ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಸಾಧಕ-ಬಾಧಕ ಎಲ್ಲವನ್ನು ನೋಡಿಕೊಂಡು ಜಂಟಿ ಸರ್ವೇ(ಜೆಎಂಸಿ) ಮಾಡುತ್ತೇವೆ ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಪ್ರತಿಕ್ರಿಯಿಸಿದರು.
ಈ ಹಿಂದೆ ಕುಮಾರಸ್ವಾಮಿ ಟೌನ್‌ಶಿಪ್ ಯೋಜನೆ ಮಾಡಿದಾಗ ನಮ್ಮ ನಾಯಕರೇ ಕೋರ್ಟಿಗೆ ಹೋಗಿದ್ದರು. ಆಗ ಕೋರ್ಟ್ ಅರ್ಜಿಯನ್ನು ರಿಜೆಕ್ಟ್ ಮಾಡಿ, ಅಲ್ಲಿ ಟೌನ್‌ಶಿಪ್ ಆಗಬೇಕೆಂದು ಹೇಳಿತ್ತು. ಆದರೀಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೆಸರಿಗೆ ಕಳಂಕ ತರಲು ಕೇಂದ್ರ ಸಚಿವ ಕುಮಾರಸ್ವಾಮಿ ಪಿತೂರಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಕುಮಾರಸ್ವಾಮಿ ಬಿಡದಿ ಟೌನ್‌ಶಿಪ್ ವಿಚಾರವನ್ನೇ ದೊಡ್ಡ ಇಷ್ಯೂ ಮಾಡಲು ಹೊರಟಿದ್ದಾರೆ. ಮಂಡಲಹಳ್ಳಿ ಗ್ರಾಮದಲ್ಲಿ ನಡೆದಿರುವ ಘಟನೆ ಕುಮಾರಸ್ವಾಮಿ ಕೃಪಾ ಪೋಷಿತ ನಾಟಕ. ಅವಾಂತರ ಸೃಷ್ಟಿ ಮಾಡಬೇಕು ಅಂತಲೇ ಹೀಗೆಲ್ಲ ಮಾಡಿಸಿದ್ದಾರೆ. ಘಟನೆ ಆದ ಒಂದೇ ಗಂಟೆಯಲ್ಲಿ ಕುಮಾರಸ್ವಾಮಿ ಸೋಶಿಯಲ್ ಮೀಡಿಯಾಗೆ ಬಂದು ಪೊಲೀಸರು ಮತ್ತು ಅಧಿಕಾರಿಗಳಿಗೆ ಎಚ್ಚರಿಕೆ ಕೊಡುತ್ತಾರೆ. ನಾನು ಮುಂದೆ ಈ ರಾಜ್ಯದ ಮುಖ್ಯಮಂತ್ರಿ ಆಗುತ್ತೇನೆ ಹುಷಾರ್ ಅಂತಾರೆ. ಇದು ಬಾಲಿಷ ತನದ ವರ್ತನೆ ಅಲ್ಲವೇ ಎಂದು ಪ್ರಶ್ನಿಸಿದರು.ನಾಳೆ ನೀವು ಪ್ರಧಾನಮಂತ್ರಿ ಆಗಿ ತೊಂದರೆ ಇಲ್ಲ. ಆದರೆ, ಕಾನೂನು ಏನು ಹೇಳುತ್ತದೆಯೋ ಅದರ ಪ್ರಕಾರ ನಾವು ಕೇಳಬೇಕು. ಮಂಡಲಹಳ್ಳಿ ಘಟನೆಗೆ ಕುಮಾರಸ್ವಾಮಿ ಅವರೇ ನೇರ ಕಾರಣ ಎಂದು ಆರೋಪಿಸಿದರು.ಶೇ.40ರಷ್ಟು ಜನ ಬೆಂಗಳೂರು ಕಡೆ ಹೋಗಿರುವ ರೈತರು ಮಾತ್ರ ಟೌನ್ ಶಿಪ್ ಯೋಜನೆಗೆ ಒಪ್ಪಿಗೆ ನೀಡಿದ್ದಾರೆಂಬ ಮಾಜಿ ಪ್ರಧಾನಿ ದೇವೇಗೌಡರ ಹೇಳಿಕೆ ಪ್ರತಿಕ್ರಿಯಿಸಿದ ಬಾಲಕೃಷ್ಣ, ದೇವೇಗೌಡರು ತಮ್ಮ ಮಗನಿಗೆ ಮೊದಲು ಬುದ್ದಿ ಹೇಳಲಿ. ಆವತ್ತು ಈ ಯೋಜನೆ ಬೇಡ ನಾನು ರೈತರ ಪರವಾಗಿದ್ದೇನೆ ಅಂದಿದ್ದರೆ ದೇವೇಗೌಡರಿಗೆ ಸಾಷ್ಟಾಂಗ ನಮಸ್ಕಾರ ಹೇಳುತ್ತಿದ್ದೆ. ಆವತ್ತು ಇದೇ ದೇವೇಗೌಡರು ಟೌನ್‌ಶಿಪ್ ಯೋಜನೆ ಘೋಷಣೆ ಮಾಡಿದಾಗ ಕುಮಾರಸ್ವಾಮಿ ಅದೇನೋ ಮಾಡ್ತಾನೆ ಹೋಗಿ ಅಂತ ಹೇಳಿದ್ದರು. ಇವತ್ತು ಡಿ.ಕೆ.ಶಿವಕುಮಾರ್ ಮೇಲೆ ಕೆಟ್ಟ ಹೆಸರು ಬರಲಿ ಅಂತ ಮಾತನಾಡುತ್ತಿದ್ಡಾರೆ. ಇದೆಲ್ಲವನ್ನು ಜನರು ಗಮನಿಸುತ್ತಿದ್ದಾರೆ ಎಂದು ಹೇಳಿದರು.
ಬಾಕ್ಸ್..........
ರಾಮನಗರ: ಈಗ ಹೆಣ್ಣುಮಕ್ಕಳು ಕೇಸು ಹಾಕಿಸಿಕೊಂಡರು. ವರ್ಷಾನುಗಟ್ಟಲೆ ಕೋರ್ಟಿಗೆ ಅಲೆದಾಡಬೇಕು. ಈಗ ಕುಮಾರಸ್ವಾಮಿ ನಿಮ್ಮೊಂದಿಗೆ ಕೋರ್ಟಿಗೆ ಬರುವುದಿಲ್ಲ. ಅವರ ಬಣ್ಣದ ಮಾತುಗಳಿಗೆ ಮರಳಾಗಬೇಡಿ ಎಂದು ಶಾಸಕ ಬಾಲಕೃಷ್ಣ ರೈತರಲ್ಲಿ ಮನವಿ ಮಾಡಿದರು.
14ಕೆಆರ್ ಎಂಎನ್ 2.ಜೆಪಿಜಿ