ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೆರಿಸುತ್ತೇವೆ

KannadaprabhaNewsNetwork | Published : Dec 23, 2023 1:45 AM

ಸಾರಾಂಶ

ನವನಗರದ ಜಿಲ್ಲಾಡಳಿತ ಭವನದ ಎದುರು ಹಲವು ದಿನಗಳಿಂದ ನಡೆಸುತ್ತಿರುವ ಅತಿಥಿ ಉಪನ್ಯಾಸಕರ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಶುಕ್ರವಾರ ಸಾಯಂಕಾಲ ಜಿಲ್ಲಾ ಉಸ್ತುವಾರಿ ಸಚಿವ ಆರ್‌ .ಬಿ. ತಿಮ್ಮಾಪೂರು ಭೇಟಿ ನೀಡಿ, ಅತಿಥಿ ಉಪನ್ಯಾಸಕರಿಂದ ಮನವಿ ಸ್ವೀಕರಿಸಿ, ಅವರ ಬೇಡಿಕೆ, ಸಮಸ್ಯೆಗಳನ್ನು ಆಲಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಸುಮಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆಗಳಿಗೆ ಸಂಬಂಧಿಸಿದಂತೆ ನಮ್ಮ ಸರ್ಕಾರವು ನುಡಿದಂತೆ ನಡೆಯುತ್ತೇವೆ. ಅವರ ಬೇಡಿಕೆಗಳನ್ನು ಈಡೆರಿಸುತ್ತೇವೆ ನಮ್ಮ ಸರ್ಕಾರದ ಮೇಲೆ ವಿಶ್ವಾಸವಿರಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌ .ಬಿ. ತಿಮ್ಮಾಪೂರು ಹೇಳಿದರು.

ನವನಗರದ ಜಿಲ್ಲಾಡಳಿತ ಭವನದ ಎದುರು ಹಲವು ದಿನಗಳಿಂದ ನಡೆಸುತ್ತಿರುವ ಅತಿಥಿ ಉಪನ್ಯಾಸಕರ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಶುಕ್ರವಾರ ಸಾಯಂಕಾಲ ಭೇಟಿ ನೀಡಿ, ಅತಿಥಿ ಉಪನ್ಯಾಸಕರಿಂದ ಮನವಿ ಸ್ವೀಕರಿಸಿ, ಅವರ ಬೇಡಿಕೆ, ಸಮಸ್ಯೆಗಳನ್ನು ಆಲಿಸಿದರು. ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಚುನಾವಣೆ ಪ್ರಣಾಳಿಕೆಯಲ್ಲಿ ಅತಿಥಿ ಉಪನ್ಯಾಸಕರ ವಿಷಯ ಕುರಿತು ಪ್ರಕಟಿಸಿದ್ದೇವೆ. ಅದರಂತೆ ಈಗ ರಾಜ್ಯದಲ್ಲಿ ನಮ್ಮ ಕಾಂಗ್ರಸ್ ಪಕ್ಷದ ಜನಪರ ಸರ್ಕಾರ ಇದೆ. ಅತಿಥಿ ಉಪನ್ಯಾಸಕರ ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ತಂದು ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕೊಡಿಸುವ ಪ್ರಯತ್ನ ಮಾಡುತ್ತೇವೆ. ನಾವು ಸಾಮಾಜಿಕ ನ್ಯಾಯದ ಪರವಾಗಿದ್ದೇವೆ. ಬಹುದಿನಗಳ ಬೇಡಿಕೆಯಾದ ಅತಿಥಿ ಉಪನ್ಯಾಸಕರ ಸೇವಾ ಭದ್ರತೆ, ಖಾಯಮಾತಿ ಕುರಿತು ನಮ್ಮ ಸರ್ಕಾರವು ಅತಿಥಿ ಉಪನ್ಯಾಸಕರಿಗೆ ಒಳ್ಳೆಯದು ಮಾಡುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ಸದಸ್ಯ ಡಾ. ಚಂದ್ರಶೇಖರ ಕಾಳನ್ನವರ, ಪ್ರೊ.ಸಂಗಮೇಶ ಬ್ಯಾಳಿ, ಡಾ.ಮನೋಹರ ಪೂಜಾರ, ಭಾರತಿ ರಾಠೋಡ, ವಿಜಯಕುಮಾರ ಗಂಗಲ್, ಮುತ್ತು ಬಡಿಗೇರ, ಹನಮಂತ ಬೋವಿ, ಗುರುರಾಜ ರಾಠೋಡ, ಶಶಿಧರ ಪುಜಾರ, ಸುನೀಲ ಮಠಪತಿ, ಭಾರತಿ ರಾಠೋಡ, ಕರಿಗೌಡರ, ನಾರಾಯಣ ಪತ್ತಾರ, ಮತ್ತು ಬಾಗಲಕೋಟೆಯ ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಎಲ್ಲಾ ಅತಿಥಿ ಉಪನ್ಯಾಸಕರು 30 ನೇ ದಿನದ ಹೋರಾಟದಲ್ಲಿ ಪಾಲ್ಗೊಂಡಿದ್ದರು.

Share this article