ಕನ್ನಡಪ್ರಭ ವಾರ್ತೆ ಕುಶಾಲನಗರ
ಮಾದಾಪಟ್ಟಣದ ಸರಕಾರಿ ಇಂಜಿನಿಯರಿಂಗ್ ಕಾಲೇಜು ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಎಲ್ಲಾ ಸ್ವಾಗತ ಕಮಾನುಗಳನ್ನು ಸಾಂಕೇತಿಕವಾಗಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪುರಸಭೆ ಮೂಲಕ ರೂ 21 ಲಕ್ಷ ವೆಚ್ಚದಲ್ಲಿ ಗಡಿ ಭಾಗಗಳಲ್ಲಿ 4 ಗ್ಯಾಂಟ್ರಿ ಬೋರ್ಡ್ ಗಳನ್ನು ಅಳವಡಿಸಲಾಗಿದೆ. ನೆರೆಯ ಮೈಸೂರು, ಹಾಸನ ಜಿಲ್ಲೆಗಳಿಂದ ಕಾವೇರಿ ತವರೂರಿಗೆ ಬರುವ ಮತ್ತು ತೆರಳುವ ಮಂದಿಗೆ ಈ ಸ್ವಾಗತ ಬೋರ್ಡ್ ಗಳ ಅಳವಡಿಕೆಯಿಂದ ಅನುಕೂಲ ಉಂಟಾಗಲಿದೆ ಎಂದು ತಿಳಿಸಿದರು.
ಪುತ್ತೂರಿನಿಂದ ಮೈಸೂರಿಗೆ ತೆರಳುವ ಕಂಬಳದ ಕೋಣಗಳ ವೀಕ್ಷಣೆಗೆ ಕುಶಾಲನಗರದಲ್ಲಿ ಅವಕಾಶ ಕಲ್ಪಿಸಿದ್ದು ಹೆಚ್ಚಿನ ಮಂದಿ ಆಗಮಿಸುವಂತೆ ಅವರು ಮನವಿ ಮಾಡಿದರು.ಜಿಪಂ, ತಾಪಂ ಮೀಸಲಾತಿ ಸಂಬಂಧ ಉಂಟಾಗಿರುವ ಅಸಮಧಾನದ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು, ಮೀಸಲಾತಿ ನಿಗದಿ, ಬದಲಾವಣೆ ನಮ್ಮ ಕೈಯಲ್ಲಿಲ್ಲ. ಪುರುಷರಷ್ಟೆ ಮಹಿಳೆಯರಿಗೂ ಸ್ಪರ್ಧಿಸಲು ಸಮಾನ ಅವಕಾಶ ಲಭಿಸಿದೆ. ಮಹಿಳಾ ಮತದಾರರು ಸಾಕಷ್ಟಿದ್ದಾರೆ. ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಇದೆ. ಅಧಿಕಾರಿಗಳು ರೊಟೇಷನ್ ಪ್ರಕಾರ ಏನು ಬಂದಿದೆ ಎಂದು ನೋಡಿಕೊಂಡು ಕಾನೂನಾತ್ಮಕವಾಗಿ ಪರಿಶೀಲನೆ ನಡೆಸಬೇಕು. ಎಲ್ಲರನ್ನೂ ಖುಷಿ ಪಡಿಸುವುದು ಈ ವಿಚಾರದಲ್ಲಿ ಕಷ್ಟ. ಆಕ್ಷೇಪಣೆ ಸಲ್ಲಿಸಿದ ನಂತರ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ ಎಂದರು. ನೂತನ ಬೋರ್ಡ್ ಗಳು ಮೂಲೆಗುಂಪಾಗದಂತೆ ಹಾಗೂ ಅಗತ್ಯ ಸ್ವಚ್ಚತೆ ಕಾಪಾಡಿಕೊಳ್ಳುವಂತೆ ಅವರು ಮುಖ್ಯಾಧಿಕಾರಿ ಗೆ ಸಲಹೆ ನೀಡಿದರು.