ಸಮಸ್ಯೆಗಳನ್ನು ನಮ್ಮ ಹತ್ತಿರವೇ ಹೇಳಿದರೆ ಬಗೆಹರಿಸುತ್ತೇವೆ: ಜಿ.ಎಚ್. ಶ್ರೀನಿವಾಸ್

KannadaprabhaNewsNetwork |  
Published : Jan 23, 2026, 01:30 AM IST
ಅ | Kannada Prabha

ಸಾರಾಂಶ

ಅಜ್ಜಂಪುರಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗಳ ವಿಚಾರದಲ್ಲಿ ರೈತರು ವಾಟ್ಸಪ್ ನಲ್ಲಿ ಬಂದ ವಿಚಾರಗಳನ್ನು ನಂಬದೆ ನೈಜವಾಗಿ ಸಮಸ್ಯೆಗಳನ್ನು ನಮ್ಮ ಹತ್ತಿರ ಹೇಳಿದರೆ ಬಗೆಹರಿಸುತ್ತೇವೆ ಎಂದು ತರೀಕೆರೆ ಶಾಸಕ ಜಿ.ಎಚ್. ಶ್ರೀನಿವಾಸ್ ಹೇಳಿದರು.

ನೀರು ಬಳಕೆದಾರರ ಸಂಘಗಳ ತರಬೇತಿ ಶಿಬಿರ

ಕನ್ನಡಪ್ರಭ ವಾರ್ತೆ ಅಜ್ಜಂಪುರಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗಳ ವಿಚಾರದಲ್ಲಿ ರೈತರು ವಾಟ್ಸಪ್ ನಲ್ಲಿ ಬಂದ ವಿಚಾರಗಳನ್ನು ನಂಬದೆ ನೈಜವಾಗಿ ಸಮಸ್ಯೆಗಳನ್ನು ನಮ್ಮ ಹತ್ತಿರ ಹೇಳಿದರೆ ಬಗೆಹರಿಸುತ್ತೇವೆ ಎಂದು ತರೀಕೆರೆ ಶಾಸಕ ಜಿ.ಎಚ್. ಶ್ರೀನಿವಾಸ್ ಹೇಳಿದರು.

ಭದ್ರ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ನೀರು ಬಳಕೆದಾರರ ಸಂಘಗಳ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು. ಈ ಯೋಜನೆಯಲ್ಲಿ ಕೆಲ ಲೋಪದೋಷಗಳು ಆಗಿದ್ದು ನಿಜ ಅದು ನನಗೂ ಕೂಡ ತೃಪ್ತಿ ತಂದಿಲ್ಲ. ಯೋಜನೆಯಲ್ಲಿ 120 ಕೆರೆಗಳಿಗೆ ನೀರುವ ತುಂಬಿಸುವಂತೆ ಹೇಳಿದ್ದೆ. ಈ ವಿಷಯದಲ್ಲಿ ಬಿಜೆಪಿ ಯವರು ನನ್ನ ವಿರುದ್ಧ ರಾಜಕೀಯ ಪಿತೂರಿ ನಡೆಸಿ ಲಕ್ಕವಳ್ಳಿ ಭಾಗದ ರೈತರು ನನಗೆ ಕೆಟ್ಟದಾಗಿ ನಿಂದಿಸಿರುತ್ತಾರೆ. ದಾವಣೆಗೆರೆ ರೈತರು ಸಹ ಆಕ್ಷೇಪಣೆ ಮಾಡಿರುತ್ತಾರೆ. ಅಬ್ಬಿನಹೊಳಲು, ಹೆಬ್ಬೂರು ರೈತರಿಗೆ ಜಮೀನು ಕಳೆದುಕೊಂಡ ರೈತರಿಗೆ ಹೆಚ್ಚಾಗಿ ಹಣ ಕೊಡಿಸಲಾಗುವುದು ಎಂದು ಹೇಳಿದರು.

ಭದ್ರ ಕಾಡ ಅಧ್ಯಕ್ಷ ಡಾ.ಅಂಶುಮಂತ್‌ ಮಾತನಾಡಿ ಅಜ್ಜಂಪುರ ಭದ್ರಾ ನೀರು ಬಳಕೆದಾರದ್ದು 40 ಸಂಘಗಳಿದ್ದು ನೀರು ಬಳಕೆದಾರರ 40 ಸಂಘಗಳಿದ್ದು, ಇವುಗಳಲ್ಲಿ 10 ಸಂಘಗಳು ಕ್ರಿಯಾಶೀಲ ವಾಗಿವೆ. ಇವರಿಗೆ ವಾರ್ಷಿಕ ₹50,000 ಅನುದಾನ ಕೊಡಲಾಗುತ್ತದೆ. ನೀವು ಸರ್ಕಾರದೊಂದಿಗೆ ಕೈಜೋಡಿಸಿದರೆ ಸರ್ಕಾರ ರೈತರ ಪರವಾಗಿದ್ದು ಶಾಸಕರು ಸಹ ರೈತರಿಗೆ ಹೆಚ್ಚು ಸಕ್ರಿಯವಾಗಿ ಕೆರೆಗೆ ನೀರು ಹರಿಸಲು ಶತ ಪ್ರಯತ್ನ ಮಾಡಿರುತ್ತಾರೆ. ಯಾವುದೇ ವದಂತಿಗಳಿಗೆ ಕಿವಿಗೊಡದಂತೆ ಹೇಳಿದರು. ಈ ಸಭೆಯಲ್ಲಿ ಮುಖ್ಯ ಎಂಜಿನಿಯರ್ ಕವಿತಾ, ಸಹಾಯಕ ಎಂಜಿನಿಯರ್ ಶ್ರೀಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಯಾನಂದ್, ಸುತ್ತಮುತ್ತಲಿನ ರೈತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುಸ್ತಕಗಳಲ್ಲಿ ಬೆಂಗಳೂರು ನಗರಕ್ಕೆ ಬರೋಬ್ಬರಿ ₹38 ಕೋಟಿ ಡ್ರಗ್ಸ್‌ ಸಾಗಾಟ
ಸರ್ಕಾರದಿಂದ ಗೋಬ್ಯಾಕ್‌ ಗೌರ್ನರ್‌ ಅಭಿಯಾನ ಚಿಂತನೆ