ವಾರದಿಂದ ಸುರಿಯುತ್ತಿರುವ ವರುಣ । ಬೆಳೆಗಾರರಲ್ಲಿ ಹರ್ಷ । ತಾಲೂಕಲ್ಲಿ ಮೊದಲ ಬಾರಿ । ಕೃಷಿ ಚಟುವಟಿಕೆ ಚುರುಕು । ಭಿತ್ತನೆ ಆರಂಭ
ಶ್ರೀವಿದ್ಯಾಸಕಲೇಶಪುರಕನ್ನಡಪ್ರಭ ವಾರ್ತೆ ಸಕಲೇಶಪುರ
ಬಿಸಿಲು ಬೇಗೆಗೆ ಕಾದು ಬೆಂಡಾಗಿದ್ದ ಮಲೆನಾಡಿನಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆ ಬೆಳೆಗಾರರ ಪಾಲಿಗೆ ನೆಮ್ಮದಿ ಮೂಡಿಸಿದೆ.ಬಿಸಿಲು ಬೇಗೆಗೆ ಕಾದು ಬೆಂಡಾಗಿದ್ದ ಮಲೆನಾಡಿನಲ್ಲಿ ಕಳೆದೊಂದು ವಾರದಿಂದ ಸಕಲೇಶಪುರದಲ್ಲಿ ಸುರಿಯುತ್ತಿರುವ ಮಳೆ ಬೆಳೆಗಾರರ ಪಾಲಿಗೆ ನೆಮ್ಮದಿ ಮೂಡಿಸಿದೆ. ಈಗ ಸುರಿಯುತ್ತಿರುವ ಮಳೆ ಸದ್ಯ ಮಲೆನಾಡಿಗರ ನೆಮ್ಮದಿಗೆ ಕಾರಣವಾಗಿದ್ದು ಈಗಾಗಲೇ ತಾಲೂಕಿನ ಹಲವೆಡೆ ವಾಡಿಕೆಗಿಂತ ಶೇ ೧೦೦ ರಷ್ಟು ಹೆಚ್ಚು ಮಳೆಯಾಗಿದೆ.ಮೇ ಎರಡನೇ ವಾರದವರಗೆ ಬಾರದ ಮಳೆಯಿಂದಾಗಿ ಕಾಫಿ ಬೆಳೆಗಾರರು ಮುಂದಿನ ಬೆಳೆ ಉಳಿಸಿಕೊಳ್ಳುವ ಬಗ್ಗೆ ಚಿಂತಿಸುತ್ತಿದ್ದರು, ಸಾಮಾನ್ಯ ಜನರು ಬಿಸಿಲ ದಗೆಗೆ ಹೆದರಿ ಮನೆಯಿಂದ ಹೊರಬಾರದಂತ ಸ್ಥಿತಿ ಸೃಷ್ಟಿಯಾಗಿತ್ತು. ಇದೇ ಮೊದಲ ಬಾರಿಗೆ ತಾಲೂಕಿನಲ್ಲಿ ೩೯ ಡಿಗ್ರಿ ಉಷ್ಣಾಂಶ ದಾಖಲಾಗಿದ್ದು ತಾಲೂಕಿನ ದೊಡ್ಡ ನದಿ ಹೇಮಾವತಿ ಸೇರಿದಂತೆ ಇದೇ ಮೊದಲ ಬಾರಿಗೆ ಹಲವು ನದಿ ತೊರೆಗಳು ತಮ್ಮ ಹರಿವು ನಿಲ್ಲಿಸುವ ಮೂಲಕ ಜನ ಜಾನುವಾರಿಗೆ ಕುಡಿಯುವ ನೀರಿಗೆ ತತ್ವಾರ ಸೃಷ್ಟಿಯಾಗಿತ್ತು. ಆದರೆ ಈಗ ಸುರಿಯುತ್ತಿರುವ ಮಳೆ ಸದ್ಯ ಮಲೆನಾಡಿಗರ ನೆಮ್ಮದಿಗೆ ಕಾರಣವಾಗಿದ್ದು ಈಗಾಗಲೇ ತಾಲೂಕಿನ ಹಲವೆಡೆ ವಾಡಿಕೆಗಿಂತ ಶೇ ೧೦೦ ರಷ್ಟು ಹೆಚ್ಚು ಮಳೆಯಾಗಿದೆ.
ಸದ್ಯ ತಾಲೂಕಿನ ಹಲವೇಡೆ ಈಗಾಗಲೇ ೪೫೦ ರಿಂದ ೬೦೦ ಮೀ.ಮೀಟರ್ ಮಳೆ ಸುರಿದಿದ್ದು ಹರಿವು ನಿಲ್ಲಿಸಿದ್ದ ಬಹುತೇಕ ಎಲ್ಲ ಜಲಮೂಲಗಳಲ್ಲೂ ನೀರು ಹರಿಯಲಾರಂಭಿಸಿದೆ. ಇತ್ತ ಕೃಷಿ ಚಟುವಟಿಕೆ ಚುರುಕು ಪಡೆದಿದ್ದು ಸಾಕಷ್ಟು ಪ್ರಮಾಣದಲ್ಲಿ ಭತ್ತದ ಮಡಿ ಮಾಡುವ ಕೆಲಸ ಚುರುಕು ಪಡೆದಿದ್ದರೆ, ಕಾಫಿ ತೋಟಗಳಲ್ಲಿ ಗಿಡಕಸಿ, ಮರಗಸಿ ಮುಗಿಸಿರುವ ಬಹುತೇಕ ಬೆಳೆಗಾರರು ರಸಗೊಬ್ಬರ ನೀಡುವ ಕೆಲಸಕ್ಕೆ ಮುಗಿಬಿದಿದ್ದಾರೆ.ದಾಖಲೆ ಮಾರಾಟ:
ತಾಲೂಕಿನಲ್ಲಿ ೨೦ ದಿನಗಳಿಂದ ಬಿಟ್ಟು ಬಿಟ್ಟು ಉತ್ತಮ ಮಳೆಯಾಗುತ್ತಿರುವುದು ಕಾಫಿ ಬೆಳೆಗಾರರಿಗೆ ರಸಗೊಬ್ಬರ ನೀಡಲು ಉತ್ತಮ ವಾತವಾರಣ ಸೃಷ್ಟಿಸಿದೆ. ಪರಿಣಾಮ ಕೇವಲ ಒಂದು ತಿಂಗಳ ಅವಧಿಯಲ್ಲಿ ತಾಲೂಕಿನ ೧೫ ಸರ್ಕಾರಿ ಸೊಸೈಟಿ ಹಾಗೂ ನಲ್ವತ್ತು ರಸಗೊಬ್ಬರ ಅಂಗಡಿಗಳಲ್ಲಿ ೧೦ ಸಾವಿರ ಮೇಟ್ರಿಕ್ ಟನ್ ರಸಗೊಬ್ಬರ ಮಾರಾಟವಾಗಿದೆ.ಶಿರಾಡಿ ಘಾಟ್ ಸಂಚಾರಕ್ಕೆ ಆತಂಕ:
ತಾಲೂಕಿನಲ್ಲಿ ಕಳೆದ ಎರಡು ದಿನಗಳಲ್ಲಿ ೧೫೦ ರಿಂದ ೨೦೦ ಮೀ.ಮೀಟರ್ ಮಳೆಯಾಗಿದ್ದು ನಿರ್ವಹಣೆಯ ಕೊರತೆ ಎದುರಿಸುತ್ತಿರುವ ಶಿರಾಢಿ ಘಾಟ್‌ನ ೪೦ ಕಿ.ಮೀ. ಹೆದ್ದಾರಿಯಲ್ಲಿ ಅಲ್ಲಲ್ಲಿ ರಸ್ತೆಗೆ ಬಾಗಿರುವ ಮರಗಳು ರಸ್ತೆಗೆ ಉರುಳುತ್ತಿದೆ. ಮಳೆನೀರು ಹೆದ್ದಾರಿಯಲ್ಲೆ ಹರಿಯುತ್ತಿದೆ. ಇದು ಸುಗಮ ಸಂಚಾರಕ್ಕೆ ತೊಂದರೆ ತಂದೊಡ್ಡುತ್ತಿದ್ದರೆ ತಾಲೂಕಿನ ಆನೇಮಹಲ್ ಗ್ರಾಮದಿಂದ ಹೆಗದ್ದೆ ಗ್ರಾಮದ ವರೆಗಿನ ೧೨ ಕಿ.ಮೀ. ಹೆದ್ದಾರಿಯಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಮಳೆಯಿಂದ ಗುಡ್ಡದ ಮಣ್ಣು ಬಾರಿ ಪ್ರಮಾಣದಲ್ಲಿ ರಸ್ತೆಗೆ ಬಂದು ಸೇರುತ್ತಿದ್ದು ಕೆಲವೆಡೆ ಹೆದ್ದಾರಿ ಕೆಸರು ಗದ್ದೆಯಂತಾಗಿದೆ. ಮಳೆ ಮತ್ತಷ್ಟು ಮುಂದುವರಿದಲ್ಲಿ ತಾಲೂಕಿನ ದೋಣಿಗಾಲ್ ಹಾಗೂ ದೊಡ್ಡತಪ್ಪಲೆ ಸಮೀಪ ಗುಡ್ಡ ಕುಸಿಯುವ ಸಾಧ್ಯತೆ ಹೆಚ್ಚಿದೆ.ವಾಡಿಕೆಯಂತೆ ಈ ಬಾರಿ ಜೂನ್ ತಿಂಗಳಿನಲ್ಲೆ ಮಳೆಯಾಗುತ್ತಿದ್ದು ಜಡಿ ಮಳೆ ಚಳಿಯನ್ನು ಸೃಷ್ಟಿಸಿದೆ. ಸದ್ಯ ಭತ್ತದ ಮಡಿ ಮಾಡುವ ಕಾರ್ಯ ನಡೆಯುತ್ತಿದ್ದು ತುಂಗಾ ಭತ್ತದ ಕೊರತೆ ಎದುರಾಗಿದೆ.
ಉಮೇಶ್. ಕೃಷಿಕ, ಹೆಬ್ಬಸಾಲೆ.ತಾಲೂಕಿನಲ್ಲಿ ಮಳೆಗಾಲಕ್ಕೆ ಸಿದ್ದಗೊಳ್ಳುವಂತೆ ತಾಲೂಕು ಆಡಳಿತಕ್ಕೆ ಸೂಚನೆ ನೀಡಿದ್ದು ಮಳೆಯಿಂದ ಅವಘಡ ಸಂಭವಿಸದಂತೆ ಕ್ರಮ ಕೈಗೊಳ್ಳಲಾಗಿದೆ.
ಮೇಘನಾ. ತಹಸೀಲ್ದಾರ್. ಸಕಲೇಶಪುರ.