ನಾಳೆ ರಾಜ್ಯಮಟ್ಟದ ಕವಿ ಸಮ್ಮೇಳನ, ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : Oct 24, 2026, 03:00 AM IST
23ಬಿಎಸ್ವಿ01- ಬಸವನಬಾಗೇವಾಡಿಯ ಬಸವ ಜನ್ಮಭೂಮಿ ಪ್ರತಿಷ್ಠಾನವು ಕೊಡಮಾಡುವ ಬಸವವಿಭೂಷಣ ಹಾಗೂ ಬಸವಭೂಷಣ ಪ್ರಶಸ್ತಿಗೆ ಭಾಜನರಾದ ಮಹನೀಯರು. | Kannada Prabha

ಸಾರಾಂಶ

ಪಟ್ಟಣದ ಬಸವ ಜನ್ಮಸ್ಥಳ ಸ್ಮಾರಕದ ಮಾದರಸ ಸಭಾಭವನದಲ್ಲಿ ಬಸವ ಜನ್ಮಭೂಮಿ ಪ್ರತಿಷ್ಠಾನ ಅ.25 ರಂದು ಬೆಳಗ್ಗೆ 11 ಗಂಟೆಗೆ 15 ನೇ ವಾರ್ಷಿಕೋತ್ಸವ ಅಂಗವಾಗಿ ರಾಜ್ಯಮಟ್ಟದ ಕವಿ ಸಮ್ಮೇಳನ, ಮುರುಗೇಶ ಸಂಗಮ ಅವರ ಸಂಪಾದನೆಯ ಬಸವ ಜನ್ಮಸ್ಥಳ ಸ್ಮಾರಕದ ಐತಿಹಾಸಿಕತೆ ಬ.ಬಾಗೇವಾಡಿಯ ಅಸ್ಮಿತೆ ಕವನ ಸಂಕಲನ ಲೋಕಾರ್ಪಣೆ, ಕವಿಗೋಷ್ಠಿ, 2025ನೇ ಸಾಲಿನ ರಾಷ್ಟ್ರಮಟ್ಟದ ಪ್ರತಿಷ್ಠಿತ ಬಸವವಿಭೂಷಣ ಹಾಗೂ ರಾಜ್ಯಮಟ್ಟದ ಪ್ರತಿಷ್ಠಿತ ಬಸವಭೂಷಣ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಸಮಾರಂಭ ಹಮ್ಮಿಕೊಂಡಿದೆ.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಪಟ್ಟಣದ ಬಸವ ಜನ್ಮಸ್ಥಳ ಸ್ಮಾರಕದ ಮಾದರಸ ಸಭಾಭವನದಲ್ಲಿ ಬಸವ ಜನ್ಮಭೂಮಿ ಪ್ರತಿಷ್ಠಾನ ಅ.25 ರಂದು ಬೆಳಗ್ಗೆ 11 ಗಂಟೆಗೆ 15 ನೇ ವಾರ್ಷಿಕೋತ್ಸವ ಅಂಗವಾಗಿ ರಾಜ್ಯಮಟ್ಟದ ಕವಿ ಸಮ್ಮೇಳನ, ಮುರುಗೇಶ ಸಂಗಮ ಅವರ ಸಂಪಾದನೆಯ ಬಸವ ಜನ್ಮಸ್ಥಳ ಸ್ಮಾರಕದ ಐತಿಹಾಸಿಕತೆ ಬ.ಬಾಗೇವಾಡಿಯ ಅಸ್ಮಿತೆ ಕವನ ಸಂಕಲನ ಲೋಕಾರ್ಪಣೆ, ಕವಿಗೋಷ್ಠಿ, 2025ನೇ ಸಾಲಿನ ರಾಷ್ಟ್ರಮಟ್ಟದ ಪ್ರತಿಷ್ಠಿತ ಬಸವವಿಭೂಷಣ ಹಾಗೂ ರಾಜ್ಯಮಟ್ಟದ ಪ್ರತಿಷ್ಠಿತ ಬಸವಭೂಷಣ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಸಮಾರಂಭ ಹಮ್ಮಿಕೊಂಡಿದೆ.

ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಸಮಾರಂಭ ಉದ್ಘಾಟಿಸುವರು. ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಅವರು ಬಸವ ಜನ್ಮಸ್ಥಳ ಸ್ಮಾರಕದ ಐತಿಹಾಸಿಕತೆ, ಬ.ಬಾಗೇವಾಡಿಯ ಅಸ್ಮಿತೆ ಕವನ ಸಂಕಲನ ಲೋಕಾರ್ಪಣೆಗೊಳಿಸುವರು. ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮನಗೂಳಿಯ ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಸೋಮನಗೌಡ(ಅಪ್ಪುಗೌಡ) ಪಾಟೀಲ ಆಗಮಿಸುವರು. ತಳೇವಾಡದ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾರ ಸಂಗಮೇಶ ಪೂಜಾರಿ ಗ್ರಂಥ ಪರಿಚಯಿಸುವರು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹನೀಯರಿಗೆ 2025ನೇ ಸಾಲಿನ ರಾಷ್ಟ್ರಮಟ್ಟದ ಬಸವವಿಭೂಷಣ ಪ್ರಶಸ್ತಿಗೆ ಈರಣ್ಣ ಪಟ್ಟಣಶೆಟ್ಟಿ (ಸಮಾಜಸೇವೆ), ಸೋಮನಗೌಡ ಪಾಟೀಲ (ಸಮಾಜಸೇವೆ), ಶೀಶೈಲ ಮಂಗಳವೇಡೆ (ಕಲೆ), ರಾಮು ಜಾಧವ (ಸಮಾಜಸೇವೆ), ಅಶೋಕ ಏಲೇರಿ (ಶಿಕ್ಷಣ), ವಿದ್ಯಾಲಕ್ಷ್ಮೀ ಹಿರೇಮಠ (ವೈದ್ಯಕೀಯ), ವಿಜಯಕುಮಾರ ಚವ್ಹಾಣ (ಉದ್ಯಮ ಕ್ಷೇತ್ರ), ಪ್ರಭುಲಿಂಗ ಹೆಬ್ಬಳ್ಳಿ(ಕಾನೂನು,ಕಾರ್ಮಿಕ ಕ್ಷೇತ್ರ), ಎಂ.ಕೃಷ್ಣಮೂರ್ತಿ (ಅಭಿಯಂತರ ಕ್ಷೇತ್ರ), ರಾಜ್ಯಮಟ್ಟದ ಬಸವಭೂಷಣ ಪ್ರಶಸ್ತಿಗೆ ಶಿಲ್ಪಾ ಮಲ್ಲಿಕೇರಿಮಠ (ಸಾಹಿತ್ಯ), ಜಿ.ಎ.ಹೂಗಾರ (ಶಿಕ್ಷಕರು), ಸುನೀತಾ ಪತಂಗರಾಯ (ಶಿಕ್ಷಣ), ಪ್ರಶಾಂತ ಕುಲಕರ್ಣಿ (ಶಿಕ್ಷಣ), ಸೌಜನ್ಯ ಅಂಕಲಗಿ (ಸಾಹಿತ್ಯ), ಮಹಾದೇವ ಕುಲಕರ್ಣಿ(ಶಿಕ್ಷಣ) ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕವಿಗೋಷ್ಠಿಯಲ್ಲಿ ಪೂರ್ಣಿಮಾ ಶಂಕರ, ಶಿಲ್ಪಾ ಮಲ್ಲಿಕೇರಿಮಠ, ರಾಮಕೃಷ್ಣ ಗೋಖಲೆ, ಶಿವಾಜಿ ಮೋರೆ, ಶಾರದಾ ತೋಟದ, ಸುನಿತಾ ಪತಂಗರಾಯ, ಸೌನಜ್ಯ ಅಂಕಲಗಿ, ಮಂಜುನಾಥ ಜನವಾಡ, ಸಾವಿತ್ರಿ ತಳವಾರ, ತಾರಾಮತಿ ಪಾಟೀಲ, ಶಾಂತಾಬಾಯಿ ಕುಂಬಾರಿ, ರೇಣುಕಾ ಸಣ್ಣಕ್ಕಿ, ಸುರೇಶ ಅಂಗಡಿ, ಆರಮ್ಮ ಬೋನೂರ, ಸೂಗಮ್ಮ ಪಾಟೀಲ, ವನಜಾಕ್ಷಿ ಬಡಿಗೇರ, ಸುಮಾ ಗಾಜರೆ, ಅಂಬಿಕಾ ಕರಕಪ್ಪಗೋಳ, ಭಾರತಿ ವಾಡಕರ, ಬಸವರಾಜ ಉಕ್ಕಲಿ, ನಾಗಮ್ಮ ಉಮರ್ಜಿ, ಯಮನೂರಪ್ಪ ಅರಬಿ, ಬೌರಮ್ಮ ಪತಂಗಿ, ಭಾರತಿ ಗೊಂಗಡಿ ಭಾಗವಹಿಸುವರು ಎಂದು ಬಸವ ಜನ್ಮಭೂಮಿ ಪ್ರತಿಷ್ಠಾನದ ಸಂಚಾಲಕ ಮುರುಗೇಶ ಸಂಗಮ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಈ ಹಂಗಾಮಿನಲ್ಲಿ ಕಬ್ಬಿನ ಇಳುವರಿ ಕಡಿಮೆ
ಚನ್ನಮ್ಮಳ ಶೌರ್ಯ, ದೇಶಪ್ರೇಮ ಮಹಿಳೆಯರಿಗೆ ಸ್ಫೂರ್ತಿ