)
ಹುಬ್ಬಳ್ಳಿ:
ಇಂಥ ಪ್ರಶ್ನೆಗಳೀಗ ಹುಬ್ಬಳ್ಳಿ-ಧಾರವಾಡ ಮಹಾನಗರದ ಸಾರ್ವಜನಿಕ ವಲಯದಲ್ಲಿ ಉದ್ಭವವಾಗಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಮಾಂಜಾದಾರಕ್ಕೆ ಸಂಬಂಧಪಟ್ಟಂತೆ ಬರೀ ಪೊಲೀಸ್ ಆಯುಕ್ತರಷ್ಟೇ ಹೇಳಿಕೆ ನೀಡುವ ಜತೆಗೆ ಕ್ರಮದ ಎಚ್ಚರಿಕೆ ನೀಡುತ್ತಿದ್ದಾರೆ.
ಕಾನೂನು ಏನು ಹೇಳುತ್ತದೆ?ಗಾಳಿ ಪಟಕ್ಕೆ ಬಳಸುವ ಮಾಂಜಾದಾರದಿಂದ ವರ್ಷದಿಂದ ವರ್ಷಕ್ಕೆ ಆಗುತ್ತಿದ್ದ ಅನಾಹುತಗಳಿಗೆ ಕಡಿವಾಣ ಹಾಕಲೆಂದು 2016ರಲ್ಲಿ ಕರ್ನಾಟಕ ಸರ್ಕಾರ ಕಾಯ್ದೆ ಮಾಡಿ ಸಂಪೂರ್ಣ ನಿಷೇಧಿಸಿತು. ಇದರೊಂದಿಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವೂ 2017ರಲ್ಲಿ ನೈಲಾನ್ ಹಾಗೂ ಕೃತಕ ವಸ್ತು ಹಾಗೂ ಗಾಜಿನ ಪುಡಿ ಲೇಪಿತ ಮಾಂಜಾದಾರಗಳ ಮೇಲೆ ನಿಷೇಧ ಹೇರಿ ಆದೇಶಿಸಿದೆ. ಪಕ್ಷಿ ಹಾಗೂ ಮನುಷ್ಯರ ಸುರಕ್ಷತೆಯ ದೃಷ್ಟಿಯಿಂದ ಸರ್ಕಾರವೇನೂ ಈ ಕಾಯ್ದೆಯನ್ನು ಘೋಷಿಸಿತು.
ಮಾಂಜಾದಾರ ನಿಷೇಧದ ಕುರಿತಂತೆ ಸರ್ಕಾರ ಘೋಷಿಸಿದೆ ಹೊರತು ಅನುಷ್ಠಾನಗೊಳಿಸಿಲ್ಲ. ಹೀಗಾಗಿ ಗಲ್ಲಿ-ಗಲ್ಲಿಯ ಅಂಗಡಿಗಳಲ್ಲಿ ಯಥೇಚ್ಛವಾಗಿ ಮಾಂಜಾದಾರ ದೊರೆಯುತ್ತಿದೆ. ಸರ್ಕಾರ ಹೇಳಿರುವ ಕಾಯ್ದೆ ಅನುಷ್ಠಾನದ ಜವಾಬ್ದಾರಿ ಅರಣ್ಯ ಇಲಾಖೆ (ಪಕ್ಷಿ, ಪ್ರಾಣಿಗಳ ಜೀವಕ್ಕೆ ಕುತ್ತು ಇರುವುದರಿಂದ ಅರಣ್ಯ ಇಲಾಖೆಯನ್ನು ಸೇರಿಸಲಾಗಿದೆ), ಪೊಲೀಸ್ ಇಲಾಖೆ ಹಾಗೂ ಆಯಾ ಸ್ಥಳೀಯ ಸಂಸ್ಥೆಗಳದ್ದು.
ಏನು ಮಾಡಬೇಕು?
ಮನುಷ್ಯರಿಗೆ, ಪಕ್ಷಿಗಳ ಜೀವಕ್ಕೆ ಕುತ್ತು ಆಗದಂತೆ ಗಾಳಿಪಟ ಹಾರಿಸಲು ಯಾವ ದಾರ ಬಳಸಬೇಕು ಎಂಬುದರ ಕುರಿತು ಜಾಗೃತಿ ಮೂಡಿಸಬೇಕು. ರಸ್ತೆ ಅಕ್ಕ-ಪಕ್ಕ ಗಾಳಿ ಪಟ ಹಾರಿಸದಂತೆ ನಿಯಮ ಜಾರಿಗೊಳಿಸಬೇಕು. ಈ ನಿಟ್ಟಿನಲ್ಲಿ ಮೂರು ಇಲಾಖೆಗಳು ಈ ನಿಟ್ಟಿನಲ್ಲಿ ಸಮನ್ವಯ ಸಾಧಿಸಿ ಕ್ರಮಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒಕ್ಕೊರಲಿನ ಆಗ್ರಹ. ಮಾಂಜಾದಾರವನ್ನು ಸರ್ಕಾರ ನಿಷೇಧಿಸಿದರೂ ಕಾಯ್ದೆಯ ಅನುಷ್ಠಾನವಾಗಿಲ್ಲ. ಸ್ಥಳೀಯ ಸಂಸ್ಥೆ, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಆದರೆ, ಇಲ್ಲಿ ಅದು ಆಗುತ್ತಿಲ್ಲ. ಹೀಗಾಗಿ ಅಮಾಯಕರು ಜೀವು ತೆರಬೇಕಾಗಿದೆ.