ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಶನಿವಾರ ಕಾಲೇಜಿನ ಕನ್ನಡ ಸಾಹಿತ್ಯ ವೇದಿಕೆ, ವಿದ್ಯಾರ್ಥಿ ಸಾಂಸ್ಕೃತಿಕ ಸಂಘ ಸಹಯೋಗದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಕಾರಾತ್ಮಕ ಸಾಹಿತ್ಯದಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದರು.
ಸಾಹಿತ್ಯ ಎಂದರೆ ಮನಸ್ಸನ್ನು ಮುದಗೊಳಿಸಬೇಕು. ಭಾಷೆಗೂ ಸಾಹಿತ್ಯಕ್ಕೂ ಅವಿನಾಭಾವ ಸಂಬಂಧವಿದೆ. ಕನ್ನಡ ಭಾಷೆಗೂ ಅಷ್ಟೇ. ಒಂದು ಅಸ್ಮಿತೆ, ಶ್ರೇಷ್ಠತೆ, ವೈಜ್ಞಾನಿಕತೆ ಇದೆ. ಇಂದು ಓದುವವರಿಗಿಂತ ಬರೆಯುವವರ ಸಂಖ್ಯೆ ಹೆಚ್ಚಾಗಿದೆ ಎಂದರು.ಕಸ್ತೂರಬಾ ಬಾಲಕಿ ಪ್ರೌಢಶಾಲೆಯ ಕನ್ನಡ ಶಿಕ್ಷಕ ಡಾ. ಬಿ.ಎನ್. ತಂಬುಳಿ ಮಾತನಾಡಿ, ಕನ್ನಡಿಗರು ಸ್ವಾಭಿಮಾನಿಗಳು. ಇಲ್ಲಿ ಗಂಭೀರತೆ ಇದೆ, ಉದಾರತೆ ಇದೆ. ಕವಿಗಳಿದ್ದಾರೆ. ಕಾವ್ಯಗಳಿವೆ, ಶಿಲ್ಪಗಳಿವೆ. ವಿಶ್ವದಲ್ಲಿಯೇ ಶ್ರೇಷ್ಠವಾದ ಈ ಭಾಷೆಯನ್ನು ಅಕ್ಷರ ಕಲಿತವರು ಬೆಳೆಸಬೇಕಾಗಿದೆ ಎಂದರು.
ವಿಜ್ಞಾನ, ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳಿಗಿಂತ ಕಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿ ಇರುತ್ತದೆ. ಕನ್ನಡ ಭಾಷೆ ಬಗ್ಗೆ ಅಭಿಮಾನ ಇರುತ್ತದೆ. ಇಂದಿನ ಯುವಸಮುದಾಯ ಕನ್ನಡಕ್ಕಾಗಿ ಕಂಕಣಬದ್ಧ ಆಗಿರುವುದು ಕಂಡುಬರುತ್ತದೆ. ಗಾಂಚಾಲಿ ಬಿಡಿ. ಕನ್ನಡ ಮಾತನಾಡಿ ಎಂದು ಸ್ಪಷ್ಟವಾದ ಧ್ವನಿಯಲ್ಲಿ ನಮ್ಮ ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಪಾಸಾಗಿರುವುದು ಕಲಾ ಕಾಲೇಜಿನ ವಿದ್ಯಾರ್ಥಿಗಳೇ ಎಂದರು.
ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಕೆ.ಎನ್. ಮಂಜುನಾಥ್, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮೋಹನ್ ಚಂದ್ರಗುತ್ತಿ, ಪ್ರಾಧ್ಯಾಪಕ ಡಾ. ಎಚ್.ಎಸ್. ಪ್ರಕಾಶ್, ಪ್ರಾಧ್ಯಾಪಕರಾದ ರಮೇಶ್‌ಕುಮಾರ್, ಲವ, ಸಿರಾಜ್ ಅಹ್ಮದ್, ಮೇಟಿ ಮಲ್ಲಿಕಾರ್ಜುನ, ಕೃಪಲಾನಿ, ಮಹದೇವಸ್ವಾಮಿ ಸೇರಿದಂತೆ ಹಲವರಿದ್ದರು.
ಕೋಟ್ ಕನ್ನಡವನ್ನು ಬಳಸುವ ಮೂಲಕ ಉಳಿಸಬೇಕಾಗಿದೆ. ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಹೆಚ್ಚಾಗಬೇಕು. ಪುಸ್ತಕ ಪ್ರೀತಿ ಇಂದು ಮರೆಯಾಗುತ್ತಿದೆ. ಒಳ್ಳೆಯ ಆಲೋಚನೆಗಳು ಅಕ್ಷರರೂಪಕ್ಕೆ ಬಂದಾಗ ಒಳ್ಳೆಯ ಸಾಹಿತ್ಯ ಸೃಷ್ಟಿಯಾಗಲು ಸಾಧ್ಯ. ಆಗ ಮಾತ್ರ ರನ್ನಡ ಭಾಷೆ ಬೆಳೆಯಲು ಸಾಧ್ಯ
- - - -25ಎಸ್‌ಎಂಜಿಕೆಪಿ01: