ಉಡುಪಿ: ಪಶ್ಚಿಮ ಬಂಗಾಲ, ಅಸ್ಸಾಂ, ಪುದುಚೇರಿ ಚುನಾವಣೆಗಳಲ್ಲಿ ಗೆದ್ದ ಪರಿಣಾಮ ಬಿಜೆಪಿ ಬಲ ಮತ್ತಷ್ಟು ಹೆಚ್ಚಾಗಿದೆ. ಈ ಕ್ರಾಂತಿಕಾರಿ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತೀನ್ ನಬೀನ್ ಹಾಗೂ ಎಲ್ಲಾ ಬಿಜೆಪಿ ಕಾರ್ಯಕರ್ತರ ಶ್ರಮ ಕಾರಣ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ತಿಳಿಸಿದರು.ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಮಾಡಿದ ಸಾಧನೆಯ ಹಿನ್ನೆಲೆಯಲ್ಲಿ ಬಿಜೆಪಿ ಉಡುಪಿ ಜಿಲ್ಲಾ ಕಚೇರಿ ಎದುರು ನಡೆದ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿದರು.
ಬಿಜೆಪಿ ಪ್ರಶಿಕ್ಷಣ ವರ್ಗದ ಮಂಗಳೂರು ವಿಭಾಗ ಪ್ರಮುಖ್ ಕೆ. ಉದಯ ಕುಮಾರ್ ಶೆಟ್ಟಿ ಮಾತನಾಡಿ, ಬಿಜೆಪಿ ನಮ್ಮ ಕುಟುಂಬ. ಶ್ರಮ ವಹಿಸಿದರೆ ಎಲ್ಲಾ ಕಡೆ ಗೆಲ್ಲಬಹುದು ಎಂಬುದಕ್ಕೆ ಪ.ಬಂಗಾಳದ ಫಲಿತಾಂಶವೇ ಸಾಕ್ಷಿ. ಇಂದು ಅಧರ್ಮ ಅಳಿದು ಧರ್ಮಕ್ಕೆ ಜಯ ಸಿಕ್ಕಿದೆ. ಅರಾಜಕತೆ ದೂರವಾಗಿದೆ ಎಂದರು.ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಮಾತನಾಡಿ, ಬಾಂಗ್ಲಾ ನುಸುಳುಕೋರರಿಗೆ ಬಿಜೆಪಿ ಗೆಲವಿನಿಂದ ತಕ್ಕ ಶಾಸ್ತಿಯಾದಂತಾಗಿದೆ. ಬಿಜೆಪಿ ಸಾಧನೆಯ ಮೂಲಕವೇ ಜನರ ವಿಶ್ವಾಸ ಗಳಿಸಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ಶ್ರೀಕಾಂತ್ ನಾಯಕ್, ಮಾಜಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಪ್ರಮುಖರಾದ ಕಿರಣ್ ಕುಮಾರ್ ಬೈಲೂರು, ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಶ್ಯಾಮಲಾ ಕುಂದರ್, ನಯನಾ ಗಣೇಶ್, ನಳಿನಿ ಪ್ರದೀಪ್ ರಾವ್, ರಾಜೇಶ್ ಕಾವೇರಿ, ಶ್ರೀನಿಧಿ ಹೆಗ್ಡೆ, ಶಿವಕುಮಾರ್ ಅಂಬಲಪಾಡಿ, ಗಿರೀಶ್ ಎಮ್. ಅಂಚನ್, ಸತ್ಯಾನಂದ ನಾಯಕ್, ದಿವಾಕರ ಶೆಟ್ಟಿ ಕಲ್ಯಾ, ಮಧುಕರ ಮುದ್ರಾಡಿ, ಶಶಾಂಕ್ ಶಿವತ್ತಾಯ, ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಸಂಧ್ಯಾ ರಮೇಶ್, ದಿಲ್ಲೇಶ್ ಶೆಟ್ಟಿ, ವಿಜಯ ಕೊಡವೂರು, ಪ್ರಭಾಕರ್ ಪೂಜಾರಿ, ಕಮಲಾಕ್ಷ ಹೆಬ್ಬಾರ್, ರುಡಾಲ್ಫ್ ಡಿಸೋಜಾ, ಆಸೀಫ್ ಕಟಪಾಡಿ, ದಿನೇಶ್ ಅಮೀನ್, ಜಗದೀಶ್ ಆಚಾರ್ಯ ಕಪ್ಪೆಟ್ಟು, ಜಿತೇಂದ್ರ ಶೆಟ್ಟಿ, ರಾಜೀವ ಕುಲಾಲ್, ವೀಣಾ ಎಸ್. ಶೆಟ್ಟಿ, ರಾಘವೇಂದ್ರ ಉಪ್ಪೂರು, ಹರಿಮಕ್ಕಿ ರತ್ನಾಕರ ಶೆಟ್ಟಿ, ಸಲೀಂ ಅಂಬಾಗಿಲು, ಶಿವರಾಮ್ ಕಾಡಿಮಾರ್ ಮತ್ತಿತರರಿದ್ದರು.