ಪ್ರಕೃತಿ ಜತೆ ಸಾಮರಸ್ಯದಿಂದ ಬದುಕಬೇಕು

KannadaprabhaNewsNetwork |  
Published : Jun 05, 2025, 11:55 PM IST
5ಕೆಜಿಎಫ್‌1 | Kannada Prabha

ಸಾರಾಂಶ

ಪ್ರತಿಯೊಬ್ಬರು ತಮ್ಮ ಮನೆಗಳ ಮುಂದೆ ಹಾಗೂ ಇತ್ತಲಲ್ಲಿ ಹೂವಿನ ಗಿಡ, ಹಣ್ಣಿನ ಗಿಡಗಳನ್ನು ಬೆಳಸುವ ಮೂಲಕ ಪಕ್ಷಿ ಸಂಕುಲವನ್ನು ನಾವು ಸಂರಕ್ಷಣೆ ಮಾಡುವ ಮೂಲಕ ನಮ್ಮ ಮುಂದಿನ ಪೀಳಿಗೆ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗಲಿದೆ. ಉತ್ತಮ ಪರಿಸರ ವೃದ್ದಿಯಾಗಬೇಕಾದರೆ ಮೊದಲು ಪ್ಲಾಸ್ಟಿಕ್ ನಿಷೇಧಕ್ಕೆ ಪಣತೊಡಬೇಕು,

ಕನ್ನಡಪ್ರಭ ವಾರ್ತೆ ಕೆಜಿಎಫ್ಇರುವುದೊಂದೇ ಭೂಮಿ, ಪರಿಸರವೇ ನಮ್ಮೆಲ್ಲರ ಆಸ್ತಿ. ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕೋಣ, ಮುಂದಿನ ಪೀಳಿಗೆಗಾಗಿ ಪರಿಸರವನ್ನು ಸಂರಕ್ಷಿಸುವ ಕಾರ್ಯಕ್ಕೆ ಮುಂದಾಗೋಣ ಎಂದು ೩ನೇ ಅಪರ ಜಿಲ್ಲಾ ಸತ್ರ ನ್ಯಾಯಾಧೀಶರಾದ ಬಿ.ಶಿವಕುಮಾರ್‌ ಹೇಳಿದರು.

ವಿಶ್ವಪರಿಸರ ದಿನದ ಅಂಗವಾಗಿ ಕೆಜಿಎಫ್ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಅರಣ್ಯ ಇಲಾಖೆ ಸಹಯೋಗದಲ್ಲಿ ರಾಮಸಾಗರ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಗಿಡ ನೆಡುವ ಮೂಲಕ ವಿಶ್ವಪರಿಸರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.

ಬಾಲ್ಯದ ನೆನಪುಗಳ ಮೆಲುಕು

ಮೂಲತಃ ಮಲೆನಾಡಿನಲ್ಲಿ ಬೆಳೆದ ನನಗೂ ಪರಿಸರಕ್ಕೂ ಮಾತಿಗೆ ನಿಲುಕದ ಒಂದು ಅವಿನಾಭಾವ ಸಂಬಂಧವಿದೆ, ಕಾರಣವಿಷೇ ನನ್ನ ಕವಿ ಮನ ಬಾಲ್ಯದಿಂದಲೂ ಪರಿಸರದ ಸೌಂದರ್ಯವನ್ನು ಮನಸಾ ಸವಿದಿದೆ, ಹಚ್ಚ ಹಸುರಿನ ದಟ್ಟ ಕಾಡುಗಳ ಚಿಲಿ ಪಿಲಿ ಗುಟ್ಟುವ ಶುಕ ಪಿಕಗಳು, ವರುಷದ ಕೆಲವು ತಿಂಗಳು ಧೋ..ಧೋ ಎಂದು ನಿರಂತರವಾಗಿ ಭೂಮಿ ಆಕಾಶಗಳನ್ನು ಒಂದಾಗಿಸುವAತೆ ಸುರಿಯುವ ಮಳೆಯ ಪರಿಸರದಲ್ಲಿ ಬೆಳೆದಿರುವುದಾಗಿ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು

ವಕೀಲರ ಸಂಘದ ಅಧ್ಯಕ್ಷರಾದ ಎಸ್.ಎನ್. ರಾಜಗೋಪಾಲಗೌಡ ಮಾತನಾಡಿ, ಪರಿಸರವು ನಮಗೆ ಎಲ್ಲವನ್ನು ಕೊಟ್ಟಿದ್ದು ನಾವು ಪರಿರಸಕ್ಕೆ ಏನು ಕೊಟ್ಟಿದ್ದೇವೆ ಎಂಬುದನ್ನು ಅರಿತು ಪರಿಸರವನ್ನು ನಾವು ಉಳಿಸಿದರೆ ಪರಿಸರ ನಮ್ಮನನ್ನು ಉಳಿಸುತ್ತದೆ ಎಂಬ ಸತ್ಯವನ್ನು ನಾವು ಮನವರಿಕೆ ಮಾಡಿಕೊಳ್ಳಬೇಕು ಎಂದರು.

ಮನೆ ಮುಂದೆ ಹಣ್ಣಿನ ಗಿಡ ಬೆಳೆಸಿ

ಪ್ರತಿಯೊಬ್ಬರು ತಮ್ಮ ಮನೆಗಳ ಮುಂದೆ ಹಾಗೂ ಇತ್ತಲಲ್ಲಿ ಹೂವಿನ ಗಿಡ, ಹಣ್ಣಿನ ಗಿಡಗಳನ್ನು ಬೆಳಸುವ ಮೂಲಕ ಪಕ್ಷಿ ಸಂಕುಲವನ್ನು ನಾವು ಸಂರಕ್ಷಣೆ ಮಾಡುವ ಮೂಲಕ ನಮ್ಮ ಮುಂದಿನ ಪೀಳಿಗೆ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗಲಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಅನಿತಾ ಮಾತನಾಡಿ, ಉತ್ತಮ ಪರಿಸರ ವೃದ್ದಿಯಾಗಬೇಕಾದರೆ ಮೊದಲು ಪ್ಲಾಸ್ಟಿಕ್ ನಿಷೇಧಕ್ಕೆ ಪಣತೊಡಬೇಕು, ಪಾಸ್ಟಿಕ್ ಬಳಕೆಯಿಂದ ಪರಿಸರ ನಾಶವಾಗುತ್ತಿದೆ, ಪ್ರತಿ ಮನೆಯಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದ್ದು, ಪ್ಲಾಸ್ಟಿಕ್ ಇಲ್ಲದೆ ಜೀವನವೇ ಇಲ್ಲವೇನು ಎಂಬ ಸ್ಥಿತಿಗೆ ನಾವು ಬಂದು ನಿಂತಿದ್ದವೇ, ಸರ್ಕಾರಿ ಯಂತ್ರ ಮೊದಲು ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಿದಾಗ ಮಾತ್ರ ನಾವು ಉತ್ತಮ ಪರಿಸರಕಾರಣಬಹುದು. ಈ ಸಂದರ್ಭದಲ್ಲಿ ಹಿರಿಯ ನ್ಯಾಯಾಧೀಶೆ ಎನ್.ಬಿ.ಜಯಲಕ್ಷ್ಮೀ, ಹಿರಿಯ ನ್ಯಾಯಾಧೀಶರಾದ ಮುಜಫರ್ ಎ ಮಾಂಜರಿ, ನ್ಯಾಯಾಧೀಶರಾದ ವಿನೋದ್‌ಕುಮಾರ್ ಶಾಲೆಯ ಅವರಣದಲ್ಲಿ ಗಿಡಗಳನ್ನು ನೆಟ್ಟರು.ಕಕ್ಷಿದಾರರಿಗೆ ಗಿಡಗಳ ವಿತರಣೆ ಕೆಜಿಎಫ್‌ನ ಜೆಎಂಎಫ್‌ಸಿ ನ್ಯಾಯಾಲಯದ ಅವರಣದಲ್ಲಿ ನ್ಯಾಯಾಲಯಕ್ಕೆ ಆಗಮಿಸಿದ್ದ ಕಕ್ಷಿದಾರರಿಗೆ ಹಾಗೂ ವಕೀಲರಿಗೆ ವಿವಿದ ೨೦೦ ಹಣ್ಣಿನ ಗಿಡಗಳನ್ನು ನೀಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಣೆ ಮಾಡಿದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಉಪಾಧ್ಯಕ್ಷರಾದ ಮಣಿವಣ್ಣನ್, ಕರ‍್ಯದರ್ಶೀ ಕೆ.ಸಿ.ನಾಗರಾಜ್, ಕರ‍್ಯದರ್ಶೀ ಮಘೇಂದ್ರನ್, ಸರಕಾರಿ ಶಾಲೆಯ ಮುಖ್ಯ ಶಿಕ್ಷಕರಾದ ಅನಿಲ್‌ಕುಮಾರ್ ಸಿ.ಎನ್.ಅಂಜಿತ್‌ಕುಮಾರ್, ನಸ್ರತ್ ಜಹಾನ್, ಗ್ರಾಮ ಪಂ, ಅಧ್ಯಕ್ಷರಾದ ಚಂದ್ರಪ್ಪ, ಶಶಿಕಲಾ, ಸದಸ್ಯರಾದ ಆಶ್ವಥ್,ಸರೋಜಮ್ಮ, ಲಕ್ಷಮ್ಮ, ಪಾಪಮ್ಮ ಗ್ರಾಮ ಪಂ, ಕರ‍್ಯದರ್ಶೀ ಬ್ಯಾಟಪ್ಪ ಕರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌