ರಾಮನಗರ ಹೆಸರಿಂದ ಕಾಂಗ್ರೆಸ್ಸಿಗೆ ಏನು ತೊಂದರೆ?

KannadaprabhaNewsNetwork |  
Published : Jul 28, 2024, 02:05 AM IST
ಸುದ್ದಿಗೋಷ್ಠಿಯಲ್ಲಿ ಪ್ರಮೋದ ಮುತಾಲಿಕ್‌ ಮಾತನಾಡಿದರು. | Kannada Prabha

ಸಾರಾಂಶ

ನಿಮಗೆ ನಿಜವಾಗಲೂ ಸ್ವಾಭಿಮಾನ ಇದ್ದರೆ ಬ್ರಿಟಿಷರು ಇಟ್ಟ ಹೆಸರು ಬದಲಾಯಿಸಿ

ಗದಗ: ಕ್ಯಾಬಿನೆಟ್ ಸಭೆಯಲ್ಲಿ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮಾಡಿದ್ದನ್ನು ಶ್ರೀರಾಮ ಸೇನೆ ವಿರೋಧಿಸುತ್ತದೆ. ರಾಮನಗರ ಹೆಸರು ಇರುವುದಕ್ಕೆ ಕಾಂಗ್ರೆಸ್‌ಗೆ ಏನು ತೊಂದರೆ? ರಾಮನಗರ ಜಿಲ್ಲೆಯ ಹೆಸರು ಪರಿವರ್ತನೆ ಮಾಡಿದ್ದು ಹಿಂದೂ ದ್ರೋಹಿ ಕೆಲಸವಾಗಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮೊದಲಿನಿಂದಲೂ ಹಿಂದು ವಿರೋಧಿ ಕೆಲಸ ಮಾಡುತ್ತಾ ಬಂದಿದೆ. ಕಾಂಗ್ರೆಸ್ ಬಾಬರನನ್ನು ಬೆಂಬಲಿಸಿದೆ. ಬೆಂಗಳೂರಿನ 32 ಕಡೆಗಳಲ್ಲಿ ಬ್ರಿಟಿಷರ ಹೆಸರು ಇವೆ. ನಿಮಗೆ ನಿಜವಾಗಲೂ ಸ್ವಾಭಿಮಾನ ಇದ್ದರೆ ಬ್ರಿಟಿಷರು ಇಟ್ಟ ಹೆಸರು ಬದಲಾಯಿಸಿ. ಡಿ.ಕೆ. ಶಿವಕುಮಾರ ಅವರು ತಮ್ಮ ಹೆಸರನ್ನು ಡಿ.ಕೆ. ಶರೀಫ್‌ ಎಂದು ಬದಲಾಯಿಸಿಕೊಳ್ಳಲಿ. ರಾಮನಗರಕ್ಕೆ ತನ್ನದೇ ಆದ ಇತಿಹಾಸ ಇದೆ. ಭಾನುವಾರ ಕಲಬುರ್ಗಿಯಲ್ಲಿ ಸಭೆ ನಡೆಸಿ ಇಡೀ ರಾಜ್ಯಾದ್ಯಂತ ಹೋರಾಟದ ಬಗ್ಗೆ ಚರ್ಚಿಸಲಿದ್ದೇವೆ ಎಂದರು.

ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಸುಮಾರು 90 ನಾಯಿ ಮಾಂಸದ ಬಾಕ್ಸ್‌ಗಳು ಸಿಕ್ಕಿವೆ. 15 ವರ್ಷಗಳಿಂದ ಅಬ್ದುಲ್ ರಜಾಕ್ ಎನ್ನುವ ವ್ಯಕ್ತಿ ನಾಯಿ ಮಾಂಸವನ್ನು ಜನರಿಗೆ ತಿನ್ನಿಸುತ್ತಿದ್ದಾನೆ. ಇಷ್ಟೆಲ್ಲ ನಡೆಯುತ್ತಿದ್ದರೂ ಬಿಬಿಎಂಪಿ ಅಧ್ಯಕ್ಷರು ಕತ್ತೆ ಕಾಯುತ್ತಿದ್ದಾರಾ? ಹಿಂದುಗಳೇ ರುಚಿ-ರುಚಿಯಾದ ಹಂದಿ, ನಾಯಿ, ನರಿ, ಬೆಕ್ಕಿನ ಮಾಂಸ ತಿನ್ನಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಬ್ದುಲ್ ರಜಾಕ್ ಒಬ್ಬ ದೇಶದ್ರೋಹಿ, ಈ ಕೆಲಸ ಮಾಡುತ್ತಿದ್ದಾನೆ. ರಾಜಸ್ಥಾನದಿಂದ ನಾಯಿ ಮಾಂಸ ತರಿಸಿ ಮಾರುತ್ತಿದ್ದಾನೆ. ಅಬ್ದುಲ್ ರಜಾಕ್ ಬೆನ್ನಿಗೆ ಸಚಿವ ಜಮ್ಮಿರ್ ಅಹ್ಮದ್ ನಿಂತಿದ್ದಾರೆ. ಹಿಂದೂಗಳು ಈಗಲಾದರೂ ಎಚ್ಚರಗೋಳ್ಳಬೇಕು. ಮುಸ್ಲಿಮರ ಅಂಗಡಿಯಲ್ಲಿ ಆಹಾರ ತಿನ್ನುವುದನ್ನು ನಿಲ್ಲಿಸಬೇಕು. ನಾಯಿ ಮಾಂಸದ ಬಾಕ್ಸ್ ಮೇಲೆ ಮೀನಿನ ಮಾಂಸ ಎಂದು ಬರೆದು ಮೋಸ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ರಾಜು ಖಾನಪ್ಪನವರ, ಮಹೇಶ್ ರೋಖಡೆ, ಸೋಮು ಗುಡಿ, ಬಸವರಾಜ ಕುರ್ತಕೋಟಿ, ಶಿವಯೋಗಿ ಹಿರೇಮಠ, ಹುಲಗಪ್ಪ ವಾಲ್ಮೀಕಿ, ರಾಜು ಗದ್ದಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಿನ ಹೊಡೆತಕ್ಕೆ ಸಾವಿರಾರು ಮೀನುಗಳ ಮಾರಣಹೋಮ
ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ