ಯತ್ನಾಳರ ಜೆಸಿಬಿ ಎಲ್ಲಿ ಹೋಯ್ತು ?: ಸಚಿವ ಕಾಶಪ್ಪನವರ

KannadaprabhaNewsNetwork |  
Published : Oct 24, 2026, 03:00 AM IST
23ಕೆಎಂಎನ್ ಡಿ17 | Kannada Prabha

ಸಾರಾಂಶ

ಬಸನಗೌಡ ಪಾಟೀಲ ಯತ್ನಾಳ ಅವರ ಬಿಜೆಪಿ ಘರ್ ವಾಪ್ಸಿ ಕುರಿತು ಬಾಗಲಕೋಟೆಯಲ್ಲಿ ಸಚಿವ ವಿಜಯಾನಂದ ಕಾಶಪ್ಪನವರ ವ್ಯಂಗ್ಯವಾಡಿದ್ದು, ಯತ್ನಾಳರ ಜೆಸಿಬಿ ಎಲ್ಲಿ ಹೋಯ್ತು ? ಜೆಸಿಬಿ ಮೇಲೆ ಹೂವು ಹಾಕೋದು. ಜೆಸಿಬಿ ನಂದು, ಬಸ್ ಮಾಡಿದ್ದೀನಿ. ಅದು ಮಾಡಿದ್ದೀನಿ ಅಂತ ಹೇಳ್ತಿದ್ದನಲ್ಲ, ಈಗ ಜೆಸಿಬಿ ಹೋಯ್ತೇನು ಎಂದು ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಸನಗೌಡ ಪಾಟೀಲ ಯತ್ನಾಳ ಅವರ ಬಿಜೆಪಿ ಘರ್ ವಾಪ್ಸಿ ಕುರಿತು ಬಾಗಲಕೋಟೆಯಲ್ಲಿ ಸಚಿವ ವಿಜಯಾನಂದ ಕಾಶಪ್ಪನವರ ವ್ಯಂಗ್ಯವಾಡಿದ್ದು, ಯತ್ನಾಳರ ಜೆಸಿಬಿ ಎಲ್ಲಿ ಹೋಯ್ತು ? ಜೆಸಿಬಿ ಮೇಲೆ ಹೂವು ಹಾಕೋದು. ಜೆಸಿಬಿ ನಂದು, ಬಸ್ ಮಾಡಿದ್ದೀನಿ. ಅದು ಮಾಡಿದ್ದೀನಿ ಅಂತ ಹೇಳ್ತಿದ್ದನಲ್ಲ, ಈಗ ಜೆಸಿಬಿ ಹೋಯ್ತೇನು ಎಂದು ಪ್ರಶ್ನಿಸಿದರು.ಬಾಗಲಕೋಟೆಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಅವರನ್ನು ಬಿಜೆಪಿಯವರು ವಾಪಸ್ ಕರಕೊಂಡ್ರೆ, ಅದೇ ಜೆಸಿಬಿ ಹಚ್ಚಿಯೇ ಸ್ವಚ್ಛ ಮಾಡ್ತಾರೆ, ಬಿಜೆಪಿಯವರು ಈಗಿರುವ ಮರ್ಯಾದೆಯನ್ನೂ ಕಳೆದುಕೊಳ್ಳುತ್ತಾರೆ ಎಂದರು.ವಿಜಯೇಂದ್ರ ಹಾಗೂ ಯತ್ನಾಳ ಭೇಟಿ ಕುರಿತು ಪ್ರತಿಕ್ರಿಯಿಸಿ, ನೋಡ್ರಿ ಅವರು ಭೇಟಿಯಾಗ್ಯಾರ, ನಾನು ನೋಡಿದ್ದೀನಿ. ಅವರು ಕಥೆ ಮುಗಿಸೋಕೆ ಹೊಳ್ಳಿ ಬರ್ತಾರೆ. ಯಾರು ಹೊರಗೆ ಹಾಕಿದವರು, ಹೊಳ್ಳಿ ಕಕೋಂತಾರಲ್ಲ, ಅವರ ಪಕ್ಷದ ಅಸ್ತಿತ್ವ ಕಳೀತಾರೆ, ನೀವೇ ನೋಡುವಿರಂತೆ ಎಂದು ಕಾಶಪ್ಪನವರ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಈ ಹಂಗಾಮಿನಲ್ಲಿ ಕಬ್ಬಿನ ಇಳುವರಿ ಕಡಿಮೆ
ಚನ್ನಮ್ಮಳ ಶೌರ್ಯ, ದೇಶಪ್ರೇಮ ಮಹಿಳೆಯರಿಗೆ ಸ್ಫೂರ್ತಿ