28ಕ್ಕೆ ಸಾಮಾಜಿಕ ಜಾಲತಾಣ ಬಳಕೆ: ವೆಬಿನಾರ್‌

KannadaprabhaNewsNetwork |  
Published : Apr 26, 2026, 04:00 AM IST
ಸುವರ್ಣ ವಿಧಾನಸೌಧದಲ್ಲಿ ರಾಷ್ಟ್ರೀಯ ಪಂಚಾಯತ್‌ ರಾಜ್‌ ದಿನಾಚರಣೆ ಕಾರ್ಯಕ್ರಮವನ್ನು ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸಿದರು | Kannada Prabha

ಸಾರಾಂಶ

ವಿಜಯಪುರ: ಬಿ.ಐ.ಟಿ.ಇ.ಎಸ್ ಅಡಿಯಲ್ಲಿ ಹದಿಹರೆಯದವರಲ್ಲಿ ಸಾಮಾಜಿಕ ಜಾಲತಾಣ ಬಳಕೆ- ನಿಷೇಧ ಮತ್ತು ಅದರಾಚೆಗೆ: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದೃಷ್ಟಿಕೋನಗಳು ಎಂಬ ವಿಷಯದ ಕುರಿತು ಅಂತಾರಾಷ್ಟ್ರೀಯ ವೆಬಿನಾರ್‌ ಏ.28 ರಂದು ನಡೆಯಲಿದೆ.

ವಿಜಯಪುರ: ಬಿ.ಐ.ಟಿ.ಇ.ಎಸ್ ಅಡಿಯಲ್ಲಿ ಹದಿಹರೆಯದವರಲ್ಲಿ ಸಾಮಾಜಿಕ ಜಾಲತಾಣ ಬಳಕೆ- ನಿಷೇಧ ಮತ್ತು ಅದರಾಚೆಗೆ: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದೃಷ್ಟಿಕೋನಗಳು ಎಂಬ ವಿಷಯದ ಕುರಿತು ಅಂತಾರಾಷ್ಟ್ರೀಯ ವೆಬಿನಾರ್‌ ಏ.28 ರಂದು ನಡೆಯಲಿದೆ.

ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಮತ್ತು ಅಂತಾರಾಷ್ಟ್ರೀಯ ಹದಿಹರೆಯದ ಆರೋಗ್ಯ ಸಂಘಟನೆ(IAAH) ಸಹಯೋಗದಲ್ಲಿ ಮಧ್ಯಾಹ್ನ 3.30 ರಿಂದ 5ರ ವರೆಗೆ ಈ ವೆಬಿನಾರ್‌ ನಡೆಯಲಿದ್ದು, ಐಎಎಎಚ್(IAAH) ಅಂತಾರಾಷ್ಟ್ರೀಯ ಸಂಯೋಜಕ ಮತ್ತು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ತಜ್ಞೆ ಡಾ.ಪ್ರೀತಿ ಗಲಗಲಿ ನೇತೃತ್ವ ವಹಿಸಲಿದ್ದಾರೆ.

ಆಸ್ಟ್ರೇಲಿಯಾದ ಖ್ಯಾತ ತಜ್ಞ ಡಾ.ಸುಸನ್ ಸಾಯರ, ಎಐಎಎಎಚ್ ಅಧ್ಯಕ್ಷೆ ಮಾರಿಯಾ ಕಾಲಮೆನ ಸೇರಿದಂತೆ ಅಂತಾರಾಷ್ಟ್ರೀಯ ತಜ್ಞರು, ಹದಿಹರೆಯರ ವಿಭಾಗ, ಭಾರತೀಯ ಮಕ್ಕಳ ಸಂಸ್ಥೆಯ (ಐಎಪಿ) ಅಧ್ಯಕ್ಷೆ ಡಾ.ಸುಷ್ಮಾ ದೇಸಾಯಿ, ಕಾರ್ಯದರ್ಶಿ ಡಾ.ಶೌಮಿಕ ಘೋಷ್, ಯುವ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಮಕ್ಕಳು ಮತ್ತು ಹದಿಹರೆಯದವರಲ್ಲಿ ಸಾಮಾಜಿಕ ಜಾಲತಾಣ ಬಳಕೆಯಿಂದ ಮಾನಸಿಕ ಆರೋಗ್ಯ, ವರ್ತನೆ, ಕಲಿಕೆ ಹಾಗೂ ಆನ್‌ಲೈನ್ ಸುರಕ್ಷತೆ ಸಂಬಂಧಿತ ಅನೇಕ ಸಮಸ್ಯೆಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಈ ವಿಷಯದ ಕುರಿತು ಚರ್ಚೆ ನಡೆಯಲಿದೆ.

ವಿಶೇಷವಾಗಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಯನ್ನು ಆಸ್ಟ್ರೇಲಿಯಾದಲ್ಲಿ ನಿರ್ಬಂಧಿಸಲಾಗಿದ್ದು, ಈ ವೆಬಿನಾರ್ ಗೆ ಹೆಚ್ಚಿನ ಮಹತ್ವ ಬಂದಿದೆ. ಕರ್ನಾಟಕ ರಾಜ್ಯ ಸರಕಾರವೂ ಇದೇ ರೀತಿಯ ನಿರ್ಬಂಧಗಳನ್ನು ಹೇರುವ ಪ್ರಸ್ತಾಪ ಮಾಡಿರುವ ಕಾರಣ, ಈ ಚರ್ಚೆಯು ಇನ್ನೂ ಮಹತ್ವಪೂರ್ಣವಾಗಿದೆ. ಈ ಮಹತ್ವದ ಕಾರ್ಯಕ್ರಮವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಬಿ.ಎಂ.ಪಾಟೀಲ ಮೆಡಿಕಲ್ ಕಾಲೇಜಿನ ಪ್ರಾಚಾರ್ಯೆ ಡಾ.ತೇಜಶ್ವಿನಿ ವಲ್ಲಭ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಂದು ಮರ ಸಾವಿರ ಜೀವಗಳನ್ನು ಉಳಿಸುತ್ತದೆ
ಇಂದು ಪರಿಷತ್ ಪ್ರದಗ್ರಹಣ