ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಈಡೇರಿಸುತ್ತೇವೆ: ಸಚಿವ ಸತೀಶ

KannadaprabhaNewsNetwork |  
Published : Apr 27, 2024, 01:23 AM ISTUpdated : Apr 27, 2024, 10:36 AM IST
ಸಚಿವ ಸತೀಶ ಜಾರಕಿಹಳಿ ಸಮ್ಮುಖದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು | Kannada Prabha

ಸಾರಾಂಶ

 ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ವಿಧಾನಸಭೆ ಚುನಾವಣೆಯಲ್ಲಿ ಭರವಸೆ ನೀಡಿದಂತೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಜನರ ಸಂಕಷ್ಟಕ್ಕೆ ನೆರವಾಗಿದ್ದೇವೆ.  

 ಗೋಕಾಕ:  ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ವಿಧಾನಸಭೆ ಚುನಾವಣೆಯಲ್ಲಿ ಭರವಸೆ ನೀಡಿದಂತೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಜನರ ಸಂಕಷ್ಟಕ್ಕೆ ನೆರವಾಗಿದ್ದೇವೆ. ಅದೇ ರೀತಿ ಲೋಕಸಭೆ ಚುನಾವಣೆಯಲ್ಲಿಯೂ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೇ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ಭರವಸೆ ನೀಡಿದರು.

ನಗರದ ಹಿಲ್‌ ಗಾರ್ಡನ್‌ ಕಚೇರಿಯಲ್ಲಿ ಯಮಕನಮರಡಿ ವಿಧಾನಸಭಾ ಕ್ಷೇತ್ರದ ರಾಜಕಟ್ಟಿ ಹಾಗೂ ಶಿರೂರ ಗ್ರಾಮದ ನೂರಾರು ಬಿಜೆಪಿ ಕಾರ್ಯಕರ್ತರಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಅವರು, ಚಿಕ್ಕೋಡಿ ಲೋಕಸಭೆ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರನ್ನು ಆಯ್ಕೆಮಾಡುವ ಮೂಲಕ ಕೇಂದ್ರದಲ್ಲಿಯೂ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಕೋರಿದರು.

ಈ ಸಂದರ್ಭದಲ್ಲಿ ರಾಜಕಟ್ಟಿ, ಶಿರೂರ ಗ್ರಾಮದ ನೂತನ ಕಾರ್ಯಕರ್ತರಾದ ರಾಜಕುಮಾರ್ ಪೂಜೇರಿ, ನಾಗಪ್ಪ ಪೂಜೇರಿ, ಈರಪ್ಪ ಮ್ಯಾಕಲಿ, ದಾನಪ್ಪ ಪೂಜೇರಿ, ಸಿದಪ್ಪ ಪೂಜೇರಿ, ಯಲ್ಲಪ್ಪ ಕಾರಣವರ, ಕಲ್ಲಪ್ಪ ಕುಪಾನಿ, ಯಲ್ಲಪ್ಪ ಹಂಜಿನಮಣಿ, ಭೀಮರಾಯಿ ಧಾಧಿಕಾನ್, ಪ್ರಿಯಾ ಧಾಧಿಕಾನ್, ಕಲ್ಲಪ್ಪ ಬುಸಾರಿ, ನಾಗಪ್ಪ ಧಾಧಿಕಾನ್, ಮಾರುತಿ ಧಾಧಿಕಾನ್, ಬಸವರಾಜ್ ಇರಭಾವಿ, ಮಾರುತಿ ಇರಭಾವಿ, ಕೀರನ ಬುಸಾರಿ, ಪರುಶುರಾಮ್ ಧಾಧಿಕಾನ್, ಕೀರನ ಧಾದಿಕಾನ್, ಬಸುರಾಜ ಸುಟಕ, ಬಸುರಾಜ ಕುಂಬಾರ, ಸಿದ್ರು ಗುದ್ಯಾಗೋಳ ಸೇರಿದಂತೆ ಕಾಂಗ್ರೆಸ್ ಮುಖಂಡರಾದ ಭೀಮರಾಯಿ ಭೀಜನಾಯಿಕ್, ಯಲ್ಲಪ್ಪ ನಾಯಿಕ್, ಮಾರುತಿ ಧಾಧಿಕಾನ್, ಗಿರೀಶ್ ಪಾಟೀಲ್, ಲಕ್ಷ್ಮಣ್ ನಾಯಕ್, ಯಲ್ಲಪ್ಪ ಬುಸಾರಿ, ಬಸು ಪೂಜೇರಿ, ಬಸವಣ್ಣಿ ಬೀಜನಾಯಿಕ್, ಯಲ್ಲಪ್ಪ ಹುಲೀಕಟ್ಟಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು