ಧಾರವಾಡ:
ಈಗ ರೈತರು ಸಂಕಷ್ಟದಲ್ಲಿದ್ದೂ ಅನಗತ್ಯವಾಗಿ ಕೆಲವು ಬ್ಯಾಂಕ್‌ಗಳು ಬೆಳೆಸಾಲ ನೀಡಲು ಸಿಬಿಲ್ ರೇಟ್ ಕಡ್ಡಾಯ ಮಾಡುತ್ತಿವೆ. ಇದರಿಂದ ರೈತರಿಗೆ ಮತ್ತು ಅವರು ಉತ್ಪಾದಿಸುವ ಆಹಾರದ ಮೇಲೆ ನೇರ ಪ್ರಭಾವ ಬೀರುತ್ತದೆ. ಯಾವುದೇ ತಕರಾರು ಇಲ್ಲದೆ ರೈತರಿಗೆ ₹ ೧೦ ಲಕ್ಷ ವರೆಗೆ ಬೆಳೆಸಾಲ ನೀಡಲು ಆರ್‌ಬಿಐ ಮಾರ್ಗಸೂಚಿಗಳಿವೆ. ಇದನ್ನು ಬ್ಯಾಂಕರ್ಸ್‌ಗಳು ಪಾಲಿಸಬೇಕೆಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಮಿತಿ ಸಭೆ ಹಾಗೂ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೇಂದ್ರ ಸರ್ಕಾರದಿಂದ ಸಮುದಾಯ ಮತ್ತು ವ್ಯಕ್ತಿಗತ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸಬೇಕು. ಕೇಂದ್ರ ಸರ್ಕಾರ ಸ್ವಯಂ ಉದ್ಯೋಗಕ್ಕೆ ಆದ್ಯತೆ ನೀಡುತ್ತಿದೆ. ಬ್ಯಾಂಕ್‌ಗಳು ನಿಗದಿತ ಗುರಿಗೆ ಅನುಗುಣವಾಗಿ ಸಾಲ ಬಿಡುಗಡೆ ಮಾಡಬೇಕು. ಕಾಲಮಿತಿಯಲ್ಲಿ ಪ್ರಗತಿ ಸಾಧಿಸಬೇಕೆಂದು ಸಚಿವರು ತಿಳಿಸಿದರು.ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಭುದೇವ ಎನ್.ಜಿ. ಮಾತನಾಡಿ, ಕೃಷಿ ಬೆಳೆ ಸಾಲವು ಜೂನ್ ಅಂತ್ಯಕ್ಕೆ ₹ ೬೧೦.೮ ಕೋಟಿ ಗುರಿ ಹೊಂದಿದ್ದು, ₹ ೬೫೦.೩೪ ಕೋಟಿ ಸಾಧನೆಯಾಗಿದೆ. ಕೃಷಿ ಅವಧಿ ಸಾಲವು ಜೂನ್ ಅಂತ್ಯಕ್ಕೆ ೬೧೫.೬೬ ಕೋಟಿ ಗುರಿ ಹೊಂದಿದ್ದು, ₹ ೬೪೧.೫೭ ಕೋಟಿ ಸಾಧನೆಯಾಗಿದೆ ಎಂದು ಮಾಹಿತಿ ನೀಡಿದರು.
ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳು ಜೂನ್ ಅಂತ್ಯಕ್ಕೆ ₹ ೨೩೫೭.೮೧ ಕೋಟಿ ಗುರಿ ಹೊಂದಿದ್ದು, ₹ ೩೩೧೨.೯೮ ಕೋಟಿ ಸಾಧನೆ, ಇತರೆ ಆದ್ಯತಾ ವಲಯದಲ್ಲಿ ಜೂನ್ ಅಂತ್ಯಕ್ಕೆ ₹ ೧೮೦.೨೩ ಕೋಟಿ ಗುರಿ ಹೊಂದಿದ್ದು, ₹ ೧೪೭.೮ ಕೋಟಿ ಸಾಧನೆ, ಆದ್ಯತಾ ರಹಿತಾ ವಲಯದಲ್ಲಿ ಜೂನ್ ಅಂತ್ಯಕ್ಕೆ ₹ ೧೮೨೮.೭೬ ಕೋಟಿ ಗುರಿ ಹೊಂದಿದ್ದು, ₹ ೨೭೦೧.೧೩ ಕೋಟಿ ಸಾಧನೆಯಾಗಿದೆ. ಒಟ್ಟಾರೆಯಾಗಿ ಜೂನ್ ಅಂತ್ಯಕ್ಕೆ ₹ ೫೫೯೩.೨೬ ಕೋಟಿ ಗುರಿ ಹೊಂದಿದ್ದು,₹ ೭೪೫೩.೮೨ ಕೋಟಿ ಸಾಧನೆಯಾಗಿದೆ.೧೩೩.೨೬ ತ್ರೈಮಾಸಿಕ ಗುರಿಯ ಶೇಕಡಾವಾರು ಸಾಧನೆಯಾಗಿದೆ ಎಂದು ತಿಳಿಸಿದರು.ಈ ವೇಳೆ ಜಿಲ್ಲಾಧಿಕಾರಿ ದಿವ್ಯಪ್ರಭು, ಆರ್‌ಬಿಐ ಜಿಲ್ಲಾ ಅಗ್ರಣೀಯ ಅಧಿಕಾರಿ ಅರುಣಕುಮಾರ, ಬ್ಯಾಂಕ್ ಆಪ್ ಬರೋಡಾ ಜಿಲ್ಲಾ ಪ್ರಾದೇಶಿಕ ವ್ಯವಸ್ಥಾಪಕ ವಿಜಯ ಪಾಟೀಲ, ನಬಾರ್ಡ್ ಎಜಿಎಂ ಮಯೂರ ಕಾಂಬ್ಳೆ, ಲೀಡ್ ಡಿಸ್ಟ್ರಿಕ್ಟ್ ಮ್ಯಾನೇಜರ್ ಪ್ರಭುದೇವ ಎನ್.ಜಿ., ಸೇರಿದಂತೆ ವಿವಿಧ ಅಧಿಕಾರಿಗಳು ಇದ್ದರು.