ಹಗರಿಬೊಮ್ಮನಹಳ್ಳಿ: ದೇಶವನ್ನು ಅಭಿವೃದ್ಧಿ ದೃಷ್ಟಿಕೋನಕ್ಕಿಂತಲೂ ಧರ್ಮದ ಹೆಸರಲ್ಲಿ ಆಳುವ ಹುನ್ನಾರ ನಡೆಸಲಾಗುತ್ತಿದೆ ಸಂಘಟನೆಯ ತಾಲೂಕು ಸಂಚಾಲಕಿ ಬಿ. ಮಾಳಮ್ಮ ಬೇಸರ ವ್ಯಕ್ತಪಡಿಸಿದರು.
ಮಂಗಳೂರಿನ ಅಬುಬಕರ್ ಸಿದ್ದಕಿ ಮೌಲಾಲಿ ಮಾತನಾಡಿ, ಸತ್ಯ, ಅಹಿಂಸೆಯಂತ ಉದಾತ್ತ ವಿಚಾರಗಳನ್ನು ನೀಡಿದ ಗಾಂಧೀಜಿ ಹೋರಾಟ ಮತ್ತು ಚಿಂತನೆಗಳು ವಿಶ್ವಮಾನ್ಯವಾಗಿದ್ದರೂ ಕೆಲ ಶಕ್ತಿಗಳಿಗೆ ಬೇಡದ ವಸ್ತುಗಳಾಗಿವೆ ಎಂದರು.
ಸಿಐಟಿಯು ರಾಜ್ಯ ಉಪಾಧ್ಯಕ್ಷ ಆರ್.ಎಸ್. ಬಸವರಾಜ ಮಾತನಾಡಿ, ದೇಶವನ್ನು ಕೆಲ ಶಕ್ತಿಗಳು ಕೋಮು ಸಾಮರಸ್ಯವನ್ನು ನಾಶಪಡಿಸುವ ಮೂಲಕ ಧರ್ಮದ ವಿಷಬೀಜ ಬಿತ್ತುತ್ತಿವೆ. ಯುವಕರು ಜಾಗೃತಗೊಳ್ಳುವ ಸಮಯ ಇದಾಗಿದ್ದು, ಕೂಡಲೇ ಎಚ್ಚೆತ್ತು ಜಾತಿ ವಿಷಬೀಜ ಬಿತ್ತುವವರಿಂದ ದೇಶವನ್ನು ರಕ್ಷಿಸಬೇಕಿದೆ ಎಂದರು. ಸಾಹಿತಿ ಹುರುಕಡ್ಲಿ ಶಿವಕುಮಾರ ಮಾತನಾಡಿದರು. ಮಹಾತ್ಮ ಗಾಂಧೀಜಿ ಹುತಾತ್ಮರ ದಿನಾಚರಣೆ ಹಿನ್ನೆಲೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳ ನೇತೃತ್ವದಲ್ಲಿ ಸೌಹಾರ್ದತಾ ಮಾನವ ಸರಪಳಿ ರಚಿಸಲಾಯಿತು. ಕೋಮು ಸೌಹಾರ್ದತೆ, ವಿಶ್ವಭ್ರಾತೃತ್ವ ಮತ್ತು ಸಾಮರಸ್ಯ ಕುರಿತು ಘೋಷಣೆ ಕೂಗಿದರು. ಹಗರಿ ಆಂಜನೇಯ ದೇಗುಲದಿಂದ ಬಸವೇಶ್ವರ ವೃತ್ತದವರೆಗೆ ಮೆರವಣಿಗೆ ನಡೆಸಿದರು.ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯರಾದ ಅಕ್ಕಿ ತೋಟೇಶ್, ಹೆಗ್ಡಾಳ್ ರಾಮಣ್ಣ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಗೋಣಿಬಸಪ್ಪ, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಕೆ.ಪಿ. ದೇವರಾಜ, ಪುರಸಭೆ ಸದಸ್ಯರಾದ ಅಜೀಜುಲ್ಲಾ, ತೆಲಿಗಿ ನೆಲ್ಲು ಇಸ್ಮಾಯಿಲ್, ದೇವದಾಸಿ ವಿಮೋಚನಾ ಸಂಘದ ಚಾಂದ್‌ಬಿ, ಕರವೇ ಅಧ್ಯಕ್ಷ ಎನ್.ಎಂ. ಗೌಸ್, ಜನವಾದಿ ಮಹಿಳಾ ಸಂಘಟನೆಯ ಸರ್ದಾರ್ ಹುಲಿಗೆಮ್ಮ ಇತರರಿದ್ದರು.