ಕನ್ನಡಪ್ರಭ ವಾರ್ತೆ ಯಾದಗಿರಿ
ನ.10ರಿಂದ ರಾತ್ರಿ 11.15ಕ್ಕೆ ಯಶವಂತಪುರದಿಂದ ಬೀದರ್‌ವರೆಗೆ ಮತ್ತು ನ.14ರಿಂದ ಬೀದರ್‌ದಿಂದ ಯಶವಂತಪುರಕ್ಕೆ ರೈಲು ತೆರಳಲಿದ್ದು, ಶನಿವಾರ ಬೆ.7.11ಕ್ಕೆ ಯಾದಗಿರಿ ರೈಲು ನಿಲ್ದಾಣಕ್ಕೆ ಆಗಮಿಸಿದಾಗ ರೈಲ್ವೆ ಲೋಕೊ ಪೈಲಟ್‌ಗಳಿಗೆ ಸನ್ಮಾನಿಸಿ, ರೈಲು ಸಂಚಾರಕ್ಕೆ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ, ವಿಶೇಷ ಹಬ್ಬಗಳಿಗೆ ರೈಲು ಓಡಿಸುವಂತೆ ಸಲ್ಲಿಸಿದ ಮನವಿಗೆ ತಕ್ಷಣ ಸ್ಪಂದಿಸಿದ ಕೇಂದ್ರ ಸರ್ಕಾರಕ್ಕೆ ಮತ್ತು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಕೃತಜ್ಞತೆಗಳು ಸಲ್ಲಿಸಿದ ಅವರು, ಈ ಮಾದರಿಯಲ್ಲಿ ಜಿಲ್ಲೆಯಾಗಿ 13 ವರ್ಷವಾದರೂ ಇನ್ನು ಅನೇಕ ರೈಲುಗಳು ನಿಲ್ಲುತ್ತಿಲ್ಲ. ಅವುಗಳನ್ನು ನಿಲುಗಡೆಗೆ ಕ್ರಮ ಕೈಗೊಳ್ಳಲು ತಿಳಿಸಿದರು.ಕೋವಿಡ್ ವೇಳೆ ತಡೆಹಿಡಿಯಲಾಗಿರುವ ವಿಜಯಪುರ-ಗುಂತಕಲ್ ರೈಲು ಪುನರಾರಂಭಿಸಬೇಕು ಮತ್ತು ನಿಲ್ದಾಣದಲ್ಲಿ ಲಿಫ್ಟ್ ಹಾಗೂ ವಿದ್ಯುತ್ ಚಾಲಿತ ವಾಹನಗಳ ಸೌಲಭ್ಯವನ್ನು ಒದಗಿಸಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.