ಕನ್ನಡಪ್ರಭ ವಾರ್ತೆ ಉಡುಪಿ
ಅವರು ಶನಿವಾರ ಶೃಂಗೇರಿ ವಿಧಾನಸಭಾ ಕ್ಷೇತ್ರದ ಕೊಪ್ಪ ಹೋಬಳಿಯ ಹರಿಹರಪುರ, ಕಿಗ್ಗಾ ಮುಂತಾದ ಕಡೆಗಳಲ್ಲಿ ನಡೆದ ಮತಪ್ರಚಾರ ಸಭೆಯಲ್ಲಿ ಮಾತನಾಡಿದರು.
ಇಲ್ಲಿನ ಸಂಸದೆಯೇ ಕೇಂದ್ರದಲ್ಲಿ ರೈತ ಮತ್ತು ಕೃಷಿ ಕಲ್ಯಾಣ ಸಚಿವೆಯಾಗಿದ್ದರು. ಅವರು ಗೋರಕ್ ಸಿಂಗ್ ವರದಿಯ ಅನುಷ್ಠಾನಕ್ಕೆ ಪ್ರಯತ್ನ ಮಾಡಿಲ್ಲ. ಗೋರಕ್ ಸಿಂಗ್ ವರದಿ ಜಾರಿಯಾಗಬೇಕಾದರೆ ಅದರ ಬಗ್ಗೆ ಕೆಲಸ ಮಾಡುವವರಿಗೆ ಮತ ನೀಡಬೇಕು ಹೊರತು, ಪ್ರಯತ್ನವನ್ನೇ ಮಾಡದವರಿಗಲ್ಲ ಎಂದು ಹೆಗ್ಡೆ ಹೇಳಿದರು.ತಾನು ಪ್ರಥಮ ಬಾರಿಗೆ ಇಲ್ಲಿ ಮತಯಾಚನೆಗೆ ಬಂದಾಗ ಅಡಕೆ ಬೆಳೆಗಾರರ ಸಮಸ್ಯೆಯ ಪರಿಹಾರದ ಬಗ್ಗೆ ಭರವಸೆ ನೀಡಬೇಕು ಎಂದು ರೈತರು ಒತ್ತಾಯಿಸಿದ್ದರು. ಅದರಂತೆ ತಾನು ಸಂಸದನಾಗಿ ಆಯ್ಕೆಯಾದ ಮೇಲೆ ಪ್ರಯತ್ನ ಮಾಡಿದೆ. ಅದರ ಫಲವಾಗಿ ಅಡಕೆ ಬೆಳೆಗಾರರ ಸಮಸ್ಯೆ ಅಧ್ಯಯನಕ್ಕೆ ಸಮಿತಿ ರಚನೆಯಾಗಿ, ಅದರಂತೆ ಅಡಕೆ ಪುನಶ್ಚೇತನಕ್ಕೆ 1 ಹೆಕ್ಟೇರ್‌ಗೆ 15 ಸಾವಿರ ರು. ಬಿಡುಗಡೆಯಾಗಿತ್ತು ಎಂದವರು ನೆನಪಿಸಿಕೊಂಡರು.
ಅವರೊಂದಿಗೆ ಶಾಸಕ ಟಿ.ಡಿ. ರಾಜೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಂಶುಮಂತ್ ಗೌಡ, ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಬಾಳೆಮನೆ ನಟರಾಜು, ಹೋಬಳಿ ಅಧ್ಯಕ್ಷ ಕೊಡ್ತಲ್ ಮಿತ್ರ, ಕಕ್ಕುಡಿಗೆ ರವೀಂದ್ರ, ರಾಜ್ಯ ಕಿಸಾನ್ ಘಟಕದ ಅಧ್ಯಕ್ಷ ಸಚ್ಚಿನ್ ಮಿಗಾ ಹಾಗೂ ಎಲ್ಲ ಘಟಕಗಳ ಪದಾಧಿಕಾರಿಗಳು, ಪಕ್ಷದ ಮುಖಂಡರು ಭಾಗವಹಿಸಿದ್ದರು.
ಶೃಂಗೇರಿಯ ಕೆಲವು ಕಡೆಗಳಲ್ಲಿ ಮತದಾನದ ಬಹಿಷ್ಕಾರದಿಂದ ಸಮಸ್ಯೆ ಪರಿಹಾರ ಆಗುವುದಿಲ್ಲ, ಅದರ ಬದಲು ಯಾವ ಸಮಸ್ಯೆ ಪರಿಹಾರಕ್ಕೆ ಬಹಿಷ್ಕಾರ ಮಾಡುತ್ತಿರೋ ಅದನ್ನು ಪರಿಹಾರ ಮಾಡುವವರಿಗೆ ಮತ ನೀಡಿ ಗೆಲ್ಲಿಸಿ, ಸಮಸ್ಯೆ ಪರಿಹಾರ ಆಗುತ್ತದೆ. ಬಹಿಷ್ಕಾರ ಕೈಬಿಡಿ ಎಂದು ಜಯಪ್ರಕಾಶ್ ಹೆಗ್ಡೆ ಹೇಳಿದರು.