ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ ಈ ಕನ್ನಡ ಭವನದಲ್ಲಿ ಸಾಂಸ್ಕೃತಿಕ ಹಾಗೂ ಸಾಹಿತ್ಯ ಕಾರ್ಯಕ್ರಮಗಳು ನಡೆಯುತ್ತಿರುವುದರಿಂದ ಕುವೆಂಪು ಅವರ ಆತ್ಮಕ್ಕೂ ತೃಪ್ತಿ ಸಿಗುತ್ತದೆ. ಕುವೆಂಪು ಅವರು ತಮ್ಮ ಮನೆಗೆ ಬರುತ್ತಿದ್ದ ಅತಿಥಿಗಳಿಗೆ ''''''''ವಿಶ್ವಮಾನವ ಸಂದೇಶ'''''''' ಕಿರು ಪುಸ್ತಕಗಳ ನೀಡಿ ಈ ಜಗತ್ತಿನಲ್ಲಿ ಶಾಂತಿ ನೆಲೆಸಬೇಕಾದರೆ ವಿಶ್ವಮಾನವ ಸಂದೇಶ ನೀವು ಪಾಲಿಸಬೇಕೆಂದು ಹೇಳುತ್ತಿದ್ದರೆಂದರು. ಮನಸ್ಸು, ಬುದ್ಧಿ, ಆತ್ಮ ವಿಶ್ವಾಸವಾದಾಗ ಮಾತ್ರ ಮನುಷ್ಯ ವಿಶ್ವಮಾನವ ಆಗುತ್ತಾನೆ. ಎಲ್ಲಾ ಜನರು ವಿಕಾಸ ಆಗಬೇಕು ಮತ್ತು ಸಮಾಜದಲ್ಲಿ ಸಮನ್ವಯ ಬಯಸುತ್ತೇನೆಂದು ಕುವೆಂಪು ಅವರು ಎಲ್ಲರಿಗೂ ಹೇಳುತ್ತಿದ್ದರು. ಅಂತಹ ಮಹಾನ್ ವ್ಯಕ್ತಿಯ ಹೆಸರಿನಲ್ಲಿ ಕನ್ನಡ ಭವನ ನಿರ್ಮಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ನಿವೃತ್ತ ಪ್ರಾಚಾರ್ಯ ನಾ.ಲೋಕೇಶ್ ಒಡೆಯರ್ ಮಾತನಾಡಿ, ಅಗಾಧ, ಅಪರಿಮಿತವಾದದ್ದನ್ನು ಸಾಧಿಸಿರುವ ಚಿದಾನಂದಗೌಡರು, ಆದರ್ಶ ವ್ಯಕ್ತಿಯಾಗಿದ್ದಾರೆ. ಸ್ವಾರ್ಥರಹಿತವಾಗಿ, ನಿಷ್ಪಕ್ಷವಾಗಿ, ಪಾರದರ್ಶಕವಾಗಿ ಕೆಲಸ ಮಾಡಿದ ಕೀರ್ತಿ ಹೊಂದಿರುವ ಚಿದಾನಂದಗೌಡರು, ಕುವೆಂಪು ವಿವಿಯ ಗೌರವ, ಘನತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ್ದರು ಎಂದು ತಿಳಿಸಿದರು.ಜಿಲ್ಲಾ ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ, ಡಾ.ಕೆ.ಚಿದಾನಂದ ಗೌಡರು ತಮ್ಮ ಆಡಳಿತ ವೈಖರಿಗಳಿಂದಾಗಿ ಆದರ್ಶ ಉಪಕುಲಪತಿಯಾಗಿದ್ದಾರೆ. ಅವರು ಅಂದು ನಮಗೆ ನೀಡಿದ ಈ ನಿವೇಶನ ಇಂದು ಕನ್ನಡದ ಸಾಹಿತ್ಯ, ಸಂಸ್ಕೃತಿಯನ್ನು ಬೆಳೆಸುವ ಕೆಲಸ ಮಾಡಲು ವೇದಿಕೆ ಆಗಿದೆ. ಹಿರಿಯ ಸಾಹಿತಿ ಬಾ.ಮ. ಬಸವರಾಜಯ್ಯ ಕೃತಜ್ಞತೆ ಸಲ್ಲಿಸಿದರು.