ನಿಮ್ಮನ್ನು ಲೂಟಿ ಮಾಡಿ 2000 ಕೊಟ್ರೆ ಏನುಪಯೋಗ?

KannadaprabhaNewsNetwork |  
Published : Nov 09, 2024, 01:00 AM IST
8ಕೆಆರ್ ಎಂಎನ್ 3.ಜೆಪಿಜಿಚನ್ನಪಟ್ಟಣ ಕ್ಷೇತ್ರದ ಕಲ್ಲಾಪುರ ಗ್ರಾಮದಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಕೇಂದ್ರ ಸಚಿವ ಕುಮಾರಸ್ವಾಮಿ ಪ್ರಚಾರ ನಡೆಸಿದರು. | Kannada Prabha

ಸಾರಾಂಶ

ಚನ್ನಪಟ್ಟಣ: ಈಗ ಟಿಸಿ ಹಾಕಿಸೋಕೆ 2.5 ಲಕ್ಷ ಬೇಕು. ಜನರ ದುಡ್ಡು ಕಿತ್ಕೊಂಡು 2 ಸಾವಿರ ಕೊಟ್ಟರೆ ಏನು ಪ್ರಯೋಜನ. ಮುಂದೆ ಈ ಕಾಂಗ್ರೆಸ್ ಸರ್ಕಾರ ದಿವಾಳಿ ಆಗೋದ್ರಲ್ಲಿ ಅನುಮಾನ ಇಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಕಿಡಿಕಾರಿದರು.

ಚನ್ನಪಟ್ಟಣ: ಈಗ ಟಿಸಿ ಹಾಕಿಸೋಕೆ 2.5 ಲಕ್ಷ ಬೇಕು. ಜನರ ದುಡ್ಡು ಕಿತ್ಕೊಂಡು 2 ಸಾವಿರ ಕೊಟ್ಟರೆ ಏನು ಪ್ರಯೋಜನ. ಮುಂದೆ ಈ ಕಾಂಗ್ರೆಸ್ ಸರ್ಕಾರ ದಿವಾಳಿ ಆಗೋದ್ರಲ್ಲಿ ಅನುಮಾನ ಇಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಕಿಡಿಕಾರಿದರು.

ಚನ್ನಪಟ್ಟಣದ ಕಲ್ಲಾಪುರ ಗ್ರಾಮದಲ್ಲಿ ನಿಖಿಲ್ ಕುಮಾರಸ್ವಾಮಿ ಪರ ಚುನಾವಣಾ ಪ್ರಚಾರ ಮಾಡಿದ ಅವರು, ರಸ್ತೆ ಗುಂಡಿ ಮುಚ್ಚೋಕೆ ಕೂಡ ಇವರ ಬಳಿ ಹಣ ಇಲ್ಲ. ಹಾಲಿನ ಪ್ರೋತ್ಸಾಹ ಧನ ಕೊಟ್ಟು ಎಷ್ಟು ದಿನ ಆಯಿತು. ಪಶು ಆಹಾರ ಖರೀದಿ ಮಾಡಬೇಕು ಎಂದರೆ ರೈತರ ಕಷ್ಟ ಎಷ್ಟಿದೆ. ಜನರ ದುಡ್ಡನ್ನೇ ಜನರಿಗೆ ಕೊಡದೆ ಹೋದರೆ ಹೇಗೆ ಬದುಕುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯೋಗೇಶ್ವರ್ ಟೋಪಿ ಹಾಕಿ ಹೋದರು:

ಯೋಗೇಶ್ವರ್ ಅವರಿಗೆ ಜೆಡಿಎಸ್‌ನಿಂದ ಕೊಟ್ಟರೂ ನಿಲ್ಲುತ್ತೇನೆ ಎಂದರು. ನಾವು ಕೊಡುತ್ತೇವೆ ಎಂದ ಮೇಲೆ ಬಿಜೆಪಿ ಟಿಕೆಟ್ ಬೇಕು ಎಂದರು. ಅದಕ್ಕೂ ನಾವು ಒಪ್ಪಿಕೊಂಡೆವು. ಸ್ವತಃ ಜೆಪಿ ನಡ್ಡಾ ಅವರೇ ನಿಮ್ಮ ಪಕ್ಷದಿಂದಲೇ ಯೋಗೇಶ್ವರ್ ಅವರಿಗೆ ಟಿಕೆಟ್ ಕೊಡಿ ಎಂದು ಹೇಳಿದರು. ನಾವು ಒಪ್ಪಿಕೊಂಡೆವು. ಆಮೇಲೆ ಈ ವ್ಯಕ್ತಿ ಜೆಡಿಎಸ್ ಟಿಕೆಟ್ ಮೇಲೆ ನಿಲ್ಲಲ್ಲ ಅಂದರು. ಸಂಸದ ಡಾ. ಮಂಜುನಾಥ್ ಅವರು ಬಿಜೆಪಿ ಪಕ್ಷದಿಂದಲೇ ನಿಲ್ಲಿಸಿ ಎಂದರು. ಅದಕ್ಕೂ ಒಪ್ಪಿದೆ. ಆಮೇಲೆ ಇವರು ಹೇಳದೆ ಕೇಳದೆ ಕಾಂಗ್ರೆಸ್ ಪಕ್ಷಕ್ಕೆ ಹಾರಿದರು ಎಂದು ಕಿಡಿಕಾರಿದರು.

ಅವಳಿ ನಗರ ಕನಸು ಶೀಘ್ರ ನನಸು:

ಚನ್ನಪಟ್ಟಣ - ರಾಮನಗರ ಅವಳಿ ನಗರ ಆಗುವ ದಿನಗಳು ದೂರವಿಲ್ಲ. ಬೃಹತ್ ಕಾರ್ಖಾನೆ ತಂದು ಸ್ಥಳೀಯ ಯುವ ಜನರಿಗೆ ಉದ್ಯೋಗ ಕೊಡುವ ಕೆಲಸ ಮಾಡುತ್ತೇನೆ. ಈ ಬಗ್ಗೆ ನಾನು ಹಲವರ ಜತೆ ಸಮಾಲೋಚನೆ ನಡೆಸಿದ್ದೇನೆ. ಮಂಡ್ಯ, ಚನ್ನಪಟ್ಟಣ, ರಾಮನಗರ ಭಾಗದಲ್ಲಿ ಕೈಗಾರಿಕೆಗಳನ್ನು ತರುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕುಮಾರಸ್ವಾಮಿ ಭರವಸೆ ನೀಡಿದರು.

ಆನೆ ಕಾಟಕ್ಕೆ ತಾಲೂಕಿನ ಜನರನ್ನು ಪಾರು ಮಾಡುಲು ತಡೆಗೋಡೆ ನಿರ್ಮಿಸಲು ರೈಲ್ವೆ ಸಚಿವರ ಮಾತನಾಡಿದ್ದೇನೆ‌. ಅವರು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನನ್ನದು ಜವಾಬ್ದಾರಿ ಇದೆ ಎಂದು ಕುಮಾರಸ್ವಾಮಿ ಹೇಳಿದರು.

ಬಾಕ್ಸ್‌.................

ನಿಖಿಲ್ ಕಟ್ಟಿ ಹಾಕಲು ಸಚಿವರ ಪಡೆ:

ಕೇವಲ ಒಬ್ಬ ಯುವಕನನ್ನು ಕಟ್ಟಿ ಹಾಕಲು ಚನ್ನಪಟ್ಟಣದಲ್ಲಿ ಸರ್ಕಾರದ ಸಚಿವರ ದಂಡು ದಂಡೆತ್ತಿ ಬಂದಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಕಲ್ಲಾಪುರ ಗ್ರಾಮದಲ್ಲಿ ಭಾಷಣ ಮಾಡಿದ ಅವರು, 13ರಂದು ನಡೆಯುವ ಉಪಚುನವಣೆಯಲ್ಲಿ ನಿಖಿಲ್ ಕಣದಲ್ಲಿದ್ದಾರೆ. ಅವರನ್ನು ಕಟ್ಟಿ ಹಾಕಲು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಕೂಡ ಬಂದಿದ್ದಾರೆ, ಹದಿನೈದಕ್ಕೂ ಹೆಚ್ಚು ಸಚಿವರು, ಮೂವತ್ತಕ್ಕೂ ಹೆಚ್ಚು ಶಾಸಕರು ದಂಡೆತ್ತಿ ಬಂದಿದ್ದಾರೆ. ಆದರೆ, ಜನರು ನಮ್ಮ ಜತೆ ಇದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕ್ಷೇತ್ರಕ್ಕೆ ನಾನು ಮಾಡಿರುವ ಕೆಲಸಗಳ ಬಗ್ಗೆ ಕಾಂಗ್ರೆಸ್ ನಾಯಕರು ಪ್ರಶ್ನೆ ಮಾಡುತ್ತಾರೆ. ಅವರಿಗೆ ಕಣ್ಣಿಲ್ಲವೇ. ಪ್ರತಿ ಹಳ್ಳಿಯಲ್ಲಿಯೂ 8ರಿಂದ 10 ಕೋಟಿ ಮೌಲ್ಯದ ಅಭಿವೃದ್ದಿ ಕಾರ್ಯಗಳು ಆಗಿವೆ. ಇವೆಲ್ಲವನ್ನೂ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಅರವಿಂದ ಲಿಂಬಾವಳಿ ಸೇರಿದಂತೆ ಅನೇಕರು ಹಾಜರಿದ್ದರು.

8ಕೆಆರ್ ಎಂಎನ್ 3.ಜೆಪಿಜಿ

ಚನ್ನಪಟ್ಟಣ ಕ್ಷೇತ್ರದ ಕಲ್ಲಾಪುರ ಗ್ರಾಮದಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಕೇಂದ್ರ ಸಚಿವ ಕುಮಾರಸ್ವಾಮಿ ಪ್ರಚಾರ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ