ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಶೈಕ್ಷಣಿಕ ಅಧಿವೇಶನದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಕೆಯಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟುಮಾಡಲಿದೆ ಎಂಬ ಕಾರಣಕ್ಕೆ ಎಸ್‌ಇಪಿ ಜಾರಿಗೆ ಸರ್ಕಾರ ಮುಂದಾಯಿತು. ಅದಕ್ಕಾಗಿ ಒಂದು ಸಮಿತಿಯನ್ನೂ ರಚಿಸಿತು. ಆ ಸಮಿತಿ ನೀಡಿರುವ ೧೪ ಪುಟಗಳ ವರದಿ ವೇಳಾಪಟ್ಟಿಯಂತಿದೆ. ನಂತರದಲ್ಲಿ ಆ ಸಮಿತಿ ಏನಾಯಿತೊ ಗೊತ್ತಿಲ್ಲ. ಇದುವರೆಗೂ ರಾಜ್ಯ ಶಿಕ್ಷಣ ನೀತಿಯನ್ನು ಸರ್ಕಾರದಿಂದ ಜಾರಿಗೆ ತರಲು ಸಾಧ್ಯವಾಗಿಲ್ಲ. ಈ ಕುರಿತಂತೆ ಸರ್ಕಾರ ಗಂಭೀರವಾಗಿ ಆಲೋಚಿಸಬೇಕು ಎಂದರು.
ಹಿಂದೆಲ್ಲಾ ಶಿಕ್ಷಕರ ಬೇಡಿಕೆಗಳ ಜೊತೆಗೆ ಶಿಕ್ಷಣದ ವ್ಯವಸ್ಥೆಯ ಬಗ್ಗೆಯೂ ಆಲೋಚಿಸುತ್ತಿದ್ದರು. ಈಗ ಅವರ ಸಂಖ್ಯೆ ಕ್ಷೀಣಿಸಿದೆ. ಶಿಕ್ಷಕರ ಸಮಸ್ಯೆಗಳ ಜೊತೆಗೆ ಶಿಕ್ಷಣದ ಬಗ್ಗೆಯೂ ಆಲೋಚಿಸುವ, ಸರ್ಕಾರದಿಂದ ಪರಿಹಾರ ದೊರಕಿಸುವ ಮನೋಸ್ಥಿತಿ ಬೆಳವಣಿಗೆ ಕಾಣಬೇಕಿದೆ ಎಂದರು.ತಂತ್ರಜ್ಞಾನ ಶಿಕ್ಷಣ ಬಂದಿದೆ. ಶಿಕ್ಷಣದಲ್ಲಿ ತಂತ್ರಜ್ಞಾನ ಎಷ್ಟು ಬಳಕೆಯಾಗಬೇಕೆಂಬ ಬಗ್ಗೆ ವಿವೇಚನೆಯೇ ಇಲ್ಲ. ಶೈಕ್ಷಣಿಕ ಅಸಮಾನತೆ ತಾಂಡವವಾಡುತ್ತಿದೆ. ಪ್ರಾಥಮಿಕ ಪೂರ್ವ ಶಿಕ್ಷಣದಿಂದಲೇ ಅಂಗನವಾಡಿ-ಪಬ್ಲಿಕ್ ಸ್ಕೂಲ್, ರಾಜ್ಯ, ಕೇಂದ್ರ ಪಠ್ಯಕ್ರಮ, ನವೋದಯ, ಕೇಂದ್ರೀಯ ಹೀಗೆ ವಿವಿಧ ಮಾದರಿಯ ಶಿಕ್ಷಣ ನೀಡಲಾಗುತ್ತಿದೆ. ಈ ಅಸಮಾನತೆ ತೊಡೆದುಹಾಕಿ ಎಲ್ಲಾ ಮಕ್ಕಳಿಗೂ ಸಮಾನ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸುವ ಕಡೆ ಸರ್ಕಾರಗಳು ಗಂಭಿೂಕ್ಷಿ ಪ್ರಯತ್ನ ಮಾಡಬೇಕಿದೆ ಎಂದು ಸಲಹೆ ನೀಡಿದರು.