ಪುತ್ತೂರು: ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಕಮಿಟಿ ಅಧ್ಯಕ್ಷ ಹಾಗೂ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ. ಕುಟುಂಬದ ವತಿಯಿಂದ ೧೦ರಂದು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರಿಗೆ ಸಮರ್ಪಣೆ ಆಗಲಿರುವ ಬೆಳ್ಳಿರಥ ಯಾತ್ರೆಗೆ ಮಂಗಳವಾರ ಸಂಜೆ ಪುತ್ತೂರು ನಗರದಲ್ಲಿ ಸ್ವಾಗತ ನೀಡಲಾಯಿತು.
ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನದಲ್ಲಿ ಬೆಳ್ಳಿರಥದ ಮುಂದೆ ತೆಂಗಿನ ಕಾಯಿ ಒಡೆದು ಪುಷ್ಪಾರ್ಚನೆ ಮಾಡಲಾಯಿತು. ಅಲ್ಲಿಂದ ವಾಹನ ಜಾಥಾ ಮೂಲಕ ತೆಂಕಿಲ ಒಕ್ಕಲಿಗ ಸಮಯದಾಯ ಭವನಕ್ಕೆ ಕರೆ ತರಲಾಯಿತು. ರಥಕ್ಕೆ ವಿವೇಕಾನಂದ ಶಾಲೆಯ ಬಳಿಯಿಂದ ಗೌಡ ಸಮುದಾಯ ಭವನದ ತನಕ ಭಜನೆಯೊಂದಿಗೆ ಪೂರ್ಣ ಸ್ವಾಗತ ನೀಡಲಾಯಿತು.ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ಕಲ್ಲೇಗ, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಮಾಜಿ ಶಾಸಕ ಸಂಜೀವ ಮಠಂದೂರು ಸಹಿತ ಹಲವಾರು ಮಂದಿ ತೆಂಗಿನ ಕಾಯಿ ಒಡೆದರು.ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಪಂಚ ಗ್ಯಾರೆಂಟಿ ಯೋಜನೆ ಜಿಲ್ಲಾ ಅಧ್ಯಕ್ಷ ಭರತ್ ಮುಂಡೋಡಿ, ಕಲ್ಲೇಗ ರೂರಲ್ ಡೆವೆಲಪ್‌ಮೆಂಟ್ ಟ್ರಸ್ಟ್ ಅಧ್ಯಕ್ಷ ಸಂಜೀವ ನಾಯಕ್ ಕಲ್ಲೇಗ, ನಗರಸಭೆ ಹಿರಿಯ ಸದಸ್ಯ ಕೆ.ಜೀವಂಧರ್ ಜೈನ್, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ನಿಯೋಜಿತ ಅಧ್ಯಕ್ಷ ಸುಂದರ ಗೌಡ ನಡುಬೈಲು, ಶಾರದಾ ಭಜನಾ ಮಂದಿರದ ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಮತ್ತಿತರರು ಉಪಸ್ಥಿತರಿದ್ದರು. ತೆಂಕಿಲದಲ್ಲಿ ಸ್ವಾಗತ:
ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದಿಂದ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಸ್ವಾಗತ ಕಾರ್ಯಕ್ರಮದಲ್ಲಿ ವಿವೇಕಾನಂದ ಶಾಲೆಯ ಬಳಿಯಿಂದ ಭಜನೆಯೊಂದಿಗೆ ಪೂರ್ಣ ಕುಂಭ ಕಲಶದೊಂದಿಗೆ ರಥವನ್ನು ಬರಮಾಡಿಕೊಂಡು ಪುಷ್ಪಾರ್ಚನೆ ಮಾಡಲಾಯಿತು. ವಿವೇಕಾನಂದ ಶಾಲೆಯಲ್ಲಿ ಸತೀಶ್ ರೈ ಸಹಿತ ಹಲವಾರು ಮಂದಿ ಪುಷ್ಪಾರ್ಚನೆ ಮಾಡಿದರು.ಬೆಳ್ಳಿರಥ ಯಾತ್ರೆ ಕುಂಭಾಶಿ-ಉಡುಪಿ- ಸುರತ್ಕಲ್- ಮಂಗಳೂರು- ಬಿಸಿ ರೋಡ್-ಮಾಣಿ ಮಾರ್ಗವಾಗಿ ಪುತ್ತೂರಿಗೆ ಆಗಮಿಸಿದೆ. ಪುತ್ತೂರಿನಿಂದ ಸುಳ್ಯಕ್ಕೆ ಬೀಳ್ಕೊಡಲಾಯಿತು.