ನಾಡಿನ ಕಬ್ಬು ಬೆಳಗಾರರು ತಾಳ್ಮೆಯಿಂದ ಇರಬೇಕು. ಇದು ಕರ್ನಾಟಕದ ಸಮಸ್ಯೆ ಅಲ್ಲ, ರಾಷ್ಟ್ರದ ಎಲ್ಲಾ ಬೆಳೆಗಾರರ ಸಮಸ್ಯೆ. ಮಹಾರಾಷ್ಟ್ರದ ನಾಯಕರೊಂದಿಗೂ ಕಬ್ಬಿನ ಬೆಲೆ ವಿಚಾರವಾಗಿ ಚರ್ಚೆ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರಾಜ್ಯದ ಕಬ್ಬು ಬೆಳೆಗಾರರಿಗೆ ಮನವಿ ಮಾಡಿದರು.
ಉಡುಪಿ : ನಾಡಿನ ಕಬ್ಬು ಬೆಳಗಾರರು ತಾಳ್ಮೆಯಿಂದ ಇರಬೇಕು. ಇದು ಕರ್ನಾಟಕದ ಸಮಸ್ಯೆ ಅಲ್ಲ, ರಾಷ್ಟ್ರದ ಎಲ್ಲಾ ಬೆಳೆಗಾರರ ಸಮಸ್ಯೆ. ಮಹಾರಾಷ್ಟ್ರದ ನಾಯಕರೊಂದಿಗೂ ಕಬ್ಬಿನ ಬೆಲೆ ವಿಚಾರವಾಗಿ ಚರ್ಚೆ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರಾಜ್ಯದ ಕಬ್ಬು ಬೆಳೆಗಾರರಿಗೆ ಮನವಿ ಮಾಡಿದರು. ಅವರು ಇಲ್ಲಿನ ಕಾಪುವಿನ ಶ್ರೀಕ್ಷೇತ್ರ ಉಚ್ಚಿಲದ ಮಹಾಲಕ್ಷ್ಮಿದೇವಸ್ಥಾನದ ದಸರಾದಲ್ಲಿ ಭಾಗವಹಿಸಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಕಬ್ಬು ಬೆಳೆಗಾರರು ಉಳಿಯಬೇಕು, ಕಾರ್ಖಾನೆಗಳು ಉಳಿಯಬೇಕು. ಇದು ನಮ್ಮ ಧ್ಯೇಯ. ಈ ಬಗ್ಗೆ ಕೇಂದ್ರ ಸರ್ಕಾರದ ಮಂತ್ರಿಗಳೊಂದಿಗೆ ಚರ್ಚೆ ಮಾಡಿದ್ದೇವೆ. ಅವರು ಸಭೆ ಕರೆದಿದ್ದಾರೆ. ಈ ಸಲ ಮಳೆ ಇಲ್ಲದೆ ಬೆಳೆ ಕೂಡ ಕಡಿಮೆಯಾಗಿದೆ. ಯಾರೂ ಕೂಡ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು " ಎಂದರು.
ಕಳೆದ 10 ವರ್ಷಗಳಿಂದ ಸಕ್ಕರೆ, ಕಬ್ಬಿನ ಬೆಲೆಯಾಗಲಿ ಜಾಸ್ತಿಯಾಗಿಲ್ಲ. ಕಳೆದ ಸಲ ಸರ್ಕಾರದಿಂದ ಕಬ್ಬಿನ ಬೆಳೆಗಾರರಿಗೆ ನೆರವಾಗುವ ಬಗ್ಗೆ ಘೋಷಣೆ ಮಾಡಿದ್ದೆವು. ಅದನ್ನು ಮುಂದುವರಿಸುತ್ತೇವೆ. ಎಲ್ಲರೂ ಸ್ವಲ್ಪ ತಾಳ್ಮೆಯಿಂದ ಇರಿ. ಈ ಬಗ್ಗೆ ಚರ್ಚೆ ಮಾಡೋಣ ಎಂದು ಹೇಳಿದರು.
ಎಸ್ ಐಆರ್ ಹೋರಾಟದ ಬಗ್ಗೆ ಕೇಳಿದಾಗ, ಪಕ್ಷ ಭೇದವಿಲ್ಲದೆ ಎಲ್ಲರ ಮತವನ್ನು ಉಳಿಸಬೇಕು. ನಾಡಿನ ಜನತೆಗೆ ಮತದಾನ ಸಂವಿಧಾನ ನೀಡಿರುವ ಹಕ್ಕು. ಅದನ್ನು ರಕ್ಷಿಸುವ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತೇನೆ'''''''''''''''' ಎಂದು ಹೇಳಿದರು.
ಪ್ರಯತ್ನ ವಿಫಲವಾದರೂ ಪ್ರಾರ್ಥನೆ ಫಲಿಸುತ್ತದೆ !: ತಾವು ನಿರಂತರವಾಗಿ ಕರಾವಳಿಗೆ ಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್ ಅವರು, ಕರಾವಳಿ ಪವಿತ್ರವಾದ ಭೂಮಿ. ಇಲ್ಲಿ ಪ್ರಯತ್ನ ವಿಫಲವಾದರೂ, ಇಲ್ಲಿ ಸಲ್ಲಿಸುವ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂಬ ನಂಬಿಕೆ ಇದೆ. ಇಲ್ಲಿನ ಜನರ ಸೇವೆ ಮಾಡೋದಕ್ಕೆ, ಜನರ ಸಮಸ್ಯೆಗಳನ್ನು ಬಗೆಹರಿಸೋಕ್ಕೆ ಅವಕಾಶ ದೊರೆತಿದೆ. ಈಗ ಮಹಾಲಕ್ಷ್ಮೀ ದರ್ಶನ ಮಾಡಿ, ಪ್ರಾರ್ಥನೆ ಸಲ್ಲಿಸುವುದಕ್ಕೆ ಇಲ್ಲಿಗೆ ಬಂದಿದ್ದೇನೆ'''''''''''''''' ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.