ಸಮಾಜಕ್ಕೆ ಚ್ಯುತಿ ಬರದ ಹಾಗೆ ಸೇವೆ ಮಾಡಬೇಕು-ಸ್ವಾಮೀಜಿ

KannadaprabhaNewsNetwork |  
Published : Oct 12, 2025, 01:01 AM IST
10ಎಚ್‌ವಿಆರ್6 | Kannada Prabha

ಸಾರಾಂಶ

ಕುರುಬ ಸಂಘದ ನೂತನ ಪದಾಧಿಕಾರಿಗಳು ಸಮಾಜಕ್ಕೆ ಚ್ಯುತಿ ಬರದ ಹಾಗೆ ಸೇವೆ ಮಾಡಬೇಕು. ಹುದ್ದೆಗಾಗಿ ಬರುವವರು ನಮಗೆ ಬೇಕಾಗಿಲ್ಲ. ಸಮಾಜಕ್ಕಾಗಿ ನಿಜವಾಗಲೂ ನಿಸ್ವಾರ್ಥ ಸೇವೆ ಮಾಡುವವರು ಇದ್ದರೆ ಸಾಕು ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

ಹಾವೇರಿ: ಕುರುಬ ಸಂಘದ ನೂತನ ಪದಾಧಿಕಾರಿಗಳು ಸಮಾಜಕ್ಕೆ ಚ್ಯುತಿ ಬರದ ಹಾಗೆ ಸೇವೆ ಮಾಡಬೇಕು. ಹುದ್ದೆಗಾಗಿ ಬರುವವರು ನಮಗೆ ಬೇಕಾಗಿಲ್ಲ. ಸಮಾಜಕ್ಕಾಗಿ ನಿಜವಾಗಲೂ ನಿಸ್ವಾರ್ಥ ಸೇವೆ ಮಾಡುವವರು ಇದ್ದರೆ ಸಾಕು ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.ಕಾಗಿನೆಲೆಯಲ್ಲಿ ನ. 8ರಂದು ನಡೆಯಲಿರುವ ದಾಸಶ್ರೇಷ್ಠ ಕನಕ ದಾಸರ ಜಯಂತ್ಯುತ್ಸವ ಹಾಗೂ ಕರ್ನಾಟಕ ಪ್ರದೇಶ ಕುರುಬ ಸಂಘದ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳ ಆಯ್ಕೆ ಅಂಗವಾಗಿ ಶುಕ್ರವಾರ ಕಾಗಿನೆಲೆ ಕನಕ ಗುರುಪೀಠದ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಶ್ರೀಮಠದಲ್ಲಿ ನಡೆಯುವ ಧಾರ್ಮಿಕ ಸಭೆ, ಸಮಾರಂಭ ಸಂಘದ ಸಭೆಗಳಿಗೆ ಕರೆದಾಕ್ಷಣ ಬಂದು ಜವಾಬ್ದಾರಿ ನಿರ್ವಹಣೆ ಮಾಡಬೇಕು. ಪದೇ ಪದೇ ಸಭೆಗೆ ಗೈರಾದರೆ ಅಂತವರನ್ನು ಸಂಘದಿಂದ ವಜಾಗೊಳಿಸಲಾಗುವುದು. ಈ ಬಾರಿ ನ. 1ರಿಂದಲೇ ಶ್ರೀಮಠದಲ್ಲಿ ಕನಕದಾಸರ ಜಯಂತಿ ಕಾರ್ಯಕ್ರಮ ನಡೆಯಲಿವೆ. ವಿಶೇಷವಾಗಿ ಇಟಗಿ ಭೀಮಾಂಬಿಕೆ ಪುರಾಣ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು. ಕನಕದಾಸರ ಜಯಂತಿ ಕುರಿತು ಸಮಾಜದ ಮುಖಂಡರು ಮತ್ತು ಭಕ್ತಾಧಿಗಳಿಂದ ಸಲಹೆ ಸೂಚನೆ ಪಡೆದ ಶ್ರೀಗಳು, ಈ ವರ್ಷದ ಕನಕದಾಸರ ಜಯಂತಿ ಆಚರಣೆ ಜವಾಬ್ದಾರಿಯನ್ನು ರಾಣಿಬೆನ್ನೂರ ತಾಲೂಕಿನ ಕುರುಬ ಸಮಾಜದ ಮುಖಂಡರಿಗೆ ಹಾಗೂ ಭಕ್ತಾದಿಗಳಿಗೆ ವಹಿಸಿದರು. ಪದಾಧಿಕಾರಿಗಳ ಆಯ್ಕೆ: ಜಿಲ್ಲಾ ಕುರುಬ ಸಂಘದ ನೂತನ ಅಧ್ಯಕ್ಷರಾಗಿ ಬ್ಯಾಡಗಿಯ ನಾಗರಾಜ ಆನ್ವೇರಿ, ಜಿಲ್ಲಾ ಉಪಾಧ್ಯಕ್ಷರಾಗಿ ಅಶೋಕ ಬಣಕಾರ, ದಾನಪ್ಪ ಗಂಟೇರ್, ಪರಶುರಾಮ ಬಗಾಡೆ, ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಚೋಳಪ್ಪ ತಸ್ವಾಳ, ಪ್ರಧಾನ ಕಾರ್ಯದರ್ಶಿಗಳಾಗಿ ಹನುಮಂತಗೌಡ ಗಾಜೀಗೌಡ್ರ, ಖಜಾಂಚಿ ರವಿ ಕಂಬಳಿ, ಸಂಘಟನಾ ಕಾರ್ಯದರ್ಶಿಗಳಾಗಿ ಯಲ್ಲಪ್ಪ ಗದಿಗೆಪ್ಪನವರ, ಜಿಲ್ಲಾ ನಿರ್ದೇಶಕರಾಗಿ ಬಸವರಾಜ ಕಂಬಳಿ, ರವಿ ಕರಿಗಾರ, ಡಿವಿ ಅಜ್ಜಣ್ಣನವರ, ಅನಂದ ಇಟಗಿ, ನಿಂಗಪ್ಪ ಕರಬಣ್ಣನವರ, ಮಲ್ಲಿಕಾರ್ಜುನ ಕರಲಿಂಗಣ್ಣನವರ, ರಾಮಚಂದ್ರ ಯಲ್ಲಪ್ಪ ಗದಿಗೆಣ್ಣನವರ, ಸುರೇಶ ದೊಡ್ಡಕುರುಬರ, ವಿಜ ರಾಣೋಜಿ, ಯಲ್ಲಪ್ಪ ನರಗುಂದ, ಸೇರಿದಂತೆ ಜಿಲ್ಲಾಮಟ್ಟದಲ್ಲಿ 25 ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಇದೇ ವೇಳೆ ಎಲ್ಲಾ ತಾಲೂಕು ಘಟಕಗಳಿಗೂ ಪದಾಧಿಕಾರಿಗಳನ್ನು ನೇಮಿಸಲಾಯಿತು. ಸಭೆಯಲ್ಲಿ ಇತ್ತೀಚೆಗೆ ನಿಧನರಾದ ಮಾರುತಿ ಹರಿಹರ, ಮಾಲತೇಶ ಬಣಕಾರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಭೆಯಲ್ಲಿ ಶ್ರೀಮಠದ ಅಮೋಷ ಸಿದ್ದೇಶ್ವರ ಸ್ವಾಮೀಜಿ, ಧರ್ಮದರ್ಶಿಗಳಾದ ಎಸ್‌ಎಫ್‌ಎನ್ ಗಾಜೀಗೌಡ್ರ, ಶಂಕ್ರಣ್ಣ ಮಾತನವರ, ರಾಜೇಂದ್ರ ಹಾವೇರಣ್ಣನವರ, ಭೋಜರಾಜ ಕರೂದಿ ಸೇರಿದಂತೆ ಕುರುಬ ಸಮಾಜದ ಅನೇಕ ಮುಖಂಡರು ಭಕ್ತಾಧಿಗಳು ಪಾಲ್ಗೊಂಡಿದ್ದರು.ಸಮಾಜ ಸಂಘಟನೆಯನ್ನು ಪೂಜ್ಯರ ಮಾರ್ಗದರ್ಶನದಲ್ಲಿ ನಡೆಸಿಕೊಂಡು ಬಂದಿರುವುದು ಬಹಳ ಸಂತಸ ತಂದಿದೆ. ಜಿಲ್ಲಾ ಮತ್ತು ತಾಲೂಕಿಗೆ ಇಂದು ಹೊಸ ಸಮಿತಿ ರಚನೆ ಆಗಿರುವುದು ಸಂತಸದ ವಿಚಾರ. ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕು. ಸಮಾಜ ಸೇವೆ ಮಾಡುವವರು ಮುಂದೆ ಬರಬೇಕು. ಹುದ್ದೆಗಾಗಿ ಬರುವುದಲ್ಲ. ಸಮಾಜದ ಜನರಿಗೆ ಮಠದ ಸಂದೇಶಗಳನ್ನು ತಲುಪಿಸಬೇಕು. ಸಮಾಜಕ್ಕೆ ಚ್ಯುತಿ ತರದಂತೆ ಸಮಾಜದ ಕೆಲಸ ಮಾಡಿಕೊಂಡು ಹೋಗಬೇಕು. ಆರೋಗ್ಯಕರ ಸಂಘರ್ಷದ ಇದ್ದಾಗ ಸಮಾಜದ ಏಳಿಗೆ ಸಾಧ್ಯ. ಈ ಬಾರಿ ಕಾಗಿನೆಲೆ ಪ್ರಾಧಿಕಾರದಿಂದ ಮೂರು ದಿನಗಳ ಕಾಲ ಕಿತ್ತೂರಾಣಿ ಚನ್ನಮ್ಮ ಉತ್ಸವ ಕಾರ್ಯಕ್ರಮ ಮಾದರಿಯೇ ಕನಕದಾಸರ ಜೀವನ, ಸಾಧನೆ ಕುರಿತು ಕನಕೋತ್ಸವ ಸಮಾರಂಭ ಕಾಗಿನೆಲೆಯಲ್ಲಿಯೇ ಸರ್ಕಾರದಿಂದ ನಡೆಯಲಿದೆ. ಸದ್ಯದಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಮಯ ತಿಳಿಸಲಾಗುವುದು. ಗುರುಗಳಿಗೆ ಹೆಚ್ಚಿನ ಗೌರವ ಬರಬೇಕಾದರೆ ಪ್ರತಿ ಹಳ್ಳಿಯಿಂದ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಕನಕ ಪೀಠಕ್ಕೆ ನ. 8ಕ್ಕೆ ಆಗಮಿಸಿ ಕನಕದಾಸರ ಜಯಂತಿ ಮತ್ತು ರಥೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

PREV

Recommended Stories

ಪ್ರೇಮಿ ಜೊತೆ ಓಡಿ ಹೋದ ಮಗಳ ತಿಥಿ ಮಾಡಿದ ಅಪ್ಪ
ಇಂದು ಮೂರು ಜಿಲ್ಲೆಗಳಲ್ಲಿ ಭಾರೀ ಮಳೆ - ಮುಂದಿನ 3-4 ದಿನ ಹಲವೆಡೆ ಉತ್ತಮ ಮಳೆ