‘ಎತ್ತಿನಹೊಳೆ’ ಹರಿಯುವುದು ಯಾವಾಗ: ರೈತಸಂಘದ ಪ್ರಶ್ನೆ

KannadaprabhaNewsNetwork | Published : May 13, 2025 11:53 PM
Follow Us

ಸಾರಾಂಶ

೧೫ ವರ್ಷದಿಂದ ಜಿಲ್ಲೆಗೆ ಹರಿಯದ ಎತ್ತಿನಹೊಳೆ ಇನ್ನು ಎಷ್ಟು ವರ್ಷದಲ್ಲಿ ಹರಿಯುತ್ತದೆ ಎಂದು ಜನಪ್ರತಿನಿಧಿಗಳುಉತ್ತರ ನೀಡಬೇಕು. ಒಂದು ಮಾಹಿತಿ ಪ್ರಕಾರ ಯೋಜನೆಗೆ ಅರಣ್ಯ ಇಲಾಖೆಯ ಅನುಮೋದನೆಯೇ ಸಿಕ್ಕಿಲ್ಲ ಎನ್ನಲಾಗಿದೆ. ಇನ್ನೂ ೨೦ ವರ್ಷ ಕಳೆದರೂ ಎತ್ತಿನಹೊಳೆ ನೀರು ಹರಿಯುವುದು ಅನುಮಾನ

ಕನ್ನಡಪ್ರಭ ವಾರ್ತೆ ಕೋಲಾರಬಯಲು ಸೀಮೆಗಳ ಜಿಲ್ಲೆಗಳಿಗೆ ಎತ್ತಿನಹೊಳೆ ನೀರು ಯಾವ ವರ್ಷದಲ್ಲಿ ಹರಿಯುತ್ತಿದೆ ಎಂದು ಬಹಿರಂಗವಾಗಿ ಜಿಲ್ಲೆಯ ಜನತೆಗೆ ತಿಳಿಸಬೇಕೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಪತ್ರಿಕಾ ಹೇಳಿಕೆ ಮುಖಾಂತರ ಎರಡು ಜಿಲ್ಲೆಗಳ ಜನ ಪ್ರತಿನಿಧಿಗಳನ್ನು ಆಗ್ರಹಿಸಿದರು.ಸಕಲೇಶ್‌ಪುರ ಎತ್ತಿನಹೊಳೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ಈ ಯೋಜನೆಗೆ ಗುದ್ದಲಿ ಪೂಜೆ ಮಾಡಿ ೧೫ ವರ್ಷ ಕಳೆದರೂ ಇದುವರೆವಿಗೂ ಕನಿಷ್ಠ ಪಕ್ಷ ಕಾಮಗಾರಿ ಚುರುಕುಗೊಳಿಸಲು ಜನಪ್ರತಿನಿಧಿಗಳು ವಿಫಲವಾಗಿದ್ದಾರೆಂದರು. ಜನಪ್ರತಿನಿಧಿಗಳು ವಿಫಲ

ಪ್ರತಿ ವರ್ಷ ಬಜೆಟ್‌ನಲ್ಲಿ ಎತ್ತಿನಹೊಳೆ ಶಾಶ್ವತ ನೀರಾವರಿಗಾಗಿ ಸಾವಿರಾರು ಕೋಟಿ ಅನುದಾನವನ್ನು ಮೀಸಲಿಟ್ಟುಕೊಂಡು ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿಗೆ ವೇಗದ ಮಿತಿ ನೀಡಿ, ತ್ವರಿತ ಗತಿಯಲ್ಲಿ ಬಯಲು ಸೀಮೆಯ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರು ಕೊಡುವಲ್ಲಿ ಎರಡು ಜಿಲ್ಲೆಯ ಜನ ಪ್ರತಿನಿಧಿಗಳು ವಿಫಲವಾಗಿದ್ದಾರೆ ಎಂದರು. ಮುಖಂಡ ಮರಗಲ್ ಶ್ರೀನಿವಾಸ್ ಮಾತನಾಡಿ, ೧೫ ವರ್ಷದಿಂದ ಜಿಲ್ಲೆಗೆ ಹರಿಯದ ಎತ್ತಿನಹೊಳೆ ಇನ್ನು ಎಷ್ಟು ವರ್ಷದಲ್ಲಿ ಹರಿಯುತ್ತದೆ ಎಂದು ಜನಪ್ರತಿನಿಧಿಗಳುಉತ್ತರ ನೀಡಬೇಕು. ಒಂದು ಮಾಹಿತಿ ಪ್ರಕಾರ ಯೋಜನೆಗೆ ಅರಣ್ಯ ಇಲಾಖೆಯ ಅನುಮೋದನೆಯೇ ಸಿಕ್ಕಿಲ್ಲ ಎನ್ನಲಾಗಿದೆ. ಇನ್ನೂ ೨೦ ವರ್ಷ ಕಳೆದರೂ ಎತ್ತಿನಹೊಳೆ ನೀರು ಹರಿಯುವುದು ಅನುಮಾನ ಎಂದರು.ರಾಜೀನಾಮೆ ನೀಡಲಿ: ಇನ್ನು ಒಂದು ವರ್ಷದಲ್ಲಿ ಎತ್ತಿನಹೊಳೆ ಯೋಜನೆಯ ನೀರು ಬಯಲು ಸೀಮೆಗಳಿಗೆ ಹರಿಯುದೇ ಇದ್ದರೆ, ಎರಡು ಜಿಲ್ಲೆಯ ಜನ ಪ್ರತಿನಿಧಿಗಳು ರಾಜಿನಾಮೆ ಕೊಟ್ಟು, ಜಿಲ್ಲೆಯ ಜನತೆಯ ಹೋರಾಟಕ್ಕೆ ಬೆಂಬಲ ನೀಡಬೇಕು. ಇಲ್ಲವಾದರೆ ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಜನ ಪ್ರತಿನಿಧಿಗಳ ಮುಖಕ್ಕೆ ಕೆ.ಸಿ.ವ್ಯಾಲಿ ನೀರು ಸುರಿಯುವ ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಮಂಗಸಂದ್ರ ತಿಮ್ಮಣ್ಣ, ಯಲ್ಲಣ್ಣ, ಪ್ರಸನ್ನಕುಮಾರ್, ಶೈಲಜ, ಗೌರಮ್ಮ, ರತ್ನಮ್ಮ, ವೆಂಕಟಮ್ಮ, ಭಾಗ್ಯಮ್ಮ, ಮುನಿರತ್ನಮ್ಮ ಇದ್ದರು.