ಸಕ್ಕರೆ ಜಿಲ್ಲೆಯಲ್ಲಿ 2024ಕ್ಕೆ ಅಕ್ಕರೆಯ ಸ್ವಾಗತ

KannadaprabhaNewsNetwork | Published : Jan 1, 2024 1:15 AM

ಸಾರಾಂಶ

ಬೆಳಗಾವಿ: ಹಲವು ಸಿಹಿ, ಕಹಿ ಘಟನೆಗಳೊಂದಿಗೆ 2023ನೇ ವರ್ಷ ಮುಕ್ತಾಯಗೊಳುತ್ತಿರುವ ಹಿನ್ನೆಲೆಯಲ್ಲಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರ ತಡರಾತ್ರಿ 2023ಕ್ಕೆ ಗುಡ್‌ಬೈ ಹೇಳಿ, 2024ನೇ ಹೊಸವರ್ಷವನ್ನು ಅತ್ಯಂತ ಸಂಭ್ರಮದಿಂದ ಬರಮಾಡಿಕೊಂಡರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಹಲವು ಸಿಹಿ, ಕಹಿ ಘಟನೆಗಳೊಂದಿಗೆ 2023ನೇ ವರ್ಷ ಮುಕ್ತಾಯಗೊಳುತ್ತಿರುವ ಹಿನ್ನೆಲೆಯಲ್ಲಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರ ತಡರಾತ್ರಿ 2023ಕ್ಕೆ ಗುಡ್‌ಬೈ ಹೇಳಿ, 2024ನೇ ಹೊಸವರ್ಷವನ್ನು ಅತ್ಯಂತ ಸಂಭ್ರಮದಿಂದ ಬರಮಾಡಿಕೊಂಡರು.

ಕುಂದಾನಗರಿಯಲ್ಲಿ ಇತ್ತೀಚಿನ ದಿನಗಳಲ್ಲಿ ಓಲ್ಡ್ ಮ್ಯಾನ್ ಅತ್ಯಂತ ಜನಮನ್ನಣೆ ಪಡೆದುಕೊಂಡಿದೆ. 2023ರ ಕೊನೆಯ ದಿನವಾದ ಭಾನುವಾರ ರಾತ್ರಿ 12 ಗಂಟೆಗೆ ಓಲ್ಡ್ ಮ್ಯಾನ್ ಪ್ರತಿಕೃತಿ ದಹನ ಮಾಡಿ ಹೊಸವರ್ಷ ಬರಮಾಡಿಕೊಂಡರು. ಯುವಕ, ಯುವತಿಯರು, ಮಕ್ಕಳು ಮಧ್ಯರಾತ್ರಿ ಗಲ್ಲಿ ಗಲ್ಲಿಗಳು, ರಸ್ತೆಗಳಲ್ಲಿ ಓಲ್ಡ್ ಮ್ಯಾನ್ ಪ್ರತಿಕೃತಿ ದಹನ ಮಾಡಿ ಹ್ಯಾಪೀ ನ್ಯೂ ಇಯರ್ ಎಂದು ಕೂಗಿ ಹೊಸ ವರ್ಷವನ್ನು ವೆಲ್ ಕಮ್ ಎಂದು ಬರಮಾಡಿಕೊಂಡರು.

ನಗರ ಹಾಗೂ ಹೊರವಲಯದಲ್ಲಿರುವ ಐಷಾರಾಮಿ ಹೊಟೇಲ್‌, ಬೆಳಗಾಮ್‌ ಕ್ಲಬ್‌, ಧಾಬಾ ಹಾಗೂ ರೆಸಾರ್ಟ್‌ಗಳಲ್ಲಿ ಹೊಸವರ್ಷ ಆಚರಿಸಿದರು. ಅದರಲ್ಲೂ ಯುವಕ-ಯುವತಿಯರು ಜೊತೆಯಾಗಿ ಪಬ್‌, ಹೋಟೆಲ್‌ಗಳಲ್ಲಿ ಯುವಕ, ಯುವತಿಯರು ಮದ್ಯ ಸೇವಿಸಿ ಸಿನಿಮಾ ಹಾಡುಗಳಿಗೆ ಕುಣಿದು ಕುಪ್ಪಳಿಸಿದರೆ, ಬಹತೇಕರು ನಶೆ ಗುಂಗಿನಲ್ಲಿ ಕುಣಿದು ಕುಪ್ಪಳಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಜನರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಮೇಲೆ ಹ್ಯಾಪಿ ನ್ಯೂ ಇಯರ್‌ ಎಂದು ಬರೆದು, ಓಲ್ಡ್‌ಮ್ಯಾನ್‌ ದಹಿಸಿದರು. ಎಲ್ಲೆಂದರಲ್ಲಿ ಮದ್ಯದ ಬಾಟಲ್‌, ಮದ್ಯದ ಟ್ರೆಟ್ರಾ ಪ್ಯಾಕ್‌ ಎಸೆದಿರುವುದ ಕಂಡುಬಂತು. ತಡರಾತ್ರಿ ಗುಂಡು, ತುಂಡು ಏರ್ಪಡಿಸಿ, ಬಾಡೂಟ ಸೇವಿಸಿ ಸಂಭ್ರಮಿಸಿದರು.

ಬಹುತೇಕ ಬಾರ್‌ ಆ್ಯಂಡ್ ರೆಸ್ಟೋರೆಂಟ್‌ , ಮದ್ಯದಂಗಡಿಗಳು ಹೋಟೆಲ್ ಗಳು ತುಂಬಿ ತುಳುಕುತ್ತಿದ್ದವು.

ಖಾನಾಪುರ ರಸ್ತೆ, ಕ್ಯಾಂಪ್‌ ಪ್ರದೇಶದಲ್ಲಿ ಮೋರೆ ಎಂಬ ಯುವಕ ಪ್ರತಿ ವರ್ಷ ವಿವಿಧ ರೂಪಗಳಲ್ಲಿ ಓಲ್ಡ್ ಮ್ಯಾನ್ ತಯಾರಿ ಮಾಡುತ್ತಾನೆ. ಇಲ್ಲಿ ಕಳೆದ 40 ವರ್ಷಗಳಿಂದ ಓಲ್ಡ್ ಮ್ಯಾನ್ ಮಾಡಿ ದಹನ ಮಾಡು ಕಾರ್ಯ ನಡೆಯುತ್ತಿದೆ. ಈ ವರ್ಷವೂ 4 ಅಡಿಯಿಂದ 15 ರಿಂದ 20 ಅಡಿಗಳವರೆಗೆ ವಿವಿಧ ರೂಪದ ಒಲ್ಡ್‌ ಮ್ಯಾನ್‌ ಗಳನ್ನು ಮಾಡಿದ್ದರು.

Share this article