ಕನ್ನಡಪ್ರಭ ವಾರ್ತೆ ಪಾಂಡವಪುರ
ಗ್ರಾಮದ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನ ರೆಡ್‌ಕ್ರಾಸ್ ಘಟಕ, ಎನ್‌ಎಸ್‌ಎಸ್ ಘಟಕದ ಐಕ್ಯೂಎಸಿ, ಐಐಸಿ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಕ್ಷಮ ಮೈಸೂರು ಜಿಲ್ಲಾ ಘಟಕ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ನೇತ್ರದಾನ ಅರಿವು ಹಾಗೂ ರಕ್ಷಾಬಂಧನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮರಣದ ನಂತರ ನಮ್ಮ ಕಣ್ಣು ಮಣ್ಣಿನೊಂದಿಗೆ ಮಣ್ಣಾಗುತ್ತದೆ. ಆದರೆ, ಕಣ್ಣುಗಳನ್ನು ದಾನ ಮಾಡಿದರೆ ಈ ಕಣ್ಣುಗಳು ಇಬ್ಬರು ಅಂಧರ ಬಾಳಿಗೆ ಬೆಳಕಾಗುತ್ತವೆ. ನೇತ್ರದಾನದಂತಹ ಮಹತ್ಕಾರ್ಯದಲ್ಲಿ ನಾವೆಲ್ಲರೂ ಪಾಲ್ಗೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ನೇತ್ರದಾನದ ಬಗ್ಗೆ ಇರುವ ಮೂಢನಂಬಿಕೆಯನ್ನು ಯುವ ಸಮೂಹ ನಾಶ ಮಾಡಬೇಕು ಎಂದರು.ಮೈಸೂರು ಜಿಲ್ಲಾ ಸಕ್ಷಮದ ಅಧ್ಯಕ್ಷ ಜಯರಾಮು ಮಾತನಾಡಿ, ರಕ್ಷಾಬಂಧನವು ಪ್ರೀತಿ, ಬಾಂಧವ್ಯ ಮತ್ತು ಪರಸ್ಪರ ರಕ್ಷಣೆಯ ಸಂಕೇತ. ನಾವೆಲ್ಲರೂ ದೇಶದ ಸಮೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
ನೇತ್ರದಾನದ ಮೂಲಕ ಒಬ್ಬ ವ್ಯಕ್ತಿ ಇಬ್ಬರು ಅಂಧರಿಗೆ ಪ್ರಪಂಚವನ್ನು ನೋಡುವಂತೆ ಮಾಡಬಹುದು. ಅದು ನಿಮ್ಮಂಥ ವಿದ್ಯಾರ್ಥಿ ಸಮೂಹದಿಂದ ಮಾತ್ರ ಸಾಧ್ಯ. ಎಸ್‌ಟಿಜಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸಿ.ಎಸ್.ಪುಟ್ಟರಾಜು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಪಿ.ಶಿವರಾಜು ಅವರು ಹಲವು ಸಾಮಾಜಿಕ ಕಳಕಳಿಯ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ, ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.