ಸಚಿವ ಸ್ಥಾನಕ್ಕೆ ಪ್ರಯತ್ನ ಮಾಡಿದ್ದೆವು ಅಷ್ಟೇ: ಪ್ರದೀಪ್ ಈಶ್ವರ್

KannadaprabhaNewsNetwork |  
Published : Feb 28, 2026, 01:15 AM IST
ಸಿಕೆಬಿ-7 ಶಾಸಕ ಪ್ರದೀಪ್ ಈಶ್ವರ್ | Kannada Prabha

ಸಾರಾಂಶ

ಬೆಳಗಾವಿ ಅಧಿವೇಶನದಲ್ಲಿ ಸಹಿ ಸಂಗ್ರಹ ನಡೆಯುತ್ತೆ. ನನ್ನ ಸಹಮತವೂ ಇದಕ್ಕೆ ಇತ್ತು. 31 ಜನ ಆಕಾಂಕ್ಷಿಗಳು ಇದ್ದೇವೆ. ನನಗೆ ಕೊಡಿ ಅಂತ ಕೇಳಿಲ್ಲ. ಯಾರಿಗಾದರೂ ಕೊಡಿ ಅಂತ ಮನವಿ ಮಾಡಿದ್ದೇವು ಎಂದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸಚಿವ ಸ್ಥಾನದ ಆಕಾಂಕ್ಷೆಯಿಂದ ನಾವು ಹಿಂದೆ ಸರಿಯುತ್ತಿದ್ದೇವೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.

ನಗರ ಹೊರವಲಯದ ಚೊಕ್ಕಹಳ್ಳಿ ಬಳಿ ನಡೆದ ಕಾರ್ಯಕ್ರಮದ ನಂತರ ಸುದ್ದಿಗಾರರು ಶಾಸಕ ಬಾಲಕೃಷ್ಣ ನೇತೃತ್ವದಲ್ಲಿ ಡಿನ್ನರ್ ಮೀಟಿಂಗ್ ಹಿನ್ನೆಲೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ ಮಾತನಾಡಿ, ಬಾಲಕೃಷ್ಣ ನೇತೃತ್ವದಲ್ಲಿ ಡಿನ್ನರ್ ಮೀಟಿಂಗ್‌ನ ಆ ಕಾರ್ಯಕ್ರಮದ ಬಗ್ಗೆ ಅಭಿಪ್ರಾಯ ಹೇಳುವಂತ ದೊಡ್ಡವನು ನಾನಲ್ಲ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಬಗ್ಗೆ ಪ್ರತಿಕ್ರಿಯೆ ನೀಡುತ್ತಾರೆ ಎಂದರು.

ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ ಶಾಸಕರ ಸಹಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮೊದಲ ಬಾರಿ ಗೆದ್ದ 31 ಶಾಸಕರ ಪೈಕಿ 5 ಜನರಿಗಾದರೂ ಸಚಿವ ಸ್ಥಾನ ಕೊಡಬೇಕು. ಹೀಗಾಗಿ ನಾವೆಲ್ಲರು ಸೇರಿ ಹೈಕಮಾಂಡ್‌ಗೆ ಪತ್ರ ಬರೆದಿದ್ದು ನಿಜ. ಹೌದು ಆ ಪತ್ರಕ್ಕೆ ನಾನು ಸಹಿ ಹಾಕಿದ್ದೇನೆ. ಬೆಳಗಾವಿ ಅಧಿವೇಶನದಲ್ಲಿ ಸಹಿ ಸಂಗ್ರಹ ನಡೆಯುತ್ತೆ. ನನ್ನ ಸಹಮತವೂ ಇದಕ್ಕೆ ಇತ್ತು. 31 ಜನ ಆಕಾಂಕ್ಷಿಗಳು ಇದ್ದೇವೆ. ನನಗೆ ಕೊಡಿ ಅಂತ ಕೇಳಿಲ್ಲ. ಯಾರಿಗಾದರೂ ಕೊಡಿ ಅಂತ ಮನವಿ ಮಾಡಿದ್ದೇವು ಎಂದರು.ನಮ್ಮಲ್ಲಿ ಒಗ್ಗಟ್ಟು ಇದೆ. ನಮ್ಮಲ್ಲಿ 5 ಜನರಿಗೆ ಕೊಡಿ. ರವಿ ಗಣಿಗ, ಪೊನ್ನಣ್ಣ, ಶಿವಗಂಗಾ, ನಯನ ಮೋಟಮ್ಮ, ಮಂಥರ್ ಗೌಡಗಾದರೂ ಕೊಡಿ ಎಲ್ಲರು ಡಿಸರ್ವ್ ಇದ್ದಾರೆ. 31 ಜನರ ವಾದ ಇಷ್ಟೇ. 5 ಜನರಿಗೆ ಕೊಡಿ. ನನಗೂ ಆಸೆ ಇದೆ. ನನಗೆ ಕೊಡದೇ ಹೋದರೂ 5 ಜನರಿಗೆ ಕೊಡಿ. ಯುವಕರಿಗೆ 5 ಸ್ಥಾನ ಕೊಡಬೇಕು. ನನಗೆ ಕೊಟ್ಟರು ಸಂತೋಷ. ಯಾರಿಗಾದ್ರು ಕೊಟ್ಟರು ಸಂತೋಷ. ಕೇಳೋದು ನಮ್ಮ ಹಕ್ಕು. ಹಣೆಯಲ್ಲಿ ಬರೆದಿದ್ದರೆ ಯಾರು ತಪ್ಪಿಸುತ್ತಾರೆ ಎಂದರು.

ಜಾತಿ ಆಧಾರ, ಪ್ರಾದೇಶಿಕ ಆಧಾರದಲ್ಲಿ ಅರ್ಹರು ಇದ್ದಾರೆ. ಈಗ ಲೀಸ್ಟ್‌ನಲ್ಲಿ ಇರೋರು ದೊಡ್ಡ ದೊಡ್ಡ ವಿಕೆಟ್‌ಗಳನ್ನ ಉರುಳಿಸಿರೋದು. ಚಿಕ್ಕಬಳ್ಳಾಪುರ ನಾನೂ ಸಹ ದೊಡ್ಡ ವಿಕೆಟ್ ಅನ್ನೇ ಹೊಡೆದಿರೋದು. ನನಗೂ ಆಸೆ ಇದೆ. ಮಂತ್ರಿ ಆಗೋ ಆಸೆ ಇದೆ, ತಪ್ಪಲ್ಲ. ಕೊಡೋದು ಬಿಡೋದು ಪಕ್ಷಕ್ಕೆ ಬಿಟ್ಟಿದ್ದು. ಪ್ರಿಯಾಂಕ್ ಖರ್ಗೆ ತಂದೆ ನೆರಳಿಂದ ಹೊರಗೆ ಬಂದು ಗೆದ್ದಿರೋರು. ಅವರು ಡೈನಾಮಿಕ್ ಸಚಿವರು. ಅವರಿಗೆ ಅರ್ಹತೆ ಇದೆ. ಅದಕ್ಕೆ ಸಚಿವ ಸ್ಥಾನ ಕೊಟ್ಟಿದ್ದಾರೆ.

ನನಗೆ ಯಾವುದೇ ಹಿನ್ನೆಲೆ ಇಲ್ಲ. ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡು ಬಂದರು. ನಮ್ಮಲ್ಲಿ 5 ಜನರಿಗೆ ಕೊಡಲಿ ಎಂದು ನಾನು ಕೂಡ ಸಹಿ ಮಾಡಿ ಸಚಿವ ಸ್ಥಾನಕ್ಕಾಗಿ ಆಗ್ರಹ ಮಾಡಿದ್ದೆ. ಮೊದಲ ಬಾರಿ ಆಯ್ಕೆಯಾದ ಶಾಸಕರ ಪೈಕಿ 5 ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂಬುದು ನಮ್ಮ ಒತ್ತಾಯವಾಗಿತ್ತು. ಆ ಐದು ಮಂದಿಯಲ್ಲಿ ನನ್ನ ಹೆಸರೂ ಸಹ ಇತ್ತು. ಆದರೆ ನಿನ್ನೆ ಸಿಎಂ ಸಿದ್ದರಾಯ್ಯ ಅವರು ಸ್ಪಷ್ಟಪಡಿಸಿದ್ದಾರೆ. ಮೊದಲ ಬಾರಿ ಆಯ್ಕೆಯಾದ ಶಾಸಕರಿಗೆ ಸಚಿವ ಸ್ಥಾನ ಇಲ್ಲ ಅಂತ. ಹೀಗಾಗಿ ನಮಗೆ ಸಚಿವ ಸ್ಥಾನ ಸಿಗುವುದಿಲ್ಲ ಎಂಬುದು ಖಾತ್ರಿಯಾಗಿದೆ. ನಾವು ಒಂದು ಪ್ರಯತ್ನ ಮಾಡಿದ್ದೆವು ಅಷ್ಟೇ ,

ಸಚಿವ ಸ್ಥಾನ ಸಿಗಲಿಲ್ಲ ಅಂತ ನಮಗೆ ಯಾರಿಗೂ ನಿರಾಸೆ ಇಲ್ಲ. ಹಿರಿಯ ಶಾಸಕರಿಗೆ ಮಾತ್ರ ಸಚಿವ ಸ್ಥಾನ ನೀಡಬೇಕೆಂಬುದು ಒಳ್ಳೆಯ ತೀರ್ಮಾನ. ಪಕ್ಷದ ತೀರ್ಮಾನಕ್ಕೆ ತಲೆಬಾಗಿ ಸಚಿವ ಸ್ಥಾನದ ಆಕಾಂಕ್ಷೆಯಿಂದ ನಾವು ಹಿಂದೆ ಸರಿಯುತ್ತಿದ್ದೇವೆ. ಈಗ ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರ ಪರ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ನಮ್ಮ ಜಿಲ್ಲೆಯಿಂದ ಎಸ್.ಎನ್.ಸುಬ್ಬಾರೆಡ್ಡಿ ಅಣ್ಣನವರಿಗೆ, ನಮ್ಮ ಜನಾಂಗದಿಂದ ಎಂ.ಆರ್.ಸೀತಾರಾಮ್ ರಿಗೆ ಸಚಿವ ಸ್ಥಾನ ನೀಡಲಿ ಎಂದು ತಿಳಿಸಿದರು.ಸಿಕೆಬಿ-7 ಶಾಸಕ ಪ್ರದೀಪ್ ಈಶ್ವರ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜಕೀಯ ಸ್ಥಾನಮಾನ ಶಾಶ್ವತವಲ್ಲ: ಬಿ.ಜಿ.ಗೋವಿಂದಪ್ಪ
ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವಾ ಬದ್ಧತೆಗೆ ಶಿಬಿರ ಸಹಕಾರಿ : ತಸ್ನೀಮ್