ಇನ್ನೊಮ್ಮೆ ಶಿವಾಜಿ ಜಯಂತಿ ಮಾಡ್ತೇವೆ: ಶಾಸಕ ಯತ್ನಾಳ

KannadaprabhaNewsNetwork |  
Published : Feb 24, 2026, 04:15 AM IST
    (ಫೋಟೊಬಿಕೆಟಿ4,  ಗಾಯಾಳು ಹಿಂದು ಕಾರ್ಯಕರ್ತ ದಾಖಲಾಗಿರುವ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ವಿಜಯಪುರ ಶಾಸಕ  ಬಸನಗೌಡ ಪಾಟೀಲ್ ಯತ್ನಾಳ್) | Kannada Prabha

ಸಾರಾಂಶ

ಬಾಗಲಕೋಟೆಯಲ್ಲಿ ಇನ್ನೊಮ್ಮೆ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮಾಡುತ್ತೇವೆ. ಅಷ್ಟರೊಳಗೆ ನನೆಗುದಿಗೆ ಬಿದ್ದಿರುವ ಆ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಕೂರಬೇಕು. ಇಲ್ಲದಿದ್ದರೆ ಎಷ್ಟು ಗೋಲಿಬಾರ್ ಮಾಡುತ್ತಿರೋ ಮಾಡಿ. ನಾವು ಮೂರ್ತಿ ಕೂರಿಸಿಯೇ ಕೂರಿಸುತ್ತೇವೆ ಎಂದು ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸವಾಲು ಹಾಕಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆಯಲ್ಲಿ ಇನ್ನೊಮ್ಮೆ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮಾಡುತ್ತೇವೆ. ಅಷ್ಟರೊಳಗೆ ನನೆಗುದಿಗೆ ಬಿದ್ದಿರುವ ಆ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಕೂರಬೇಕು. ಇಲ್ಲದಿದ್ದರೆ ಎಷ್ಟು ಗೋಲಿಬಾರ್ ಮಾಡುತ್ತಿರೋ ಮಾಡಿ. ನಾವು ಮೂರ್ತಿ ಕೂರಿಸಿಯೇ ಕೂರಿಸುತ್ತೇವೆ ಎಂದು ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸವಾಲು ಹಾಕಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಾಜಿ ಹಾಗೂ ಬಸವೇಶ್ವರ ಮೂರ್ತಿ ನೋಡಿ ಬಂದಿದ್ದೇವೆ. ಸುಪ್ರೀಂ ಕೋರ್ಟ್‌ ಏನು ಹೇಳಿದೆ, ಸಾರಿಗೆಗೆ ತೊಂದರೆಯಾಗದಂತೆ ಕೂರಿಸಬಹುದು ಅಂತ ಹೇಳಿದೆ. ಅವುಗಳನ್ನು ಕೂರಿಸಬೇಕು. ನಾವು ವಿಜಯಪುರದಲ್ಲಿ ರಸ್ತೆಯಲ್ಲೇ ಸಾರಿಗೆಗೆ ತೊಂದರೆಯಾಗದಂತೆ ಕೂರಿಸಿದ್ದೇವೆ. ಎಲ್ಲ ಸಮಾಜದಲ್ಲಿ ಕಿಡಿಗೇಡಿಗಳು ಇದ್ದೇ ಇರ್ತಾರೆ. ಅದಕ್ಕೆ ತಲೆಗೊಡದೆ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಕೊಡಿ ಎಂದು ಒತ್ತಾಯಿಸಿದರು.

ಹಿಂದೂಗಳ ಮೇಲೆ ದಬ್ಬಾಳಿಕೆ ಮಾಡುವಂತದ್ದಲ್ಲ. ಆ ಕಡೆಯ ಇನ್ನಷ್ಟು ಜನರನ್ನು ಬಂಧಿಸಬೇಕು. ತಿಮ್ಮಾಪುರ ಅವರಿಗೆ ಬರಿ ಸಾಬರಷ್ಟೇ ಓಟ್ ಹಾಕಿಲ್ಲ. ಎಲ್ಲರೂ ಮತ ಹಾಕಿದ್ದಾರೆ. ಬರಿ ಒಂದು ಕಡೆಯವರನ್ನು ಕರೆದು ಶಾಂತಿ ಸಭೆ ಮಾಡಬೇಡಿ. ನಾನು ಬರುವ ಬಜೆಟ್ ಅಧಿವೇಶನದಲ್ಲಿ ಬಾಗಲಕೋಟೆ ಪ್ರಕರಣ ಬಗ್ಗೆ ಮಾತಾಡುತ್ತೇನೆ. ಬರಿ ಬಾಗಲಕೋಟೆ ಅಷ್ಟೇ ಅಲ್ಲ ಇಡೀ ರಾಜ್ಯದ ಬಗ್ಗೆ ಮಾತಾಡುತ್ತೇನೆ ಎಂದರು.

ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಆದಷ್ಟು ಬೇಗ ಇದನ್ನು ಸರಿಪಡಿಸುವ ಕೆಲಸ ಆಗಬೇಕಿದೆ. ಮಸೀದಿಯಲ್ಲಿ ಉತ್ತರ ಭಾರತದಿಂದ ಬಂದವರಿಂದ ಲವ್ ಜಿಹಾದ್ ಸೇರಿದಂತೆ ಪ್ರಚೋದನಕಾರಿ ಕೃತ್ಯ ಆಗುತ್ತಿದೆ ಎಂದು ಅವರು ದೂರಿದರು.

ಜಯಂತಿ ಮೆರವಣಿಗೆ ಮಾಡೋದು ನಮ್ಮ ಸಂಪ್ರದಾಯ. ಅನೇಕ ಸತ್ಪುರುಷರ ಕಾರ್ಯಕ್ರಮಗಳು ದೇಶದಲ್ಲಿ ನಡೆಯುತ್ತವೆ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮುಸ್ಲಿಮರಿಗೆ ಮದ ಬಂದಿದೆ. ನಾವು ಏನು ಮಾಡಿದರೂ ಯಾರು ಕೇಳೋದಿಲ್ಲ ಎನ್ನುವಂತಾಗಿದೆ ಅವರಿಗೆ. ವ್ಯವಸ್ಥಿತವಾಗಿ ದೇಶದಲ್ಲಿ ಹಿಂದು ಕಾರ್ಯಕ್ರಮದಲ್ಲಿ ಮುಸ್ಲಿಮರಿಂದ ಗಲಾಟೆ, ಕಲ್ಲು, ಚಪ್ಪಲಿ ಎಸೆದವರು ಅವರು. ಐಪಿಎಸ್‌ ಅಧಿಕಾರಿ ಮೇಲೆ ಕಲ್ಲು ಎಸೆಯುತ್ತಾರೆ. ಆ ಸಂದರ್ಭದಲ್ಲಿ ಅವರದ್ದು ಅಲ್ಲಿ ಏನು ಕೆಲಸ ಇತ್ತು ಎಂದು ಅವರು ಪ್ರಶ್ನಿಸಿದರು.ಹಿಂದು ಮೆರವಣಿಗೆ ವೇಳೆ ಆ ಭಾಗದ ಮಸೀದಿಗಳನ್ನು ಸೀಜ್ ಮಾಡಬೇಕು. ಮಸೀದಿ ಒಳಗಡೆ ರಾಡ್ ಇಟ್ಟಿದ್ದರು ಎಂದು ಪೊಲೀಸ್‌ ಮೂಲದಿಂದಲೇ ತಿಳಿದುಬಂದಿದೆ. ವಿಧಾನಸೌಧದಲ್ಲಿ ಮುಂದೆ ಬರಿ ಅವರೆ ಇರುತ್ತಾರೆ. ಪಾಕಿಸ್ತಾನ ವಿಧಾನಸೌಧವೋ ಭಾರತದ ವಿಧಾನಸೌಧವೋ ಎಂದು ಕನ್‌ಫ್ಯೂಸ್ ಆಗುತ್ತಿದೆ. ಪಂಕಾ ಮಸೀದಿ ಜಮಾತ್‌ನವರನ್ನು ಎಷ್ಟು ಜನರ ಅರೆಸ್ಟ್ ಮಾಡಿದಿರಿ? ಮೌಲ್ವಿಗಳನ್ನು ಏನು ಮಾಡಿದಿರಿ? ಆ ಕಡೆ ಎಂಟು ಜನ ಈ ಕಡೆ ಎಂಟು ಜನ ಅರೆಸ್ಟ್ ಮಾಡುತ್ತಾರಂತೆ. ಇದೇನು ವ್ಯಾಪಾರ ಮಾಡುತ್ತಿದ್ದೀರಾ? ಪೊಲೀಸರ ಮೇಲೆ ಸರ್ಕಾರದ ಒತ್ತಡ ಇದೆ. ಮಸೀದಿ ಮೇಲೆ ಹಿಂದು ಕಾರ್ಯಕರ್ತರು ಕಲ್ಲು ಎಸೆದಿದ್ದಾರೆ. ಎಸೆದರೆ ದಾಖಲೆ ಕೊಡಿ. ಯಾರೇ ತಪ್ಪು ಮಾಡಿದರೂ ಕ್ರಮ ಕೈಗೊಳ್ಳಿ. ಅವರು ಬಿರಿಯಾನಿ ಮಾಡೋದಕ್ಕೆ ಕೋತಂಬರಿ ತರೋದಕ್ಕೆ ಹೋಗ್ತಾರೆ. ಅದಕ್ಕೆ ತರಕಾರಿ ಮಾರುಕಟ್ಟೆ ಎಲ್ಲ ಅಂಗಡಿ ಆರಂಭಿಸಿ ಎಂದು ವ್ಯಂಗ್ಯವಾಡಿದರು.

ಬಾಗಲಕೋಟೆ ಇದು ಪಾಕಿಸ್ತಾನದಲ್ಲಿದೆಯೋ ಭಾರತದಲ್ಲಿದೆಯೋ, ಒಂದು ಕಲ್ಲು ಗಾಯಾಳುಗಳ ದೇಹದ ಒಳಗೆ ಇದೆ. ಎಷ್ಟು ಜೋರು ಎಸೆದಿರಬಹುದು ಎಂದು ಪ್ರಶ್ನೆ ಮಾಡಿದರು.

ಮಸೀದಿ ಅಧಿಕೃತವಾ ಪರಿಶೀಲನೆ ಮಾಡಿ: ಪಂಕಾ ಮಸೀದಿ ಅಧಿಕೃತ ಇದೆಯಾ ಇಲ್ಲವಾ ಎಂದು ಪರಿಶೀಲಿಸಿ ಎಂದು ಹೇಳಿದ ಯತ್ನಾಳ, ಶಾಂತಿ ಸಭೆಗೆ ಅವರು ಬಾರದಿದ್ದರೆ ಅವರ ಮೇಲೆ ಆ್ಯಕ್ಷನ್ ತೆಗೆದುಕೊಳ್ಳಿ. ಇದೇ ರೀತಿ ಉದ್ದಟತನ ಮುಂದುವರಿದರೆ ಶಾಂತಿ ಭಂಗ ಆಗಿದ್ದು ಅವರಿಂದನೆ. ಯಾರು ತಪ್ಪಿತಸ್ಥ ಇದಾರೆ ಬಂಧನ ಮಾಡಿ ಎಂದು ಹೇಳಿದರು.

ಅವರಿಗೆ ಗದ್ದ ತುಟಿ ಹಿಡಿದು ಐಸಾ ಮತ್ ಕರೊ ಅಂತಾರೆ. ನಮ್ಮವರ ಮೇಲೆ ಲಾಠಿ ಚಾರ್ಜ್‌ ಮಾಡ್ತಾರೆ. ಇದು ಮುಂದೆ ಮತ್ತಷ್ಟು ಅನಾಹುತಕ್ಕೆ ಕಾರಣ ಆಗುತ್ತದೆ. ಮಸೀದಿ ಮೌಲ್ವಿ ಮೇಲೆ ಕೇಸ್ ಹಾಕಿ. ಗೂಂಡಾ ಆ್ಯಕ್ಟ್ ಹಾಕಿ ಬಂಧಿಸಿದವರ ಮೇಲೆ ಏನು ಮಾಡಿದ್ದೀರಿ? ಅವರಿಗೆ ಬಿರಿಯಾನಿ ತಿನಿಸ್ತಾ ಇದಿರಿ ಎಂದು ವಾಗ್ದಾಳಿ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿ ಭ್ರಷ್ಟಾಚಾರದ ಕೂಪವಿದ್ದಂತೆ
ದೇಶ ಉಳಿಯಲು ಎಲ್ಲ ಹಿಂದೂಗಳು ಗಟ್ಟಿಯಾಗಿ