತೇಶ ಹಟ್ಟಿ, ಮಕ್ಬುಲ್ ರಾಯಚೂರು, ನಾಗರಾಜ ಕುಷ್ಟಗಿ, ಹನುಮಂತಪ್ಪ ಚಿಂಚಲಿ, ಹನುಮೇಶಪ್ಪ ಜಂತ್ಲಿ, ಪಂಪಣ್ಣ ಚಿಂತಪಲ್ಲಿ, ಬಸವರಾಜಪ್ಪ ಶೆಟ್ಟರ್ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗದಗ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಶುಭಾರಂಭ
ಎಸ್ಸೆಸ್ಲೆಲ್ಸಿ ಪ್ರಥಮ ಭಾಷೆ ಪರೀಕ್ಷೆ ಸುಸೂತ್ರ