ರಶೀದಿ ನೀಡದೆ ಕಳಪೆ ಬಿತ್ತನೆ ಬೀಜ ನೀಡಿ ವಂಚನೆ । ಬಿತ್ತನೆ ಬೀಜಕ್ಕೆ ದರ ನಿಗದಿಪಡಿಸಲು ಜಿಲ್ಲಾಡಳಿತದಿಂದ ನಿರ್ಲಕ್ಷ್ಯ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಚುನಾಯಿತ ಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ರೈತರ ಬಗ್ಗೆ ಎಷ್ಟರಮಟ್ಟಿಗೆ ಕಾಳಜಿಯಿದೆ ಎಂದರೆ ತಾಲೂಕಿನಲ್ಲಿ ಆಲೂಗಡ್ಡೆ ಬಿತ್ತನೆ ಬೀಜ ಮಾರಾಟ ಮಾಡುವಾಗ ರೈತರಿಗೆ ವರ್ತಕರು ಕಡ್ಡಾಯವಾಗಿ ರಶೀದಿ ನೀಡದೆ ಕಳಪೆ ಬಿತ್ತನೆ ಬೀಜ ನೀಡಿ ವಂಚಿಸುತ್ತಿದ್ದರೂ ಕೇಳುವವರೇ ಇಲ್ಲದಂತಾಗಿದೆ.ಹಾಸನ ಜಿಲ್ಲೆ ಹೊರತುಪಡಿಸಿದರೆ ಅಲೂ ಅತೀ ಹೆಚ್ಚು ಬೆಳೆಯುವುದು ಕೋಲಾರ ಜಿಲ್ಲೆಯಲ್ಲೇ. ಜಿಲ್ಲೆಯ ಪ್ರಮುಖ ಬೆಳೆಯಾದ ಆಲೂ ಕೃಷಿಗೆ ಬಿತ್ತನೆ ಬೀಜಕ್ಕೆ ದರ ನಿಗದಿಪಡಿಸಲು ಜಿಲ್ಲಾಡಳಿತದಿಂದ ಸಾಧ್ಯವಾಗಿಲ್ಲ. ಬಿತ್ತನೆ ಬೀಜ ದರ ನಿಗದಿ ವಿಷಯದಲ್ಲಿ ತೋಟಗಾರಿಕೆ ಇಲಾಖೆ ಹಾಗೂ ಕೃಷಿ ಇಲಾಖೆ ಮೀನಮೇಷ ಎಣಿಸುತ್ತಿದೆ. ಇದರಿಂದ ಜಿಲ್ಲೆಯ ರೈತರಿಗೆ ಅಂದಾಜು ವಾರ್ಷಿಕ 500 ಕೋಟಿ ರು.ಗಳು ನಷ್ಟವಾಗು ತ್ತಿದೆ ಎನ್ನುವುದು ಇಲ್ಲಿನ ಹೆಸರು ಹೇಳಲು ಇಚ್ಚೀಸದ ಎಪಿಎಂಸಿ ಅಧಿಕಾರಿ ನೀಡಿರುವ ಅಂಕಿಅಂಶಗಳಲ್ಲಿ ದೃಢಪಟ್ಟಿದೆ.ಬಿತ್ತನೆ ಆಲೂಗಡ್ಡೆ ಮಾರಾಟ ಮಾಡುವ ವರ್ತಕರು ತೋಟಗಾರಿಕೆ, ಕೃಷಿ ಇಲಾಖೆಯಿಂದ ಪರವಾನಿಗೆ ಪಡೆಯುವುದು ಮತ್ತು ಗುಣಮಟ್ಟ ಪರೀಕ್ಷಿಸುವುದು ಕಡ್ಡಾಯ. ಆದರೆ ನಗರದಲ್ಲಿ ಪರವಾನಗಿ ಪಡೆದು ಆಲೂಗಡ್ಡೆ ಬಿತ್ತನೆ ಬೀಜ ಮಾರಾಟ ಮಾಡುತ್ತಿರುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಆದರೆ ಪರವಾನಗಿ ಪಡೆಯದೇ ಮಾರಾಟ ಮಾಡುವ ವರ್ತಕರ ವಿರುದ್ಧ ಸಂಬಂಧಪಟ್ಟ ಇಲಾಖೆ ಯಾಗಲಿ ಅಥವಾ ಜಿಲ್ಲಾಡಳಿತವಾಗಳಿ ಕ್ರಮಕ್ಕೆ ಮುಂದಾಗುತ್ತಿ ಲ್ಲ.ಜಿಲ್ಲೆಗೆ ಬಹುತೇಕ ನಗರದ ಎಪಿಎಂಸಿಯಿಂದಲೇ ಆಲೂಗಡ್ಡೆ ಬಿತ್ತನೆ ಬೀಜ ಸರಬರಾಜಾಗುತ್ತಿದೆ. ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ವಾರ್ಷಿಕವಾಗಿ ರೈತರು 3000ಕ್ಕೂ ಹೆಚ್ಚು ಮೆಟ್ರಿಕ್ ಟನ್ ಆಲೂ ಬಿತ್ತನೆ ಬೀಜ ಖರೀದಿಸುತ್ತಾರೆ. ಸೆಪ್ಟೆಂಬರ್, ನವೆಂಬರ್ ಹಾಗೂ ಡಿಸೆಂಬರ್ ಬೆಳೆಗೆ ಮೂರು ಹಂತಗಳಲ್ಲಿ ಆಲೂ ಬಿತ್ತನೆ ಬೀಜವನ್ನು ಖರೀದಿಸು ತ್ತಾರೆ. ಆದರೆ ಇದಾವುದಕ್ಕೂ ರೈತರಿಗೆ ವರ್ತಕರು ಟಿನ್ ನಂಬರ್ ಇರುವ ರಶೀದಿ ನೀಡುತ್ತಿಲ್ಲ.ವರ್ತಕರು ಮಾರುವ ಆಲೂ ಬಿತ್ತನೆ ಬೀಜ ದೃಢೀಕೃತವಲ್ಲ. ಇದರಿಂದ ಇಳುವರಿ ಖಾತ್ರಿಯಿಲ್ಲ, ಗುಣಮಟ್ಟದ ಅಧಿಕೃತ ಬಿತ್ತನೆ ಬೀಜ ಕೇಳಿದ ರೈತರಿಗೆ ಇಷ್ಟ ಇದ್ದರೆ ತೆಗೆದುಕೊಳ್ಳಿ ಇಲ್ಲದಿದ್ದರೆ ಬಿಡಿ ಎನ್ನುತ್ತಾರೆ ವರ್ತಕರು. ಕಳಪೆ ಬಿತ್ತನೆ ಬೀಜ ಪಡೆದ ರೈತರಿಗೆ ಇಳುವರಿ ಬಾರದೆ ಪ್ರತಿ ವರ್ಷ ನಷ್ಟ ಅನುಭವಿಸುವಂತಾಗಿದೆ. ಹಾಸನ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ, ಡಿಸಿ, ಶಾಸಕರು,ತೋಟಗಾರಿಕೆ ಜಂಟಿ ನಿರ್ದೇಶಕರು,ರೈತರ ಸಂಗದ ಮುಖಮಡರು ಒಳಗೊಂಡಿರುವ ಸಮಿತಿ ಸಭೆ ಸೇರಿ ಆಲೂ ಬಿತ್ತನೆ ಬೀಜದ ದರ ನಿಗದಿ ಮಾಡಿ ಅದರಂತೆ ವರ್ತಕರು ಮಾರಾಟ ಮಾಡಲಾಗುತ್ತದೆ.
ಶ್ರೀನಿವಾಸ್, ಎಪಿಎಂಸಿ ಕಾರ್ಯದರ್ಶಿ.ಎಲ್ಲ ಆಲೂ ಬಿತ್ತನೆ ಬೀಜ ಮಾರುವ ವರ್ತಕರು ಕಡ್ಡಾಯವಾಗಿ ದೃಡೀಕೃತ ಬೀಜಗಳನ್ನೇ ಮಾರುವಂತೆ ಹಲವು ಬಾರಿ ವರ್ತಕರಿಗೆ ಸೂಚಿಸಿಲಾಗಿದೆ, ಜನಪ್ರತಿನಿಧಿಗಳ ಅಸಹಕಾರದಿಂದ ಕಳಪೆ ಬಿತ್ತನೆ ಮಾರುವವರನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.