ರಾಮನಗರದಲ್ಲಿ ಮಾತಾ ರಾಜಲಕ್ಷ್ಮೀ ಮಂದ ಬುಲೆಟ್ ಯಾತ್ರೆಗೆ ಸ್ವಾಗತ

KannadaprabhaNewsNetwork |  
Published : Feb 28, 2024, 02:33 AM IST
27ಕೆಆರ್ ಎಂಎನ್ 3.ಜೆಪಿಜಿರಾಮನಗರಕ್ಕೆ ಆಗಮಿಸಿದ ಮಾತಾ ರಾಜಲಕ್ಷ್ಮೀ ಮಂದ ಅವರ  ಬುಲೆಟ್ ಯಾತ್ರೆಗೆ ಬಿಜೆಪಿ ಕಾರ್ಯಕರ್ತರು ಸ್ವಾಗತಕೋರಿದರು. | Kannada Prabha

ಸಾರಾಂಶ

ವೋಟ್ ಫಾರ್ ನೇಷನ್ ಘೋಷಣೆ ಅಡಿಯಲ್ಲಿ ತಮಿಳುನಾಡಿನಿಂದ ದೆಹಲಿವರೆಗೆ ಮಾತಾ ರಾಜಲಕ್ಷ್ಮೀ ಮಂದ ಅವರು ಕೈಗೊಂಡಿರುವ ಬುಲೆಟ್ ಯಾತ್ರೆಗೆ ರಾಮನಗರದಲ್ಲಿ ಮಂಗಳವಾರ ಬಿಜೆಪಿ ಕಾರ್ಯಕರ್ತರು ಸ್ವಾಗತ ಕೋರಿದರು.

ತಮಿಳುನಾಡಿನಿಂದ ದೆಹಲಿವರೆಗೆ ಸಂಚಾರ । ಅದ್ಧೂರಿಯಾಗಿ ಬರಮಾಡಿಕೊಂಡ ಬಿಜೆಪಿ ಕಾರ್ಯಕರ್ತರು

ಕನ್ನಡಪ್ರಭ ವಾರ್ತೆ ರಾಮನಗರ

ವೋಟ್ ಫಾರ್ ನೇಷನ್ ಘೋಷಣೆ ಅಡಿಯಲ್ಲಿ ತಮಿಳುನಾಡಿನಿಂದ ದೆಹಲಿವರೆಗೆ ಮಾತಾ ರಾಜಲಕ್ಷ್ಮೀ ಮಂದ ಅವರು ಕೈಗೊಂಡಿರುವ ಬುಲೆಟ್ ಯಾತ್ರೆಗೆ ನಗರದಲ್ಲಿ ಮಂಗಳವಾರ ಬಿಜೆಪಿ ಕಾರ್ಯಕರ್ತರು ಸ್ವಾಗತ ಕೋರಿದರು.

ಮಾತಾ ರಾಜಲಕ್ಷ್ಮೀ ಮಂದರವರು ವೋಟ್ ಫಾರ್ ಮೋದಿ, ವೋಟ್ ಫಾರ್ ನೇಷನ್, ಮೈ ವೋಟ್ ಫಾರ್ ಮೋದಿ ಎಂಬ ಸಂದೇಶದೊಡನೆ ದೇಶದ 15 ರಾಜ್ಯಗಳಲ್ಲಿ ಬುಲೆಟ್ ಮುಖಾಂತರ ಯಾತ್ರೆ ಕೈಗೊಂಡಿದ್ದಾರೆ. ಈ ಯಾತ್ರೆ ರಾಮನಗರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಆಗಮಿಸಿದಾಗ ಅವರನ್ನು ಬಿಜೆಪಿ ಕಾರ್ಯಕರ್ತರು ಸ್ವಾಗತಿಸಿದರು. ನಂತರ ರಾಮನಗರದ ಎಂ.ಜಿ. ರಸ್ತೆ, ಮುಖ್ಯರಸ್ತೆ, ಐಜೂರು ಸರ್ಕಲ್ ಮುಖಾಂತರ ಎಪಿಎಂಸಿವರೆಗೆ ಯಾತ್ರೆಯಲ್ಲಿ ಪಾಲ್ಗೊಂಡು ಬೀಳ್ಕೊಟ್ಟರು.

ಮಾತಾ ರಾಜಲಕ್ಷ್ಮೀ ಮಂದ (ಬುಲೆಟ್ ರಾಣಿ) ಮಾತನಾಡಿ, ವೋಟ್ ಫಾರ್ ಮೋದಿ, ವೋಟ್ ಫಾರ್ ನೇಷನ್, ಮೈ ವೋಟ್ ಫಾರ್ ಮೋದಿ ಎಂಬ ಸಂದೇಶದೊಡನೆ ದೇಶದ 15 ರಾಜ್ಯಗಳಲ್ಲಿ ಬುಲೆಟ್ ಮುಖಾಂತರ ಬೈಕ್ ರ್‍ಯಾಲಿ ನಡೆಸಲಾಗುತ್ತಿದೆ. ಯಾತ್ರೆಯ ಸಂದೇಶ ಮತ್ತೊಮ್ಮೆ ಮೋದಿ ಅವರು ದೇಶದ ಪ್ರಧಾನಿಯಾಗಬೇಕು ಎಂಬುದಾಗಿದೆ ಎಂದರು.

ತಮಿಳುನಾಡಿನಿಂದ ಫೆ. 11 ರಂದು ಪ್ರಾರಂಭವಾಗಿರುವ ಯಾತ್ರೆ ದೇಶದ 15 ರಾಜ್ಯಗಳಲ್ಲಿ ಸಂಚರಿಸಿ 65 ದಿನಗಳಲ್ಲಿ ದೆಹಲಿ ತಲುಪಲಿದ್ದು. 21 ಸಾವಿರ ಕಿಮೀ. ಕ್ರಮಿಸಲಾಗುವುದು. ಭಾರತದ ಉಜ್ವಲ ಭವಿಷ್ಯಕ್ಕಾಗಿ ಭಾರತವನ್ನು ವಿಶ್ವದಲ್ಲಿಯೇ ವಿಶ್ವಗುರು ಮಾಡಲಿಕ್ಕಾಗಿ ಮೋದಿ ನೇತೃತ್ವ ಬೇಕಾಗಿದೆ. ಹಾಗಾಗಿ ಮೊತ್ತೊಂದು ಬಾರಿ ಮೋದಿಯವರು ಪ್ರಧಾನ ಮಂತ್ರಿ ಆಗಬೇಕು. ಈ ಸಂದೇಶವನ್ನು ಜನರಿಗೆ ತಲುಪಿಸುವ ಸಲುವಾಗಿ ಬುಲೆಟ್ ರೈಡ್ ಮೂಲಕ ಯಾತ್ರೆ ಕೈಗೊಳ್ಳಲಾಗಿದೆ. ಯತ್ರೆಯಲ್ಲಿ ಅಭೂತಪೂರ್ವ ಬೆಂಬಲ ಸಿಗುತ್ತಿದೆ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ನಗರ ಅಧ್ಯಕ್ಷ ದರ್ಶನ್ ರೆಡ್ಡಿ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಪ್ರಕಾಶ್, ಪ್ರಾಧಿಕಾರ ಮಾಜಿ ಸದಸ್ಯರಾದ ಕಾಳಯ್ಯ, ದಿನೇಶ್, ಮುಖಂಡರಾದ ನಾಗೇಶ್, ರಾಜು, ಚಂದ್ರಶೇಖರ್ ರೆಡ್ಡಿ, ರಾಮಾಂಜನೇಯ, ಬಿಜೆಪಿ ಮಂಜು, ಪುಷ್ಪಲತಾ, ರಮೇಶ್, ಸಂಜಯ್, ಧರ್ಮೇಂದ್ರ ,ಬಸವರಾಜು, ರಮೇಶ್, ಮಾರೇಗೌಡ, ಮೊಮ್ಮೇಗೌಡ, ಕೃಷ್ಣ, ಲಕ್ಷ್ಮೀ, ಯಶವಂತರಾವ್ ಹಾಜರಿದ್ದರು.

ರಾಮನಗರಕ್ಕೆ ಆಗಮಿಸಿದ ಮಾತಾ ರಾಜಲಕ್ಷ್ಮೀ ಮಂದ ಅವರ ಬುಲೆಟ್ ಯಾತ್ರೆಗೆ ಬಿಜೆಪಿ ಕಾರ್ಯಕರ್ತರು ಸ್ವಾಗತ ಕೋರಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...