ಕನ್ನಡಪ್ರಭ ವಾರ್ತೆ ಉಡುಪಿ
ಇತ್ತೀಚೆಗೆ ನಡೆದ ನೇಹಾ ಕೊಲೆ ಪ್ರಕರಣವನ್ನು ಬಿಜೆಪಿಯ ರಾಜ್ಯ, ರಾಷ್ಟ್ರ ನಾಯಕರು ಲೋಕಸಭಾ ಚುನಾವಣೆಗೆ ಅಸ್ತ್ರವಾಗಿಸಿಕೊಂಡರು. ಆದರೆ ಮಹಿಳೆಯರ ಮೇಲೆ ಪ್ರಜ್ವಲ್ ರೇವಣ್ಣ ನಡೆಸಿದ ಅಮಾನುಷ ಕೃತ್ಯದ ಬಗ್ಗೆ ಬಿಜೆಪಿ ಚಕಾರವೆತ್ತುತ್ತಿಲ್ಲ ಎಂದು ಆರೋಪಿಸಿದರು.
ತಾನು ಏನು ಮಾಡಿದರೂ ಯಾರು ಏನು ಮಾಡಲಾಗದು ಎಂಬ ದುರಂಹಕಾರದಿಂದ ಪ್ರಜ್ವಲ್ ರೇವಣ್ಣ, ನೂರಾರು ಸ್ತ್ರೀಯರ ಶೀಲಹರಣ ಮಾಡಿದ್ದಾನೆ. ಆತನಿಗೆ ಲೋಕಸಭೆ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಹಾಸನದ ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದ್ದರೂ, ಬಿಜೆಪಿ, ಜೆಡಿಎಸ್ ನೊಂದಿಗಿನ ಮೈತ್ರಿಯೊಂದಿಗೆ ಟಿಕೆಟ್ ನೀಡಿದೆ. ಈಗ ಇಷ್ಟು ದೊಡ್ಡ ಪ್ರಕರಣದ ಬಗ್ಗೆ ಧ್ವನಿ ಎತ್ತದ ಬಿಜೆಪಿಯೇ ರೇವಣ್ಣ ಅವರನ್ನು ರಕ್ಷಿಸುತ್ತಿದೆ ಎಂದು ಗುಮಾನಿ ಹುಟ್ಟುತ್ತಿದೆ ಎಂದವರು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕಿಯರಾದ ಅಮೃತಾ ಕೃಷ್ಣಮೂರ್ತಿ, ಜ್ಯೋತಿ ಹೆಬ್ಬಾರ್, ಚಂದ್ರಿಕಾ ಶೆಟ್ಟಿ, ವರೋನಿಕಾ ಕರ್ನೆಲಿಯೋ ಉಪಸ್ಥಿತರಿದ್ದರು.