ರಾಜನೀತಿಯೊಂದಿಗೆ ಧರ್ಮನೀತಿ ಸಮ್ಮಿಲನವಾದಾಗ ದೇಶದಲ್ಲಿ ಶಾಂತಿ : ಶಾಸಕ ತಮ್ಮಯ್ಯ

KannadaprabhaNewsNetwork |  
Published : Feb 05, 2025, 12:33 AM IST
ಚಿಕ್ಕಮಗಳೂರಿನ ತೇರಾಪಂಥ್ ಭವನದಲ್ಲಿ ತೇರಾಪಂಥ್ ಸಭಾ ವತಿಯಿಂದ ಮಂಗಳವಾರ ತೇರಾಪಂಥ್‌ ಧರ್ಮಸಂಘದ 161ನೇ  ಮರ್ಯಾದ ಮಹೋತ್ಸವ ಕಾರ್ಯಕ್ರಮ ನಡೆಯಿತು. ಶಾಸಕ ಎಚ್‌.ಡಿ. ತಮ್ಮಯ್ಯ ಡಾ. ವೇಣುಗೋಪಾಲ್‌ ರಾವ್‌, ಮಹೇಂದ್ರ ಡೋಸಿ ಇದ್ದರು. | Kannada Prabha

ಸಾರಾಂಶ

ಚಿಕ್ಕಮಗಳೂರುರಾಜನೀತಿಯೊಂದಿಗೆ ಧರ್ಮನೀತಿ ಸಮ್ಮಿಲನವಾದಾಗ ದೇಶದಲ್ಲಿ ಶಾಂತಿ ನೆಲೆಸುತ್ತದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

ನಗರದ ತೇರಾಪಂಥ್‌ ಧರ್ಮ ಸಂಘದ 161ನೇ ಮರ್ಯಾದ ಮಹೋತ್ಸವ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ರಾಜನೀತಿಯೊಂದಿಗೆ ಧರ್ಮನೀತಿ ಸಮ್ಮಿಲನವಾದಾಗ ದೇಶದಲ್ಲಿ ಶಾಂತಿ ನೆಲೆಸುತ್ತದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತ ದೇಶದಲ್ಲಿ ಚಾತುರ್ಮಾಸ ಪೂಜೆ ಮಾಡುವ ಮೂಲಕ ಹಿಂದೆ ರಾಜರ ಕಾಲದಲ್ಲಿ ಧರ್ಮನೀತಿ ಅಳವಡಿಸಿಕೊಳ್ಳುತ್ತಿದ್ದರು ಎಂದು ಹೇಳಿದರು.

ಭಾರತ ದೇಶದಲ್ಲಿ ಸುಮಾರು 800 ಕ್ಕೂ ಹೆಚ್ಚು ಸಾಧು, ಸಾಧ್ವಿಗಳನ್ನು ಹೊಂದಿರುವ ಜೈನ ಸಮಾಜದಲ್ಲಿ ಆಚಾರ್ಯರು ಚಾತುರ್ಮಾಸ ಪೂಜೆ ಮಾಡಲು ದಿನಾಂಕ ನಿಗದಿ ಮಾಡುವ ಇಂದು ಶುಭ ದಿನವಾಗಿದೆ ಎಂದು ಎಲ್ಲಾ ಜೈನ್ ಸಮುದಾಯದ ಬಾಂಧವರಿಗೆ ಶುಭಾಶಯ ಕೋರಿದರು.ಅಹಿಂಸಾತ್ಮಕವಾದ ಪವಿತ್ರಜೈನ ಧರ್ಮವಾಗಿದ್ದು, ಅವರ ಊಟ, ಉಪಹಾರ ಸಂಪೂರ್ಣ ಸಸ್ಯಹಾರಿಯಾಗಿದೆ. ಹಿಂಸೆಯ ಮಾರ್ಗವನ್ನು ದೂರ ವಿರಿಸಿ ನಡೆಯುತ್ತಿರುವ ಜೈನ್ ಸಮಾಜದ ಆಚಾರ ವಿಚಾರಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.ತೇರಾಪಂಥ್ ಮಹಾಸಭಾ ಅಧ್ಯಕ್ಷ ಮಹೇಂದ್ರ ಡೋಸಿ ಮಾತನಾಡಿ, ಒಂದು ವರ್ಷದಲ್ಲಿ 4 ತಿಂಗಳು ಒಂದೇ ಕಡೆ ಚಾತುರ್ಮಾಸ ಕಾರ್ಯಕ್ರಮ ಆಯೋಜಿಸಿ ನಡೆಸಲಾಗುವುದು. ಉಳಿದ ದಿನಗಳಲ್ಲಿ ದೇಶ ಸಂಚಾರ ಮಾಡಿ ಧರ್ಮ ಪ್ರಚಾರ ಮಾಡುವ ಸಾಧು ಸಾಧ್ವಿಯರಿಗೆ ಮನೆ ಮಠಗಳಿ ರುವುದಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ 11ನೇ ಆಚಾರ್ಯ ಶಿಷ್ಯರಾದ ಸಯಂ ಲತಾಜಿ ಆಶೀರ್ವಚನ ನೀಡಿದರು. ಇವರೊಂದಿಗೆ ಮೂವರು ಶಿಷ್ಯರು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಹಾಸನದ ಎಂ.ಎಸ್. ರಾಮಯ್ಯ ಇಂಜಿನಿಯರಿಂಗ್‌ ಕಾಲೇಜಿನ ಪ್ರಾಂಶುಪಾಲ ಡಾ.ವೇಣುಗೋಪಾಲ್‌ ರಾವ್ ಹಾಗೂ ಇದೇ ಕಾಲೇಜಿನ ಎಚ್.ಓ.ಡಿ ಡಾ.ಬಬಿತಾ ಜೈನ್, ನಗರಸಭೆ ಸದಸ್ಯ ವಿಫುಲ್‌ಕುಮಾರ್‌ ಜೈನ್‌ ಉಪಸ್ಥಿತರಿದ್ದರು.

4 ಕೆಸಿಕೆಎಂ 5ಚಿಕ್ಕಮಗಳೂರಿನ ತೇರಾಪಂಥ್ ಭವನದಲ್ಲಿ ತೇರಾಪಂಥ್ ಸಭಾ ವತಿಯಿಂದ ಮಂಗಳವಾರ ತೇರಾಪಂಥ್‌ ಧರ್ಮಸಂಘದ 161ನೇ ಮರ್ಯಾದ ಮಹೋತ್ಸವ ಕಾರ್ಯಕ್ರಮ ನಡೆಯಿತು. ಶಾಸಕ ಎಚ್‌.ಡಿ. ತಮ್ಮಯ್ಯ ಡಾ. ವೇಣುಗೋಪಾಲ್‌ ರಾವ್‌, ಮಹೇಂದ್ರ ಡೋಸಿ ಇದ್ದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ