ಮನುಷ್ಯ ಸತ್ತರೆ ಮಣ್ಣಿಗೆ, ಮಣ್ಣು ಸತ್ತರೆ ಎಲ್ಲಿಗೆ?

KannadaprabhaNewsNetwork |  
Published : Jun 27, 2026, 01:00 AM IST
ಕೃಷಿ ಇಲಾಖೆ ಆಯೋಜಿಸಿದ್ದ ಕೃಷಿ ಭೂಮಿ ಉಳಿಸಿ ಕಾರ್ಯಕ್ರಮದಲ್ಲಿ ಕೃವಿವಿ ಹಿರಿಯ ಬೇಸಾಯ ತಜ್ಞ ಡಾ. ಬಸವರಾಜ ಏಣಗಿ ಮಾತನಾಡಿದರು.2) ಅಳ್ನಾವರದಲ್ಲಿ ಕೃಷಿ ಇಲಾಖೆ ಆಯೋಜಿಸಿದ್ದ ಮಣ್ಣುಮುಲಿಸಿ ಕಾರ್ಯಕ್ರಮದಲ್ಲಿ ಸ್ಥಳಿಯ ರೈತರು ಭಾಗವಹಿಸಿದರು, | Kannada Prabha

ಸಾರಾಂಶ

ಮಣ್ಣು ಚೆನ್ನಾಗಿದ್ದರೆ ನಮ್ಮ ಕಣ್ಣು ಚೆನ್ನಾಗಿರುತ್ತದೆ ಎನ್ನುವ ಗಾದೆಯಂತೆ ಕೃಷಿಕರು ತಮ್ಮ ಜಮೀನಿನ ಮಣ್ಣು ಪರೀಕ್ಷೆಯ ನಂತರ ಅದರ ಗುಣ-ಧರ್ಮದ ಮೇಲೆ ಬೀಜ ಮತ್ತು ಅದರಲ್ಲಿನ ತಳಿಗಳನ್ನು ಆಯ್ಕೆ ಮಾಡಬೇಕು.

ಅಳ್ನಾವರ:

ಕೇವಲ ಲಾಭದ ದೃಷ್ಟಿಕೋನವಿಟ್ಟುಕೊಂಡು ಕೃಷಿ ಮಾಡದೆ ಸ್ನೇಹಮಯ ಬಂಧನದಿಂದ ಒಕ್ಕಲುತನ ಮಾಡಿ. ಅದರಿಂದ ಆದಾಯದ ಜತೆಗೆ ಆರೋಗ್ಯವೂ ಲಭಿಸುತ್ತದೆ ಎಂದು ಕೃವಿವಿ ಹಿರಿಯ ಬೇಸಾಯ ತಜ್ಞ ಡಾ. ಬಸವರಾಜ ಏಣಗಿ ಹೇಳಿದರು.

ಪಟ್ಟಣದ ಕೃಷಿ ಇಲಾಖೆ ಆಯೋಜಿಸಿದ್ದ ಕೃಷಿಭೂಮಿ ಉಳಿಸಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರು ಸ್ಥಳೀಯ ವಾತಾವರಣ ಮತ್ತು ಮಣ್ಣಿನ ಗುಣಗಳಿಗೆ ತಕ್ಕಂತೆ ಬೀಜ ಬಿತ್ತನೆ ಮಾಡಬೇಕು. ಜಮೀನಿಗೆ ಸಮತೋಲಿತವಾದ ಪೋಷಕಾಂಶ ನೀಡಬೇಕು, ಮಣ್ಣು ಚೆನ್ನಾಗಿದ್ದರೆ ನಮ್ಮ ಕಣ್ಣು ಚೆನ್ನಾಗಿರುತ್ತದೆ ಎನ್ನುವ ಗಾದೆಯಂತೆ ಕೃಷಿಕರು ತಮ್ಮ ಜಮೀನಿನ ಮಣ್ಣು ಪರೀಕ್ಷೆಯ ನಂತರ ಅದರ ಗುಣ-ಧರ್ಮದ ಮೇಲೆ ಬೀಜ ಮತ್ತು ಅದರಲ್ಲಿನ ತಳಿಗಳನ್ನು ಆಯ್ಕೆ ಮಾಡಬೇಕು. ಮನುಷ್ಯ ಸತ್ತರೆ ಮಣ್ಣಿಗೆ. ಆದರೆ, ಮಣ್ಣು ಸತ್ತರೆ ಇನ್ನೆಲ್ಲಿಗೆ ಎನ್ನುವ ಚಿಂತನೆಯನ್ನು ರೈತರು ಅರಿತುಕೊಂಡು ರಾಸಾಯನಿಕ ಕಡಿಮೆ ಮಾಡುವ ಮೂಲಕ ಮಣ್ಣಿನ ರಕ್ಷಣೆ ಮಾಡಿಕೊಳ್ಳಲು ಸಾವಯುವ ಕೃಷಿ ಪದ್ಧತಿ ಬೆಳೆಸಿಕೊಳ್ಳಬೇಕು ಎಂದರು.

ಸ್ಥಳೀಯ ಮುಖಂಡ ನಾರಾಯಣ ಮೋರೆ ಮಾತನಾಡಿ, ಯುವಕರು ಕೃಷಿ ಕಾಯಕದಿಂದ ದೂರ ಸರಿಯುತ್ತಿರುವುದು ಖೇದವನ್ನುಂಟು ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕೃಷಿ ಅಭಿವೃದ್ಧಗಾಗಿ ಹೆಚ್ಚು ಒತ್ತು ನೀಡಿದ್ದು, ಕೃಷಿ ಮತ್ತು ಕೃಷಿಕನಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇಂದು ರಿಯಲ್ ಎಸ್ಟೇಟ್‌ ದಂಧೆಕೋರರು ರೈತರಿಗೆ ಹಣದಾಸೆ ತೋರಿಸಿ ಕೃಷಿ ಭೂಮಿಯನ್ನು ಲೇಔಟ್‌ಗಳನ್ನಾಗಿ ಪರಿವರ್ತಿಸುತ್ತಿದ್ದಾರೆ. ಈ ವ್ಯವಸ್ಥೆ ಮುಂದುವರಿದರೆ ಮುಂದೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ ಅಣಗೌಡರ, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಗುರುಪ್ರಸಾದ ಹಿರೇಮಠ, ಪಿಕೆಪಿಎಸ್ ಅಧ್ಯಕ್ಷ ಬಸವರಾಜ ಹಟ್ಟಿಹೋಳಿ, ಲಿಂಗರಾಜ ಮೂಲಿಮನಿ, ಅರ್ಜುನ ಅಷ್ಟೇಕರ, ಸಿದ್ದಪ್ಪ ಕಿಲೋಸ್ಕರ, ಪವಿತ್ರಾ ಪಾಟೀಲ, ಸಂಗಮೇಶ ಮಂಗೋಜಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೃತ್ತಿ ಪರಿಣತಿ ಹೆಚ್ಚಿಸಲು ತರಬೇತಿ ಅಗತ್ಯ: ಅನುರಾಧ
ಉಡುಪಿ - ಮಹಿಳಾ ಸಹಕಾರಿಗಳಿಗೆ ತರಬೇತಿ ಕಾರ್ಯಾಗಾರ ಸಂಪನ್ನ