ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರಾಜ್ಯದ ಒಂದು ಖಾಸಗಿ ವಿಶ್ವವಿದ್ಯಾಲಯದಲ್ಲಿ 4,320 ಎಂಜಿನಿಯರಿಂಗ್ ಸೀಟುಗಳು ಇದ್ರೆ ಈ ಪೈಕಿ 4,020 ಅಂದರೆ ಶೇ.90 ರಷ್ಟು ಸೀಟುಗಳು ಕೇವಲ ಕಂಪ್ಯೂಟರ್ ಸೈನ್ಸ್ ಗೆ ಸಂಬಂದಿಸಿದ ಕೋರ್ಸ್ ಗಳಿಗೆ ಮೀಸಲಿದೆ. ಇದೆ ಸರ್ಕಾರಿ ಎಂಜಿನಿಯರಿಂಗ್ 6,500 ಸೀಟುಗಳು ಇದ್ರೆ ಕೇವಲ ಶೇ.10 ಮಾತ್ರ ಕಂಪ್ಯೂಟರ್ ಸೈನ್ಸ್ ಗೆ ಸಂಬಂದಿಸಿದ ಕೋರ್ಸ್ ಗಳಿಗೆ ಇಟ್ಟಿದ್ದಾರೆ. ಇದು ಯಾವ ರೀತಿ ನ್ಯಾಯ ? ಹೇಗೆ ಅನುಮತಿ ನೀಡಿದ್ದೀರಿ ?ಇದು ಹೇಗೆ ಸಾಧ್ಯ ? ಸರ್ಕಾರಿ ಇಂಜನಿಯರಿಂಗ್ ಕಾಲೇಜುಗಳಲ್ಲಿ 20 ವಿದ್ಯಾರ್ಥಿಗಳಿಗೆ ಒಬ್ಬ ಅಸಿಸ್ಟೆಂಟ್ ಪ್ರೊಫೆಸರ್ ಇದ್ರೆ ಖಾಸಗಿ ಇಂಜನಿಯರಿಂಗ್ ಕಾಲೇಜ್ ನಲ್ಲಿ 4,320 ವಿದ್ಯಾರ್ಥಿಗಳಿಗೆ 864 ಅಸಿಸ್ಟೆಂಟ್ ಪ್ರೊಫೆಸರ್, 192 ಅಸೋಸಿಯೇಟ್ ಪ್ರೊಫೆಸರ್, 96 ಪ್ರೊಫೆಸರ್ ಬೇಕು .ಇದು ಹೇಗೆ ಸಾಧ್ಯ . ಅಷ್ಟೊಂದು ಎಂ -ಟೆಕ್, ಪಿ.ಹೆಚ್.ಡಿ ಪಡೆದವರು ಎಲ್ಲಿದ್ದಾರೆ ಇದು ಸರಿಯಲ್ಲ ಸರ್ಕಾರಿ ಕಾಲೇಜುಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ದಯವಿಟ್ಟು ಈ ಪದ್ಧತಿ ಸರಿಪಡಿಸಿ ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಸರ್ಜಿ ಅವರು ಕೇಳಿದ ಪ್ರಶ್ನೆ ವಾಸ್ತವಿಕವಾಗಿದೆ, ನಾನು ಒಪ್ಪುತ್ತೇನೆ. ಇತ್ತೀಚೆಗೆ ಮಾನದಂಡಗಳನ್ನು ಎ.ಐ.ಸಿ.ಟಿ.ಇ ಅವರು ಬದಲಾವಣೆ ಮಾಡಿದ್ದಾರೆ. ಹಿಂದೆ 1:4 ಇತ್ತು ಅಂದರೆ 4 ಜನ ವಿದ್ಯಾರ್ಥಿಗಳಿಗೆ 1 ಕಂಪ್ಯೂಟರ್ ಇತ್ತು ಈಗ ಬದಲಾವಣೆ ಮಾಡಿ 1:10 ಮಾಡಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಯೋಚನೆ ಮಾಡಿದ್ದೆ. ಯಥೇಚ್ಛವಾಗಿ ಸೀಟುಗಳನ್ನು ತೆಗೆದುಕೊಳ್ಳುವುದಕ್ಕೆ ನಿರ್ಬಂಧ ಹಾಕಬೇಕು ಎಂದು ತೀರ್ಮಾನ ಮಾಡಿದ್ದೇವೆ. ಎಲ್ಲೆಲ್ಲಿ ಸೀಟುಗಳು ಹೆಚ್ಚಿದೆ, ಒಂದು ವಿಷಯಕ್ಕೆ ಹೆಚ್ಚು ಸೀಟುಗಳನ್ನು ತೆಗದುಕೊಳ್ಳುವುದಕ್ಕೆ ಅಲ್ಲೇ ಅದನ್ನು ಸ್ಥಗಿತ ಮಾಡುವ ಕ್ರಮ ಕೈ ಗೊಳ್ಳುತ್ತೇವೆ ಮುಂದಿನ ದಿನಗಳಲ್ಲಿ ಆದೇಶ ಮಾಡುತ್ತೇವೆ ಎಂದು ಹೇಳಿದರು.