ಉತ್ತಮ ನಡುವಳಿಕೆಯುಳ್ಳವರೆ ಶ್ರೇಷ್ಠ ವ್ಯಕ್ತಿಗಳು: ಜಗದೀಶ

KannadaprabhaNewsNetwork |  
Published : May 20, 2024, 01:33 AM IST
ಕೊಡೇಕಲ್ ಗ್ರಾಮದಲ್ಲಿ ನಡೆದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ಶರಣ ಜೀವಿ ಈಶ್ವರಪ್ಪ ಹೂಗಾರ ದಂಪತಿಗಳಿಗೆ ವಚನ ಪುಸ್ತಕವನ್ನು ನೀಡಿ ಗೌರವಿಸಲಾಯಿತು. | Kannada Prabha

ಸಾರಾಂಶ

ಭೂಮಿಯ ಮೇಲೆ ಜನ್ಮ ತಾಳಿದ ಪ್ರತಿಯೊಬ್ಬರೂ ಯಾರು ಶ್ರೇಷ್ಠ ಮತ್ತು ಕನಿಷ್ಟರಾಗಿ ಹುಟ್ಟುವುದಿಲ್ಲ. ಯಾರು ತಮ್ಮ ಆಚಾರ-ವಿಚಾರಗಳಿಂದ ಉತ್ತಮ ನಡುವಳಿಕೆಯಿಂದ ತಮ್ಮ ವ್ಯಕ್ತಿತ್ವಗಳಿಂದ ಗುರುತಿಸಿಕೊಳ್ಳುತ್ತಾರೋ ಅವರು ಶ್ರೇಷ್ಠರಾಗುತ್ತಾರೆ.

ಕನ್ನಡಪ್ರಭ ವಾರ್ತೆ ಕೊಡೇಕಲ್

ಭೂಮಿಯ ಮೇಲೆ ಜನ್ಮ ತಾಳಿದ ಪ್ರತಿಯೊಬ್ಬರೂ ಯಾರು ಶ್ರೇಷ್ಠ ಮತ್ತು ಕನಿಷ್ಟರಾಗಿ ಹುಟ್ಟುವುದಿಲ್ಲ. ಯಾರು ತಮ್ಮ ಆಚಾರ-ವಿಚಾರಗಳಿಂದ ಉತ್ತಮ ನಡುವಳಿಕೆಯಿಂದ ತಮ್ಮ ವ್ಯಕ್ತಿತ್ವಗಳಿಂದ ಗುರುತಿಸಿಕೊಳ್ಳುತ್ತಾರೋ ಅವರು ಶ್ರೇಷ್ಠರಾಗುತ್ತಾರೆ ಎಂದು ನಾರಾಯಣಪುರದ ಮಾತೋಶ್ರೀ ನಿಂಬೆಮ್ಮ ಪದವಿ ಪೂರ್ವ ಕಾಲೇಜಿನ ಪ್ರಾಚಾರ‍್ಯ ಜಗದೀಶ ನೂಲಿನವರ ಹೇಳಿದರು.

ಕೊಡೇಕಲ್ ಗ್ರಾಮದಲ್ಲಿ ನಡೆದ ಮನೆಯಲ್ಲಿ ಮಹಾಮನೆ ಆಧ್ಯಾತ್ಮ ಸತ್ಸಂಗ ಕಾರ್ಯಕ್ರಮದಲ್ಲಿ ಆಯುಷ್ಯ ತೀರಿದಲ್ಲದೆ ಮರಣವಿಲ್ಲ, ಭಾಷೆ ತಪ್ಪಿದರೆ ದಾರಿದ್ರ್ಯವಿಲ್ಲ ಅಂಜಲದೇಕೋ ಲೋಕ ವಿಗರ್ಭಣೆಗೆ ಅಂಜಲದೇಕೋ ಕೂಡಲಸಂಗಮದೇವಾ ನಿಮ್ಮಾಳಾಗಿ ಎಂಬ ವಚನದ ಕುರಿತು ಅವರು ಮಾತನಾಡಿದರು.

12ನೇ ಶತಮಾನದಲ್ಲಿ ಬಾಳಿದಂತಹ ಶರಣರು ತಮ್ಮ ಬದುಕನ್ನು ಸಮಾಜದ ಉದ್ದಾರಕ್ಕಾಗಿ, ಸಮಾಜದ ಬದಲಾವಣೆ ಮಾಡಲು ಜೀವನ ನಡೆಸಿದಂತಹ ಮಹಾನ ಪುರುಷರು ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬರಿಗೂ ಇಂದಲ್ಲ ನಾಳೆ ಸಾವು ಬರುವುದು ಖಚಿತ. ಆದರೆ, ಶರಣರು ಆ ಸಾವಿಗೆ ಹೆದರಲಿಲ್ಲ. ಸಾವನ್ನು ಹಿಮ್ಮೆಟಸಲಿಲ್ಲ, ಅವರು ತಮ್ಮೊಳಗಿನ ಭೌತಿಕ ವಿಷಯಗಳನ್ನು ಹಿಮ್ಮೆಟ್ಟಿಸುವ ಮೂಲಕ ಸಮಾಜದ ಒಳಿತನ್ನು ಬಯಸಿದವರು ಎಂದರು.

ಶರಣರ ವಚನಗಳಲ್ಲಿರುವ ತತ್ವಾದರ್ಶಗಳನ್ನು ಜೀವದಲ್ಲಿ ಅಳವಡಿಸಿಕೊಂಡು ಸಾಗಬೇಕು. ಅಂದಾಗ ಮಾತ್ರ ಈ ಬದುಕಿಗೊಂದು ನಿಜವಾದ ಅರ್ಥ ಬರುತ್ತದೆ ಎಂದು ಹೇಳಿದರು.

ಶ್ರೀಗುರು ಅಶ್ವಾದ್ರಿ ಆಂಜನೇಯ ಆಶ್ರಮದ ಶರಣೆ ಮಾತೋಶ್ರೀ ಗಿರಿಜಮ್ಮತಾಯಿ ಅವರ ಸಾನ್ನಿಧ್ಯದಲ್ಲಿ ಜರುಗಿದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ಸಾಹಿತಿ ಬಸಣ್ಣ ಗೋಡ್ರಿ, ಈಶ್ವರಪ್ಪ ಹೂಗಾರ, ಚಂದ್ರಶೇಖರ ಹೋಕ್ರಾಣಿ, ಸೋಮಲಿಂಗಪ್ಪ ದೊರೆ, ಕೋರಿಸಂಗಯ್ಯ ಗಡ್ಡದ, ಮಡಿವಾಳಪ್ಪ ತಮದಡ್ಡಿ, ಸಾಯಬಣ್ಣ ಬೋಗಿ, ರಾಘವೇಂದ್ರ ಗುತ್ತೆದಾರ, ಬಸನಗೌಡ ಬಿರಾದಾರ್, ಮಲ್ಲನಗೌಡ ಜೇವರಗಿ, ಭೀಮಣ್ಣ ಚಿನ್ನಾಕಾರ, ಸಿದ್ದಣ್ಣ ಶಿಂಧೆ, ಬಸವರಾಜ ಜಾಲಿಗಿಡದ, ಬಸವರಾಜ ಬಂಡಿ, ಹಣಮೇಶ ಗಿಡನ್ನೂರ ಸೇರಿದಂತೆ ಇತರರಿದ್ದರು. ಸೋಮಶೇಖರ ಪಜಗಲ್ ನಿರೂಪಿಸಿದರು. ರವಿ ಅಡ್ಡಿ ಸ್ವಾಗತಿಸಿದರು. ಮೌನೇಶ ಹೂಗಾರ ವಂದಿಸಿದರು.

PREV

Recommended Stories

ಏಕಾಏಕಿ ಟೊಮೆಟೋ ಕೇಜಿಗೆ ₹10ಕ್ಕೆ ಕುಸಿತ: ರೈತರು ಕಂಗಾಲು
ವಿಠಲಗೌಡ ತಲೆಬುರುಡೆ ತಂದ ಬಂಗ್ಲೆಗುಡ್ಡೆಯಲ್ಲಿ ಇಂದು ಮಹಜರು?