ನಮ್ಮ ತಂಡ ದೆಹಲಿಗೆ ಹೋಗುತ್ತೇವೆ. ಯಡಿಯೂರಪ್ಪ ಹಾಗೂ ಅವನ ಮಗನ ಕರ್ಮಕಾಂಡಗಳ ಬಗ್ಗೆ ಹೈಕಮಾಂಡ್ ಮುಂದೆ ಹೇಳಲು ಹೊರಟಿದ್ದೇವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.
ವಿಜಯಪುರ : ನಮ್ಮ ತಂಡ ದೆಹಲಿಗೆ ಹೋಗುತ್ತೇವೆ. ಯಡಿಯೂರಪ್ಪ ಹಾಗೂ ಅವನ ಮಗನ ಕರ್ಮಕಾಂಡಗಳ ಬಗ್ಗೆ ಹೈಕಮಾಂಡ್ ಮುಂದೆ ಹೇಳಲು ಹೊರಟಿದ್ದೇವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷರ ಚುನಾವಣೆ ವಿಚಾರದ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಕಲಬುರಗಿ ಜಿಲ್ಲೆ ಸೇಡಂನಲ್ಲಿ ನಡೆಯುತ್ತಿರೋ ಭಾರತೀಯ ವಿಕಾಸ ಸಂಗಮ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಅಲ್ಲಿಂದ ದೆಹಲಿಗೆ ಹೋಗುತ್ತೇವೆ. ಮಹಾಭ್ರಷ್ಟ ಕುಟುಂಬ ಬೇಕೆ?,ಪ್ರಮಾಣಿಕರು ನಿಷ್ಟಾವಂತರು ಪಕ್ಷದ ಕಾರ್ಯಕರ್ತರು ಬೇಕೆ ಎಂದು ಪ್ರಶ್ನಿಸುತ್ತೇವೆ.
ಬಿಜೆಪಿಯಲ್ಲಿ ಕುಟುಂಬಶಾಹಿ ಕೊನೆಗೊಳ್ಳಬೇಕು.ಭ್ರಷ್ಟಾಚಾರಿ ಕುಟುಂಬ ರಾಜ್ಯದಿಂದ ಕಿತ್ತು ಹೋಗಬೇಕು. ಹಿಂದುತ್ವ ಪರ ಇರುವಂತ ವ್ಯಕ್ತಿಗಳ ಕೈಯಲ್ಲಿ ನಾಯಕತ್ವ ಇರಬೇಕೆಂದು ಹೇಳಿದರು.
8-10 ದಿನಗಳಲ್ಲಿ ಎಲ್ಲ ಸರಿಯಾಗುತ್ತದೆ, ನಾನು ರಾಜ್ಯಾಧ್ಯಕ್ಷನಾಗೋ ವಿಶ್ವಾಸವಿದೆ ಎಂದು ವಿಜಯೇಂದ್ರ ಹೇಳಿಕೆಗೆ ಟಾಂಗ್ ನೀಡಿದ ಅವರು,ಯಾರಾದರೇನು ನಾನೇ ಆಗಬೇಕು ಎನ್ನಬೇಕಾಗುತ್ತದೆ. ಡಿಪಾಸಿಟ್ ಜಪ್ತಿ ಹೋದವರೂ ಸಹಿತ ನಾನೇ ಆರಿಸಿ ಬರುತ್ತೇನೆಂದು ಹೇಳುತ್ತಾರೆ.ಹೊಳೆನರಸೀಪುರದಲ್ಲಿ ಒಬ್ಬ ಸಿಕ್ಕಿದ್ದ 500 ಮತಗಳಲ್ಲಿ ಸೋತೆ ಎಂದು ಹೇಳಿದ, ನಂತರ ನೋಡಿದಾಗ ಆತ ಕೇವಲ 500 ಮತ ಪಡೆದಿದ್ದ. ಈಗ ಹೈಕಮಾಂಡ್‌ನಲ್ಲಿ ಮೂರು ವಿಷಯಗಳು ಸ್ಪಷ್ಟವಾಗಬೇಕು. ಭ್ರಷ್ಟಾಚಾರ ವ್ಯಕ್ತಿಯ ಕುಟುಂಬ ದೂರವಿಡಬೇಕು.
ಕುಟುಂಬ ರಾಜಕಾರಣದಿಂದ ಬಿಜೆಪಿ ಮುಕ್ತವಾಗಬೇಕು. ಹಿಂದುತ್ವರಹಿತ ನಾಯಕತ್ವ ಬಿಜೆಪಿಗೆ ಬೇಕು. ಯಾರೂ ಹಿಂದೂತ್ವ ರಕ್ಷಣೆ ಮಾಡಲಿಲ್ಲ, ಹಿಂದೂ ಕಾರ್ಯಕರ್ತರ ಕೊಲೆಯಾದರೆ ಕೇವಲ ಕಠಿಣ ಕ್ರಮವೆಂದು ಮಾತನಾಡಿದರು. ಆದ ಕಾರಣದಿಂದಲೇ ಬಿಜೆಪಿಗೆ ಹೀನಾಯ ಸ್ಥಿತಿ ಆಗಿದೆ. ಕಾರಣ ಹಿಂದುತ್ವ ರಹಿತವಾದ ರಾಜ್ಯ ರಾಜಕಾರಣ ಬೇಕು ಎಂದರು.
ದೆಹಲಿ ಚಲೋ ನಿಯೋಗ ದೊಡ್ಡದಿದೆ
ತಟಸ್ಥ ಇದ್ದಿದ್ದು ನಿಷ್ಟಾವಂತ ಆಗಿದೆ. ಕನ್ವರ್ಟ್ ಆಗಿದೆ, ಮತಾಂತರ ಆಗಿದೆ, ನಿಷ್ಟಾವಂತ ಮತಾಂತರ ಆಗಿದೆ. ತಟಸ್ಥ ಎಂದು ಎರಡೂ ಕಡೆ ಆಟವಾಡುತ್ತಿದ್ದರು. ವಿಜಯೇಂದ್ರನ ಮುಂದುವರೆಸಿದರೆ ಹೀನಾಯ ಸ್ಥಿತಿ ಎಂದು ಗೊತ್ತಾಗಿದ್ದು, ಎಲ್ಲವೂ ಹೊಂದಾಣಿಕೆಯಿದೆ. ನನ್ನ ಭಿಕ್ಷೆಯಿಂದ ಶಾಸಕನಾಗಿದ್ದು ಎಂದು ಡಿಕೆಶಿ ವಿಜಯೇಂದ್ರಗೆ ಹೇಳಿದ. ಅದಕ್ಕೂ ಯಾವುದೇ ಪ್ರತಿಕ್ರಿಯೆಯನ್ನು ವಿಜಯೇಂದ್ರ ನೀಡಿಲ್ಲ. ಮೊನ್ನೆ ವಿಜಯೇಂದ್ರ ಬಗ್ಗೆ ಹೀನಾಯವಾಗಿ ಬೈಯ್ದರೂ ಉತ್ತರ ಕೊಡಲಿಲ್ಲ.
ಕಾಂಗ್ರೆಸ್‌ನವರು ಯಡಿಯೂರಪ್ಪ ಹಾಗೂ ಅವರ ಮಗನಿಗೆ ಭಯಪಡಿಸಿದ್ದಾರೆ. ನಮ್ಮ ಹಗರಣ ತೆಗದರೆ ನಿಮ್ಮದು ಪೋಕ್ಸೋ ಇದೆ,ನೀನು ನಕಲಿ ಸಹಿ ಮಾಡಿದ್ದು ಇದೆ, ಇದೆಲ್ಲ ತೆಗೆಯುತ್ತೇವೆಂದು ವಿಜಯೇಂದ್ರಗೆ ಹೆದರಿಸಿದ್ದಾರೆ. ಇಂಥ ವ್ಯಕ್ತಿಗಳು ಬೇಕಾ? ಎಂದು ನಾವು ಹೈಕಮಾಂಡ್ ಗೆ ಕೇಳುತ್ತಿದ್ದೇವೆ. ಯತ್ನಾಳ ಹೇಳಿಕೆಯಿಂದ ಪಕ್ಷಕ್ಕೆ ಬಹಳ ಡ್ಯಾಮೇಜ್ ಆಗಿದೆ ಎಂದು ಮಾಜಿ ಸಿಎಂ ಸದಾನಂದಗೌಡ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವನೊಬ್ಬ ಜೋಕರ್ ಎಂದು ಯತ್ನಾಳ ಟೀಕಿಸಿದರು.