ಭಾರತೀನಗರದಲ್ಲಿ ಕನ್ನಡ ಜ್ಯೋತಿ ರಥಯಾತ್ರೆಗೆ ಆತ್ಮೀಯ ಸ್ವಾಗತ

KannadaprabhaNewsNetwork |  
Published : Aug 26, 2024, 01:33 AM IST
25ಕೆಎಂಎನ್ ಡಿ19 | Kannada Prabha

ಸಾರಾಂಶ

ಕರ್ನಾಟಕ ರಾಜ್ಯಕ್ಕೆ 50 ವರ್ಷ ಸಂದ ಅಂಗವಾಗಿ ಸಂಚರಿಸುತ್ತಿರುವ ಕನ್ನದ ಜ್ಯೋತಿ ರಥವನ್ನು ಗ್ರಾಪಂ ಮತ್ತು ನಾಡಕಚೇರಿ ವತಿಯಿಂದ ಸ್ವಾಗತಿಸಲಾಯಿತು. ಮಂಡ್ಯ, ಹನುಮಂತನಗರ ಮಾರ್ಗವಾಗಿ ಭಾರತೀನಗರಕ್ಕೆ ಆಗಮಿಸಿದ ಕನ್ನಡ ರಥಯಾತ್ರೆಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಎನ್.ಸುಧಾ ಪೂಜೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಭಾರತೀನಗರ

ಕರ್ನಾಟಕ ರಾಜ್ಯಕ್ಕೆ 50 ವರ್ಷ ಸಂದ ಅಂಗವಾಗಿ ಸಂಚರಿಸುತ್ತಿರುವ ಕನ್ನದ ಜ್ಯೋತಿ ರಥವನ್ನು ಗ್ರಾಪಂ ಮತ್ತು ನಾಡಕಚೇರಿ ವತಿಯಿಂದ ಸ್ವಾಗತಿಸಲಾಯಿತು.

ಮಂಡ್ಯ, ಹನುಮಂತನಗರ ಮಾರ್ಗವಾಗಿ ಭಾರತೀನಗರಕ್ಕೆ ಆಗಮಿಸಿದ ಕನ್ನಡ ರಥಯಾತ್ರೆಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಎನ್.ಸುಧಾ ಪೂಜೆ ಸಲ್ಲಿಸಿದರು.

ಈ ವೇಳೆ ಉಪ ತಹಸೀಲ್ದಾರ್ ಶಿವಲಿಂಗಯ್ಯ, ವಿಎ ಜೆ.ರವಿ, ಆರ್‌ಐ ಮಹೇಶ್, ರವೀಂದ್ರ, ಗ್ರಾಪಂ ಸದಸ್ಯರಾದ ಕೆ.ಟಿ.ಶ್ರೀನಿವಾಸ್, ವೆಂಕಟೇಶ್, ಮಂಜುನಾಥ್, ಮಂಡ್ಯ ತಹಸೀಲ್ದಾರ್ ಶಿವಕುಮಾರ್ ಬೀರ್ದಾರ್, ಕಸಾಪ ಚಂದ್ರಲಿಂಗು, ದರಸಗುಪ್ಪೆ ಧನಂಜಯ್, ಪತ್ರಕರ್ತ ಅಣ್ಣೂರು ಸತೀಶ್, ಸರ್ಕಾರಿ ಸ್ವತಂತ್ರ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ರಮೇಶ್, ಉಪನ್ಯಾಸಕ ಕೆ.ಎಲ್.ಶಿವಾನಂದ್, ನಿರಾಜಾಕ್ಷ ಸೇರಿದಂತೆ ಹಲವರು ಪುಷ್ಪನಮನ ಸಲ್ಲಿಸಿ ಬೀಳ್ಕೊಟ್ಟರು.

ನಂತರ ಮದ್ದೂರು-ಮಳವಳ್ಳಿ ಹೆದ್ದಾರಿಯಲ್ಲಿ ಸಂಚರಿಸಿ ನೆಲಮಾಕನಹಳ್ಳಿ ಮೂಲಕ ಮಳವಳ್ಳಿ ತಾಲೂಕಿಗೆ ತಲುಪಿತು.

ಎಸಿ ನಂದೀಶ್ ಅಮಾನತ್ತಿಗೆ ಬಿ.ಟಿ.ಮಂಜುನಾಥ್ ಸ್ವಾಗತ

ಪಾಂಡವಪುರ:ಉಪವಿಭಾಗಾಧಿಕಾರಿ ಎಲ್.ಎಂ.ನಂದೀಶ್‌ ಅವರನ್ನು ಅಮಾನತುಗೊಳಿಸಿದ ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ಮುಖಂಡ ಬಿ.ಟಿ.ಮಂಜುನಾಥ್ ಅಭಿನಂದನೆ ಸಲ್ಲಿಸಿದ್ದಾರೆ.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಂಡವಪುರ ಎಸಿ ಎಲ್.ಎಂ.ನಂದೀಶ್‌ ಒಬ್ಬ ಭ್ರಷ್ಟ ಅಧಿಕಾರಿಯಾಗಿದ್ದರು. ನಿತ್ಯ ಸಾರ್ವಜನಿಕರು, ರೈತರಿಂದ ಹಣವನ್ನುಎದುರು ನೋಡುತ್ತಿದ್ದರು. ಇಂತಹ ಅಧಿಕಾರಿಯನ್ನು ಸರ್ಕಾರ ಅಮಾನತುಗೊಳಿಸಿರುವುದು ಸ್ವಾಗತಾರ್ಹವಾಗಿದೆ ಎಂದರು.ನಂದೀಶ್ ಅವರನ್ನು ಕೇವಲ ಅಮಾನತ್ತು ಮಾಡೋದಲ್ಲ. ಇವರನ್ನು ಕಾಯಂ ಆಗಿ ಸೇವೆಯಿಂದ ವಜಾಗೊಳಿಸಿ ಮನೆಗೆ ಕಳುಹಿಸಬೇಕು. ಜತೆಗೆ ಕಾನೂನು ರೀತಿ ಶಿಕ್ಷೆಗೆ ಒಳಪಡಿಸಬೇಕು. ಇದು ತಾಲೂಕಿನ ಉಳಿದ ಅಧಿಕಾರಿಗಳಿಗೆ ಎಚ್ಚರಿಕೆ ಗಂಟೆಯಾಗಬೇಕು ಎಂದು ಆಗ್ರಹಿಸಿದರು.

ತಾಲೂಕಿನಲ್ಲಿ ಇನ್ನೂ ಕೆಲವು ಅಧಿಕಾರಿಗಳು ಭ್ರಷ್ಟಚಾರದಲ್ಲಿ ಮುಳುಗಿದ್ದಾರೆ. ಮುಂದೆಯಾದರು ಭ್ರಷ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಕೆಲಸ ಮಾಡದೆ ಹೋದರೆ ನಿಮಗೂ ಶಿಕ್ಷೆ ಕಟ್ಟಿಟ್ಟ ಬುತ್ತಿಯಾಗಿದೆ. ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಎಚ್ಚೆತ್ತು ಜನಸಾಮಾನ್ಯರು, ರೈತರನ್ನು ಹೆಚ್ಚು ಕಚೇರಿಗೆ ಅಲೆದಾಡಿಸದಂತೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು. ಸ್ಪಂದಿಸಿ ಕೆಲಸ ಮಾಡಬೇಕುಎಂದು ಒತ್ತಾಯಿಸಿದ್ದಾರೆ.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ