ಮದ್ದೂರು ತಾಲೂಕು ಕಸಾಪದಲ್ಲಿ ಎರಡು ವರ್ಷ ಇಲ್ಲದ ಗೊಂದಲ ಈಗೇಕೆ...?

KannadaprabhaNewsNetwork |  
Published : Feb 07, 2024, 01:50 AM IST
5ಕೆಎಂಎನ್ ಡಿ12ಮದ್ದೂರು ಪ್ರವಾಸಿ ಮಂದಿರದ ಬಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆ ನಡೆಯಿತು. | Kannada Prabha

ಸಾರಾಂಶ

ಮದ್ದೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ, ಕುವೆಂಪು ಜಯಂತಿ, ಹುತಾತ್ಮ ದಿನಾಚರಣೆ, ನಾಡು ನುಡಿಗಾಗಿ ವಿಚಾರ ಸಂಕಿರಣ, ನೆಲ, ಜಲ ಭಾಷೆಗಾಗಿ ಹೋರಾಟ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡದ ಅರಿವು ಮೂಡಿಸುವ ಕಾರ್ಯಕ್ರಮಗಳು ಸೇರಿದಂತೆ ಕಳೆದೆರಡು ವರ್ಷಗಳಿಂದ ಪರಿಷತ್ತಿನ ಚಟುವಟಿಕೆಗಳನ್ನು ವಿ.ಸಿ.ಉಮಾಶಂಕರ್ ಹಮ್ಮಿಕೊಂಡು ಬಂದಿದ್ದಾರೆ. ಎರಡು ವರ್ಷಗಳಿಂದ ಇಲ್ಲದ ಗೊಂದಲ ಹೀಗೇಕೆ ಬಂತು..?

ಕನ್ನಡಪ್ರಭ ವಾರ್ತೆ ಮದ್ದೂರುಕಳೆದೆರಡು ವರ್ಷಗಳಿಂದ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ಅತ್ಯಂತ ಕ್ರಿಯಾಶೀಲವಾಗಿ ವಿ.ಸಿ. ಉಮಾಶಂಕರ್ ನೇತೃತ್ವದಲ್ಲಿ ನಡೆಸಲಾಗುತ್ತಿದೆ ಎಂದು ಕಸಾಪ ಜಿಲ್ಲಾ ಉಪಾಧ್ಯಕ್ಷ ಪ್ರೊ.ಬಿ.ಎಸ್.ಬೋರೇಗೌಡ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದ ಬಳಿ ತಾಲೂಕು ಕಸಾಪದಿಂದ ಆಯೋಜಿಸಿದ್ದ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆ ಹಾಗೂ ಕನ್ನಡ ಕಟ್ಟಾಳುಗಳ ಸಭೆಯಲ್ಲಿ ಮಾತನಾಡಿದರು.

ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ, ಕುವೆಂಪು ಜಯಂತಿ, ಹುತಾತ್ಮ ದಿನಾಚರಣೆ, ನಾಡು ನುಡಿಗಾಗಿ ವಿಚಾರ ಸಂಕಿರಣ, ನೆಲ, ಜಲ ಭಾಷೆಗಾಗಿ ಹೋರಾಟ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡದ ಅರಿವು ಮೂಡಿಸುವ ಕಾರ್ಯಕ್ರಮಗಳು ಸೇರಿದಂತೆ ಕಳೆದೆರಡು ವರ್ಷಗಳಿಂದ ಪರಿಷತ್ತಿನ ಚಟುವಟಿಕೆಗಳನ್ನು ವಿ.ಸಿ.ಉಮಾಶಂಕರ್ ಹಮ್ಮಿಕೊಂಡು ಬಂದಿದ್ದಾರೆ. ಎರಡು ವರ್ಷಗಳಿಂದ ಇಲ್ಲದ ಗೊಂದಲ ಈಗೇಕೆ ಎಂದು ಪ್ರಶ್ನಿಸಿದರು.

ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ವಿ.ಸಿ.ಉಮಾಶಂಕರ ಅವರನ್ನೇ ಮುಂದುವರಿಸಲು ಅನುಮೋದಿಸಲಾಗುವುದು. ರಾಜ್ಯಾಧ್ಯಕ್ಷರಾದ ಮಹೇಶ್ ಜೋಶಿ ಅವರು ಬುಧವಾರ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಈ ವೇಳೆ ತಾಲೂಕಿನ ಅಧ್ಯಕ್ಷರ ಗೊಂದಲ ಬಗೆಹರಿಯಲಿದೆ ಎಂದರು.

ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿ.ಎಂ.ಕ್ರಾಂತಿಸಿಂಹ ಮಾತನಾಡಿ, ಪರಿಷತ್ತಿನ ಬೈಲ ನಿಯಮದ ಪ್ರಕಾರ ತಾಲೂಕು ಅಧ್ಯಕ್ಷರನ್ನು ನೇಮಕ ಮಾಡುವುದು ಜಿಲ್ಲಾಧ್ಯಕ್ಷರ ಪರಮಾಧಿಕಾರವಾಗಿದೆ. ಅದನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಎಂದರು.

ಕಸಾಪ ತಾಲೂಕು ಅಧ್ಯಕ್ಷ ವಿ.ಸಿ.ಉಮಾಶಂಕರ್ ಮಾತನಾಡಿ, ನಾನು ಅಧ್ಯಕ್ಷನಾದ ಅಂದಿನಿಂದ ಇಂದಿನವರೆಗೂ ಕ್ರೀಯಾತ್ಮಕ ಮತ್ತು ಸಂಘಟನಾತ್ಮಕವಾಗಿ ಕೆಲಸ ಮಾಡುವುದರ ಜೊತೆಗೆ, ರಾಜ್ಯ ಮತ್ತು ಜಿಲ್ಲಾ ಸಮಿತಿಯ ಆದೇಶಗಳನ್ನು ಚಾಚು ತಪ್ಪದೆ ಪಾಲಿಸುವ ಮೂಲಕ ಕನ್ನಡದ ಕೆಲಸವನ್ನು ಮಾಡಿದ್ದೇನೆ ಎಂದರು.

ಈ ವೇಳೆ ಕಸಾಪ ಮಹಿಳಾ ಘಟಕದ ಅಧ್ಯಕ್ಷ ಕರಡಕರೆ ವಸಂತ, ಗೌರವಾಧ್ಯಕ್ಷ ಮಂಜುಳಾ ಬೋರೇಗೌಡ, ಸೌಭಾಗ್ಯಮ್ಮ, ತಿಪ್ಪೂರು ರಾಜೇಶ್, ಶಶಿಕಲಾ, ವಿ.ಎಚ್. ಶಿವಲಿಂಗಯ್ಯ, ಸೋಫುರ ಉಮೇಶ್, ಶ್ರೀನಿವಾಸ್, ಪಟೇಲ್ ಹರೀಶ್, ಜಯಲಕ್ಷ್ಮಿ, ಪುಟ್ಟರತ್ನಮ್ಮ, ಧರಣಿ, ವೆಂಕಟೇಶ್, ಕರಡಕೆರೆ ಯೋಗೇಶ್, ಅಣ್ಣೂರು ಮಹೇಂದ್ರ, ಎಂ.‌ ವೀರಪ್ಪ, ತೂಬಿನಕೆರೆ ರಾಜು, ಕಲಾವಿದ ಬಾಲಕೃಷ್ಣ, ಮರಳಿಗ ಶಿವರಾಜು, ಶಶಿಕುಮಾರ್, ಹೋಬಳಿ, ನಗರ ಹಾಗೂ ಯುವ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಇದ್ದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ