ನಮ್ಮನ್ನೂ ಕೊಂದುಬಿಡಿ ಎಂದಿದ್ದಕ್ಕೆ ಮೋದಿಗೆ ಹೋಗಿ ಹೇಳು ಎಂದರು

KannadaprabhaNewsNetwork |  
Published : Apr 23, 2025, 02:02 AM IST
ಮಂಜುನಾಥ್‌ ರಾವ್‌ ದಂಪತಿ | Kannada Prabha

ಸಾರಾಂಶ

‘ನಾವು ತಿಂಡಿ ತಿನ್ನುತ್ತಿದ್ದಾಗ ಈ ದಾಳಿ ನಡೆದಿದೆ. ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಈ ದಾಳಿ ಮಾಡಿದ್ದಾರೆ. ನೀನು ಹಿಂದೂನ ಎಂದು ಕೇಳಿ, ಪರಿಶೀಲಿಸಿ, ಬಳಿಕ, ಒಂದೇ ಗುಂಡೇಟಿಗೆ ನನ್ನ ಗಂಡನನ್ನು ಕೊಂದಿದ್ದಾರೆ. ಅಲ್ಲಿದ್ದ ಗಂಡಸರನ್ನೇ ಗುರಿಯಾಗಿಸಿ, ಅವರ ಧರ್ಮ ಕೇಳಿ ಸಾಯಿಸಿದ್ದಾರೆ. ಮುಸ್ಲಿಮರನ್ನು ಬಿಟ್ಟು ಕಳುಹಿಸಿದ್ದಾರೆ. ‘ನನ್ನ, ನನ್ನ ಮಗನ ಮೇಲೂ ಗುಂಡು ಹಾರಿಸಿ’ ಎಂದು ಉಗ್ರರಿಗೆ ಹೇಳಿದೆ. ಅದಕ್ಕವರು ‘ಮೋದಿ ಜೀ ಕೋ ಬತಾವೋ’ (ಮೋದಿಗೆ ಹೋಗಿ ಹೇಳು) ಎಂದರು’.

ಮೃತ ಮಂಜುನಾಥ್‌ ಪತ್ನಿ ಜತೆ ಉಗ್ರರ ವ್ಯಂಗ್ಯ

ತಿಂಡಿ ತರಲು ಹೋದಾಗ ಉದ್ಯಮಿಗೆ ಗುಂಡೇಟು

ಒಂದೇ ಏಟಿಗೆ ಪತಿಯ ಕೊಂದರು: ಪತ್ನಿ ಕಣ್ಣೀರು

==

ಕನ್ನಡಪ್ರಭ ವಾರ್ತೆ ಶಿವಮೊಗ್ಗ

‘ನಾವು ತಿಂಡಿ ತಿನ್ನುತ್ತಿದ್ದಾಗ ಈ ದಾಳಿ ನಡೆದಿದೆ. ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಈ ದಾಳಿ ಮಾಡಿದ್ದಾರೆ. ನೀನು ಹಿಂದೂನ ಎಂದು ಕೇಳಿ, ಪರಿಶೀಲಿಸಿ, ಬಳಿಕ, ಒಂದೇ ಗುಂಡೇಟಿಗೆ ನನ್ನ ಗಂಡನನ್ನು ಕೊಂದಿದ್ದಾರೆ. ಅಲ್ಲಿದ್ದ ಗಂಡಸರನ್ನೇ ಗುರಿಯಾಗಿಸಿ, ಅವರ ಧರ್ಮ ಕೇಳಿ ಸಾಯಿಸಿದ್ದಾರೆ. ಮುಸ್ಲಿಮರನ್ನು ಬಿಟ್ಟು ಕಳುಹಿಸಿದ್ದಾರೆ. ‘ನನ್ನ, ನನ್ನ ಮಗನ ಮೇಲೂ ಗುಂಡು ಹಾರಿಸಿ’ ಎಂದು ಉಗ್ರರಿಗೆ ಹೇಳಿದೆ. ಅದಕ್ಕವರು ‘ಮೋದಿ ಜೀ ಕೋ ಬತಾವೋ’ (ಮೋದಿಗೆ ಹೋಗಿ ಹೇಳು) ಎಂದರು’.

ಜಮ್ಮು-ಕಾಶ್ಮೀರದ ಪಹಾಲ್ಗಾಂನಲ್ಲಿ ನಡೆದ ಪ್ರವಾಸಿಗರ ಮೇಲಿನ ಉಗ್ರರ ದಾಳಿಯಲ್ಲಿ ಮೃತಪಟ್ಟ ಶಿವಮೊಗ್ಗದ ಉದ್ಯಮಿ ಮಂಜುನಾಥ್‌ ರಾವ್‌ ಅವರ ಪತ್ನಿ ಪಲ್ಲವಿಯವರ ಆಕ್ರಂದನದ ನುಡಿಗಳಿವು.

ಘಟನೆ ಹಿನ್ನೆಲೆಯಲ್ಲಿ ‘ಕನ್ನಡಪ್ರಭ’ ಜೊತೆ ಮಾತನಾಡಿದ ಪಲ್ಲವಿ, ತಮ್ಮ ಕಣ್ಣೀರ ಕಥೆಯನ್ನು ತೆರೆದಿಟ್ಟರು. ‘ನನ್ನ ಮಗನಿಗೆ ತಿಂಡಿ ತಿನ್ನುವ ಆಸೆಯಾಯಿತು. ಆದ್ದರಿಂದ, ನನ್ನ ಪತಿ ಅದನ್ನು ಖರೀದಿಸಲು ಮಗನೊಂದಿಗೆ ಯಾವುದೋ ಅಂಗಡಿಗೆ ಹೋದರು. ಆಗ ನಮಗೆ ಗುಂಡಿನ ಶಬ್ದ ಕೇಳಿಸಿತು. ನಾನು ನನ್ನ ಪತಿಯನ್ನು ನೋಡಿದಾಗ, ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆಗ ಸಹ ಪ್ರವಾಸಿಗರು ‘ಭಾಗೋ ಭಾಗೋ’ ಎಂದು ಕೂಗಲು ಪ್ರಾರಂಭಿಸಿದರು. ನನ್ನ ಗಂಡನನ್ನು ಕೊಂದು ನನ್ನ ಮಗನಿಗೆ ಬೈದು ಹಲ್ಲೆ ಮಾಡಿದ್ದಾರೆ. ಅವರತ್ತ ಓಡಿ ‘ನಮ್ಮಿಬ್ಬರ ಮೇಲೂ ಗುಂಡು ಹಾರಿಸಿ’ ಎಂದು ಉಗ್ರರಿಗೆ ಹೇಳಿದೆ. ಅವರು ‘ಮೋದಿ ಜೀ ಕೋ ಬತಾವೋ’ (ಮೋದಿಗೆ ಹೋಗಿ ಹೇಳು) ಎಂದು ಹೇಳಿದರು. ನನ್ನ ಪತಿಯನ್ನು ಕೊಂದ ಉಗ್ರರು ಅಲ್ಲೇ ಓಡಾಡುತ್ತಿದ್ದರು. ಬಿಸ್ಮಿಲ್ಲಾ, ಬಿಸ್ಮಿಲ್ಲಾ ಎನ್ನುತ್ತಿದ್ದ ಮೂವರು ಮುಸ್ಲಿಮರು ನನ್ನ ಮತ್ತು ನನ್ನ ಮಗ ಸೇರಿದಂತೆ ಹಲವರನ್ನು ಸುರಕ್ಷಿತವಾಗಿ ಕೆಳಗೆ ಕರೆದುಕೊಂಡು ಬಂದರು’ ಎಂದು ದಾಳಿಯಲ್ಲಿ ಮೃತಪಟ್ಟ ಮಂಜುನಾಥ್ ಪತ್ನಿ ಪಲ್ಲವಿ ಘಟನೆ ಬಗ್ಗೆ ಮಾಧ್ಯದವರಿಗೆ ಹೇಳುತ್ತ ಕಣ್ಣೀರಾದರು.

‘ನಾವು ಏ.19 ರಂದು ಕಾಶ್ಮೀರಕ್ಕೆ ಪ್ರವಾಸಕ್ಕೆ ಹೋಗಿದ್ದೆವು. ಇದು ಗುಡ್ಡಗಾಡು ಪ್ರದೇಶವಾದ್ದರಿಂದ ಕಣಿವೆಯ ಮೂಲಕ ಹಾದುಹೋಗಲು ಕುದುರೆಗಳನ್ನು ಬಾಡಿಗೆಗೆ ಪಡೆಯಬೇಕಾಯಿತು. ಕೆಲವು ದಿನಗಳವರೆಗೆ ಎಲ್ಲವೂ ಸಾಮಾನ್ಯವಾಗಿತ್ತು. ಆದರೆ, ಇಂದು ದುರಂತ ಘಟನೆ ಸಂಭವಿಸಿದೆ’ ಎಂದು ಕಂಬನಿಗರೆದರು.

‘ನಾನು ಇನ್ನೂ ಅಘಾತದಲ್ಲಿದ್ದೇನೆ. ನನ್ನ ಪತಿಯ ಶವವನ್ನು ಶಿವಮೊಗ್ಗಕ್ಕೆ ಕರೆದೊಯ್ಯಲು ವ್ಯವಸ್ಥೆ ಮಾಡಿದರೆ ಸಾಕು. ನಾನು ಬೇರೆನೂ ಕೇಳಲ್ಲ’ ಎಂದು ಮೃತ ಮಂಜುನಾಥ್ ಪತ್ನಿ ಪಲ್ಲವಿ ಸರ್ಕಾರ ಮತ್ತು ಸಂಬಂಧಿಸಿದವರಿಗೆ ಮನವಿ ಮಾಡಿದ್ದಾರೆ.ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಈ ದಾಳಿ ಮಾಡಿದ್ದಾರೆ. ಅಲ್ಲಿದ್ದ ಗಂಡಸರನ್ನೇ ಗುರಿಯಾಗಿಸಿ ಅವರ ಧರ್ಮ ಕೇಳಿ ಸಾಯಿಸಿದರು. ಮುಸ್ಲಿಮರನ್ನು ಬಿಟ್ಟು ಕಳುಹಿಸಿದರು.

- ಪಲ್ಲವಿ, ಮೃತ ಮಂಜುನಾಥ್ ರಾವ್‌ ಪತ್ನಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ