ಮಂಗಳೂರು: ಮಂಗಳೂರಿನ ಸರ್ಕಾರಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ಮಾಹಿತಿ ನೀಡಿ ತುರ್ತು ಚಿಕಿತ್ಸೆಯ ರೋಗಿಗಳನ್ನು ಕರೆತರಬೇಕೆಂದು ಸೂಚಿಸಿದ್ದರೂ, ಅದನ್ನು ಪಾಲಿಸದೇ, ಮಾಹಿತಿ ನೀಡದೇ ರೋಗಿಗಳನ್ನು ಕರೆತರುತ್ತಿರುವುದರಿಂದ ಆಸ್ಪತ್ರೆಯಲ್ಲಿ ಐಸಿಯು ಬೆಡ್‌ಗಳ ಕೊರತೆ ಉಂಟಾಗುತ್ತಿದೆ. ಈಗಾಗಲೇ ಆಸ್ಪತ್ರೆಗೆ 50 ವೆಂಟಿಲೇಟರ್ ಹಾಸಿಗೆ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವೆನ್ಲಾಕ್ ಆಸ್ಪತ್ರೆ ಅಧೀಕ್ಷಕ ಡಾ.ಶಿವಪ್ರಕಾಶ್ ತಿಳಿಸಿದರು.
ಬೇರೆ ಭಾಗಗಳಿಂದ, ಬೇರೆ ಆಸ್ಪತ್ರೆಗಳಿಂದ ವೆನ್ಲಾಕ್‌ಗೆ ರೋಗಿಗಳನ್ನು ಕರೆತರುವ ಮೊದಲು ಆಸ್ಪತ್ರೆಗೆ ಮಾಹಿತಿ ನೀಡಬೇಕು. ಬೆಡ್ ಫ್ರೀ ಇದೆಯಾ ಎಂದು ತಿಳಿಯಬೇಕು. ಇದಕ್ಕಾಗಿ ಇಲ್ಲಿ ಪಿಆರ್‌ಒ, ಹೆಲ್ಪ್‌ಡೆಸ್ಕ್ ಆರಂಭಿಸಲಾಗಿದೆ. ಆದರೂ ಮಾಹಿತಿ ನೀಡದೇ ಕರೆತರುತ್ತಿರುವುದು ಸರಿಯಲ್ಲ. ಮಾಹಿತಿ ನೀಡಿಯೇ ರೋಗಿಗಳ ಕರೆತರಬೇಕು ಎಂದರು.
ವೆನ್ಲಾಕ್ ಆಸ್ಪತ್ರೆಯಲ್ಲಿ ಒಟ್ಟು 116 ಐಸಿಯು ಬೆಡ್‌ಗಳಿದ್ದು, 92 ಐಸಿಯು ಬೆಡ್‌ಗಳು ಇತರ ಸೇವೆಗಳಿಗೆ ಹಾಗೂ 24 ಐಸಿಯು ಬೆಡ್‌ಗಳು (ವೆಂಟಿಲೇಟರ್ ಇರುವ) ಪೋಸ್ಟ್ ಅಪರೇಟಿವ್ ವಾರ್ಡ್‌ನಲ್ಲಿ ಲಭ್ಯವಿದ್ದು, ವೆಂಟಿಲೇಟರ್ ಇಲ್ಲದ 29 ಐಸಿಯು ಬೆಡ್‌ಗಳು ಲಭ್ಯವಿದೆ. ಇದರಲ್ಲಿ 21 ಎಂಐಸಿಯು, 27 ಎಸ್‌ಐಸಿಯು/ಎಚ್‌ಡಿಯು, 8 ಇಐಸಿಯು 8, 8 ಸಿಐಸಿಯು, 10 ಪಿಐಸಿಯು, 18 ಎನ್‌ಐಸಿಯು, 24 ಪೋಸ್ಟ್ ಆಪರೇಟಿವ್ ಐಸಿಯು ಒಳಗೊಂಡಿದೆ. ಪ್ರಸ್ತುತ ಮಂಜೂರಾದ 138 ಶುಶ್ರೂಷಾಧಿಕಾರಿಗಳಲ್ಲಿ 100 ಮಂದಿ ಕಾರ್ಯನಿರತರಾಗಿದ್ದು, 6 ಮಂದಿ ಶುಶ್ರೂಷ ತರಬೇತಿ ಶಾಲೆಗೆ ನಿಯೋಜನೆಗೊಂಡಿದ್ದು, 32 ಹುದ್ದೆ ಖಾಲಿ ಇದೆ. ಎನ್‌ಎಚ್‌ಎಂ 54ರಲ್ಲಿ 48 ಕಾರ್ಯನಿರತರಾಗಿದ್ದು, 6 ಹುದ್ದೆ ಖಾಲಿ, ಕೆ.ಎಂ.ಸಿ. 156 (ಕ್ಯಾಥಲ್ಯಾಬ್ ಸೇರಿ) ಕಾರ್ಯನಿರತರಾಗಿದ್ದಾರೆ. ಒಟ್ಟು 304 ಶುಶ್ರೂಷಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಲಭ್ಯವಿರುವ ಹಾಸಿಗೆಗಳಿಗೆ ಐಪಿಎಚ್ ನಿಯಮ ಪ್ರಕಾರ 830 ಶುಶ್ರೂಷಾಧಿಕಾರಿಗಳು ಅವಶ್ಯವಿದ್ದು, 304 ಮಂದಿ ಕರ್ತವ್ಯದಲ್ಲಿದ್ದು, 526 ಸಿಬ್ಬಂದಿ ಹೆಚ್ಚುವರಿ ಬೇಕಾಗಿದೆ. ಅನಾಸ್ತೇಶಿಯಾ ಟೆಕ್ನಿಷಿಯನ್ 18, ಇಂಟೆನ್ಸಿವ್ 6, ಐಸಿಯು ಟೆಕ್ನಿಷಿಯನ್ 18 ಸಿಬ್ಬಂದಿ ಬೇಕಾಗಿದೆ ಎಂದರು.ಎಲ್ಲ ಜಿಲ್ಲೆಗಳಿಂದ ರೋಗಿಗಳು ದಾಖಲು:
ಬೆಡ್ ಮಾಹಿತಿ ನೀಡಲು ಆನ್‌ಲೈನ್ ವ್ಯವಸ್ಥೆ: ವೆನ್ಲಾಕ್ ಆಸ್ಪತ್ರೆಯಲ್ಲಿ ಒಟ್ಟು ಇರುವ ಬೆಡ್, ಭರ್ತಿಯಾಗಿರುವ, ಖಾಲಿ ಇರುವ ಬೆಡ್‌ಗಳ ಮಾಹಿತಿಯನ್ನು ಆನ್‌ಲೈನ್ ಮೂಲಕ ತಿಳಿಸುವ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ. ಈ ಪ್ರಕ್ರಿಯೆಯನ್ನು ಆದಷ್ಟು ಶೀಘ್ರ ಅನುಷ್ಠಾನ ಮಾಡಲಾಗುವುದು. ಇದರಿಂದ ಬೆಡ್ ಮಾಹಿತಿ ಸಾರ್ವಜನಿಕರಿಗೆ ತಿಳಿಯಲಿದೆ ಎಂದು ಡಿಎಚ್‌ಒ ಡಾ.ತಿಮ್ಮಯ್ಯ ತಿಳಿಸಿದರು.