ಕನ್ನಡಿಗರ ಮೇಲಿನ ದಾಳಿ, ಅವಮಾನ ಸಹಿಸಲ್ಲ; ಸೋಂಪುರ

KannadaprabhaNewsNetwork |  
Published : Nov 02, 2026, 03:30 AM IST
ಗಜೇಂದ್ರಗಡ ತಹಸೀಲ್ದಾರ್ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. | Kannada Prabha

ಸಾರಾಂಶ

ಎಲ್ಲರನ್ನು ಪ್ರೀತಿಸುವ ಕನ್ನಡಿಗರ ಮೇಲಿನ ದಾಳಿ ಹಾಗೂ ಅವಮಾನವನ್ನು ನಾವು ಎಂದಿಗೂ ಸಹಿಸುವುದಿಲ್ಲ.

ಕನ್ನಡಪ್ರಭ ವಾರ್ತೆ ಗಜೇಂದ್ರಗಡ

ಎಲ್ಲರನ್ನು ಪ್ರೀತಿಸುವ ಕನ್ನಡಿಗರ ಮೇಲಿನ ದಾಳಿ ಹಾಗೂ ಅವಮಾನವನ್ನು ನಾವು ಎಂದಿಗೂ ಸಹಿಸುವುದಿಲ್ಲ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದ ಅಧ್ಯಕ್ಷ ಎಚ್.ಎಸ್. ಸೋಂಪುರ ಹೇಳಿದರು.

ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಕರವೇ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದಿಂದ ರವಿವಾರ ನಡೆದ ೭೧ನೇ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಅವರು, ಜತ್ತಿಗನಲ್ಲಿ ನೀರು ಎಂದು ಬೇಡಿದವರಿಗೆ ಮಜ್ಜಿಗೆ ನೀಡಿದವ ಸಂಸ್ಕೃತಿ ನಮ್ಮದು. ಮುತ್ತು, ರತ್ನಗಳನ್ನು ಬೀದಿಯಲ್ಲಿ ಅಳೆದ ಮಾರಾಟ ಮಾಡಿದ ಇತಿಹಾಸ ಕನ್ನಡಿಗರ ವಿಜಯನಗರ ಸಾಮ್ರಾಜ್ಯದ್ದು. ಕನ್ನಡಿಗರು ಎಂದರೆ ನಾಯಿ, ನರಿಗಳ ಜತೆಗೆ ಸೆಣಸಾಟ ಮಾಡಿದವರಲ್ಲ, ಹುಲಿ, ಸಿಂಹಗಳ ಸೆಣಸಾಟ ನಡೆಸಿದ ಮಯೂರ ಹಾಗೂ ಟಿಪ್ಪು ಸುಲ್ತಾನ ಶೌರ್ಯ ಹಾಗೂ ಪರಾಕ್ರಮವನ್ನು ಬ್ರಿಟಿಷರು ಹೆಚ್ಚಾಗಿ ಅರಿತಿದ್ದರು ಎಂದ ಅವರು, ಭಾವ್ಯಕ್ಯತೆಯ ತವರೂರಾದ ನಮ್ಮ ಪಟ್ಟಣ, ಅಂದಾನಪ್ಪ ದೊಡ್ಡಮೇಟಿ, ಆಲೂರು ವೆಂಕಟರಾಯರು, ಪಂಡಿತ ಪುಟ್ಟರಾಜರು, ಭೀಮಸೇನ ಜೋಶಿ ಸೇರಿ ಅನೇಕ ಮಹಾನ್ ಕನ್ನಡಿಗರ ಜಿಲ್ಲೆಯವರು ನಾವು ಎನ್ನಲು ಹೆಮ್ಮೆಯಿದೆ ಎಂದರು.

ರೋಣ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ ಮಾಟೀಲ ಮಾತನಾಡಿ, ಸ್ವಾತಂತ್ರ್ಯದ ಹೋರಾಟದಿಂದ ಹಿಡಿದು ಕರ್ನಾಟಕ ಏಕೀಕರಣದ ಇತಿಹಾಸ ಸ್ಮರಣೀಯವಾದದ್ದು. ಕನ್ನಡಿಗರು ಸೌಹಾರ್ದತೆ ಬಯಸುವವರು. ಆದರೆ ನೆಲ,ಜಲ, ಗಡಿ ಹಾಗೂ ಭಾಷೆಯ ವಿಷಯದಲ್ಲಿ ಕನ್ನಡಿಗರು ರಾಜಿರಹಿತ ಹೋರಾಟಗಳನ್ನು ನಡೆಸಿದ್ದಾರೆ. ಇಂದಿನ ಯುವ ಸಮೂಹಕ್ಕೆ ಕರ್ನಾಟಕ ಏಕೀಕರಣದ ಸ್ಮರಣೆಯ ಜತೆಗೆ ನೆಲ, ಜಲ ಹಾಗೂ ಭಾಷಾಭಿಮಾನದ ಬಗೆಗಿನ ಕನ್ನಡಗಿರ ಜವಾಬ್ದಾರಿ ತಿಳಿಸಿಕೊಡುವ ಅಗತ್ಯವಿದೆ ಎಂದರು.

ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ, ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಕನ್ನಡ ಭಾಷೆ ವಿಶ್ವದಲ್ಲೇ ಅತ್ಯಂತ ಶ್ರೀಮಂತಿಕೆಯ ಭಾಷೆಯಾಗಿದೆ. ಇಂತಹ ಭಾಷೆಯ ಬಳಕೆ ನಮ್ಮ ಆಡಳಿತ ಹಾಗೂ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.

ಮುಖಂಡರಾದ ಅಶೋಕ ಬಾಗಮಾರ, ಶಿವರಾಜ ಘೋರ್ಪಡೆ ಹಾಗೂ ಶರಣಪ್ಪ ರೇವಡಿ ಮಾತನಾಡಿದರು.

ಪುರಸಭೆ ಮಾಜಿ ಅಧ್ಯಕ್ಷ ಸುಭಾಸ ಮ್ಯಾಗೇರಿ, ತಾಪಂ ಮಾಜಿ ಉಪಾಧ್ಯಕ್ಷ ಶಶಿಧರ ಹೂಗಾರ, ಪಿಎಸ್‌ಐ ಪ್ರವೀಣಕುಮಾರ ಗರೇಬಾಳ, ಮಾಜಿ ಸದಸ್ಯ ರಾಜು ಸಾಂಗ್ಲೀಕರ, ಎ.ಡಿ. ಕೋಲಕಾರ, ಬಸವರಾಜ ಕೊಟಗಿ, ಆರ್.ಎಂ. ರಾಯಬಾಗಿ, ಸಿದ್ದಪ್ಪ ಚಲವಾದಿ, ಶರಣು ಪುಜಾರ, ಶರಣು ಸೊಬರದ, ಅಶೋಕ ಜಿಗಳೂರ, ಗುಲಾಂ, ಹುನಗುಂದ, ರಜಾಕ ಡಾಲಾಯತ, ಯಶವಂತ ಪವಾರ, ಪರಶುರಾಮ ಕಲಾಲ, ಅಶೋಕ ವದೆಗೋಳ ಸೇರಿ ಇತರರು ಇದ್ದರು.

ತಹಸೀಲ್ದಾರ್ ಕಚೇರಿ;

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ೭೧ನೇ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ರೋಣ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ ಪಾಟೀಲ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದ ಎಚ್.ಎಸ್. ಸೋಂಪುರ, ತಾಪಂ ಮಾಜಿ ಉಪಾಧ್ಯಕ್ಷ ಶಶಿಧರ ಹೂಗಾರ, ಕಸಾಪ ಅಧ್ಯಕ್ಷ ಅಮರೇಶ ಗಾಣಿಗೇರ, ವರ್ತಕ ಅಶೋಕ ಬಾಗಮಾರ, ಎ.ಡಿ. ಕೋಲಕಾರ, ಬಿ.ಎ. ಕೆಂಚರಡ್ಡಿ, ರವಿ ಗಡೇದವರ, ಪರಶುರಾಮ ಕಲಾಲ, ಯಶವಂತ ಪವಾರ ಹಾಗೂ ಉಮೇಶ ಅರಳಿಗಿಡದ, ಎಂ.ಬಿ. ಪೊಲೀಸ್‌ಪಾಟೀಲ, ಗಣೇಶ ಕೊಡಕೇರಿ, ಎಸ್.ಎಸ್. ನರೇಗಲ್ ಸೇರಿ ಇತರರು ಇದ್ದರು.

ಬಸ್ ನಿಲ್ದಾಣ;

ಪಟ್ಟಣದ ಬಸ್ ನಿಲ್ದಾಣ ಮುಂಭಾಗದಲ್ಲಿ ಜಯ ಕರ್ನಾಟಕ ಸಂಘನೆಯಿಂದ ೭೧ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಸಂಘಟನೆಯ ಜಿಲ್ಲಾಧ್ಯಕ್ಷ ರಫೀಕ್ ತೋರಗಲ್, ಪಿಎಸ್‌ಐ ಪ್ರವೀಣಕುಮಾರ್ ಗರೇಬಾಳ, ಶರಣಪ್ಪ ಚಳಗೇರಿ, ಮಹಮ್ಮಗೌಸ್ ಅಕ್ಕಿ, ಖಾಜೇಖಾನ್ ಗೊಲಗೇರಿ, ತುಳಸಪ್ಪ ಸುಳ್ಳದ, ಹನಮಂತ ಜಿಗೇರಿ, ಶರಣಪ್ಪ ಹಲಗಿ, ರಮೇಶ ವ್ಯಾಪಾರಿ, ಹೈದರಅಲಿ ಹುನಗುಂದ, ತುಳಜಾರಾಮ ಮಾಳೋತ್ತರ, ಸಾದಿಕ್ ಮೊಮೀನ್, ಅಂಬಸಾ ರಂಗ್ರೆಜಿ, ಮುತ್ತಯ್ಯ ಬಿನ್ನಾಳಮಠ ಸೇರಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನ್ಯ ಭಾಷೆಯ ವ್ಯಾಮೋಹದಿಂದ ಕನ್ನಡ ಮಾಯ
ಕನ್ನಡ ಭಾಷೆಯ ಉಳಿವು, ಬೆಳವಣಿಗೆಗೆ ಆದ್ಯತೆ ಸಿಗಲಿ