ಸುಮಾರು ೬೫ ಕೆಜಿ ತೂಕ ೧೨ ಅಡಿ ಉದ್ದದ ಹೆಬ್ಬಾವು ರಕ್ಷಣೆ

KannadaprabhaNewsNetwork |  
Published : Oct 16, 2025, 02:01 AM IST
ಮುಂಡಗೋಡ: ತಾಲೂಕಿನ ಪಾಳಾ ಗ್ರಾ.ಪಂ ವ್ಯಾಪ್ತಿಯ ಹುಡೇಲಕೊಪ್ಪದ ರಫೀಕ ಮಂಡಕ್ಕಿ ಅವರ ಫಸಲು ಭತ್ತದ ಗದ್ದೆಯಲ್ಲಿ ಕಾಣಿಸಿಕೊಂಡ ಸುಮಾರು ೬೫ ಕೆಜಿ ತೂಕ ೧೨ ಅಡಿ ಉದ್ದದ ಬೃಹದ್ದಾಕಾರದ ಹೆಬ್ಬಾವನ್ನು ಪಾಳಾ ಉಪವಲಯ ಅರಣ್ಯಾಧಿಕಾರಿ ಸುನೀಲ್ ಹೊನ್ನಾವರ ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ. | Kannada Prabha

ಸಾರಾಂಶ

ತಾಲೂಕಿನ ಪಾಳಾ ಗ್ರಾಪಂ ವ್ಯಾಪ್ತಿಯ ಹುಡೇಲಕೊಪ್ಪದ ರಫೀಕ ಮಂಡಕ್ಕಿ ಅವರ ಬತ್ತದ ಗದ್ದೆಯಲ್ಲಿ ಕಾಣಿಸಿಕೊಂಡ ಸುಮಾರು ೬೫ ಕೆಜಿ ತೂಕದ ೧೨ ಅಡಿ ಉದ್ದದ ಬೃಹದಾಕಾರದ ಹೆಬ್ಬಾವನ್ನು ಪಾಳಾ ಉಪವಲಯ ಅರಣ್ಯಾಧಿಕಾರಿ ಸುನೀಲ್ ಹೊನ್ನಾವರ ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ.

ಮುಂಡಗೋಡ:

ತಾಲೂಕಿನ ಪಾಳಾ ಗ್ರಾಪಂ ವ್ಯಾಪ್ತಿಯ ಹುಡೇಲಕೊಪ್ಪದ ರಫೀಕ ಮಂಡಕ್ಕಿ ಅವರ ಬತ್ತದ ಗದ್ದೆಯಲ್ಲಿ ಕಾಣಿಸಿಕೊಂಡ ಸುಮಾರು ೬೫ ಕೆಜಿ ತೂಕದ ೧೨ ಅಡಿ ಉದ್ದದ ಬೃಹದಾಕಾರದ ಹೆಬ್ಬಾವನ್ನು ಪಾಳಾ ಉಪವಲಯ ಅರಣ್ಯಾಧಿಕಾರಿ ಸುನೀಲ್ ಹೊನ್ನಾವರ ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ.

ಕೃಷಿ ಕೂಲಿಕಾರರು ಗದ್ದೆಯಲ್ಲಿ ಬತ್ತ ಕಟಾವು ಮಾಡುವಾಗ ದಿಢೀರನೆ ಬೆಳೆಯ ಮಧ್ಯೆ ಬೃಹದಾಕಾರದ ಹೆಬ್ಬಾವು ಕಾಣಿಸಿಕೊಂಡಿದ್ದು, ಭಯಭೀತರಾದ ಕಾರ್ಮಿಕರು ಅರಣ್ಯ ಇಲಾಖೆಗೆ ಕರೆ ಮಾಡಿ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿ ಹಾವನ್ನು ಹಿಡಿದು ಪ್ರದರ್ಶಿಸಿ ಕಾರ್ಮಿಕರಲ್ಲಿ ಹಾವಿನ ಬಗ್ಗೆ ಜಾಗೃತಿ ಮೂಡಿಸಿ ಬಳಿಕ ಹೆಬ್ಬಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟರು.

ಅರಣ್ಯ ಇಲಾಖೆ ಸಬ್ಬಂದಿ ನಾರಾಯಣ ಓಣಿಕೇರಿ, ಬಸವರಾಜ ವಾಲ್ಮೀಕಿ, ಆನಂದ, ಸೋಮಲಿಂಗ ಮುಂತಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.ಬಿಲ್ ಕಟ್ಟದ ಕಾರಣಕ್ಕೆ ಪಟ್ಟಣದ ಪ್ರವಾಸಿ ಮಂದಿರದ ವಿದ್ಯುತ್ ಸಂಪರ್ಕ ಕಡಿತ

ವಿದ್ಯುತ್ ಬಿಲ್ ಕಟ್ಟದ ಕಾರಣಕ್ಕೆ ಮುಂಡಗೋಡ ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದ್ದು, ಪ್ರವಾಸಿ ಮಂದಿರ ಸುತ್ತ ಸಂಪೂರ್ಣ ಕತ್ತಲು ಆವರಿಸಿತ್ತು.ವಿದ್ಯುತ್ ಬಿಲ್ ಕಟ್ಟದೆ ಇರುವುದರಿಂದ ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಕರ್ಪ ಕಡಿತಗೊಳಿಸಿದ್ದಾರೆ. ಇದರಿಂದ ಬುಧವಾರ ರಾತ್ರಿ ಪ್ರವಾಸಿ ಮಂದಿರದಲ್ಲಿ ವಿದ್ಯುತ್ ಇಲ್ಲದೆ ಸಂಪೂರ್ಣ ಕಗ್ಗತ್ತಲಿನಿಂದ ಕೂಡಿತ್ತು.ಇದರಿಂದ ಬಂದವರೆಲ್ಲ ಪ್ರವಾಸಿ ಮಂದಿರದಲ್ಲಿ ಏಕೆ ಬೆಳಕಿಲ್ಲ ಎಂದು ಕೇಳಿದರೆ ವಿದ್ಯುತ್ ಬಿಲ್ ಬರಿಸದೆ ಇರುವುದರಿಂದ ಕಟ್ ಮಾಡಲಾಗಿದೆ ಎಂಬ ಉತ್ತರ ಬಂತು. ಸರ್ಕಾರದ ಪ್ರವಾಸಿ ಮಂದಿರದ ಸ್ಥಿತಿಯೇ ಹೀಗಾದರೆ ಹೇಗಪ್ಪ ಎಂದು ಸಾರ್ವಜನಿಕರು ಆಡಿಕೊಳ್ಳುವಂತಾಗಿತ್ತು.

ಕಳೆದ ೨ ತಿಂಗಳಿಂದ ಬಿಲ್ ಪಾವತಿಸಿಲ್ಲ. ಸುಮಾರು ₹೪೦ ಸಾವಿರ ಬಾಕಿ ಇದ್ದು, ವಸೂಲಿಗೆ ಹೋದರೆ ಬಜೆಟ್ ಇಲ್ಲ ಎಂದು ಹೇಳುತ್ತಾರೆ. ಹಾಗಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಮುಂಡಗೋಡ ಹೆಸ್ಕಾಂ ಶಾಖಾಧಿಕಾರಿ ಕನ್ನಡಪ್ರಭಕ್ಕೆ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೆಕ್ಕೆಜೋಳ ಖರೀದಿಯ ಮಿತಿ 50 ಕ್ವಿಂಟಲ್‌ಗೇರಿಕೆ
ಥಾಯ್ಲೆಂಡ್‌ನಿಂದ ರಾಜ್ಯಕ್ಕೆ ಹೆಚ್ಚು ಹೈಡ್ರೋ ಗಾಂಜಾ!