ರೈತರ ಸಮಸ್ಯೆ ಬಗೆಹರಿಸಲು ಎಷ್ಟೇಕೆ ತಾತ್ಸಾರ: ನಿರಂಜನ್ ಕುಮಾರ್

KannadaprabhaNewsNetwork |  
Published : Nov 15, 2025, 01:30 AM IST
14ಸಿಎಚ್‌ಎನ್‌53ಗುಂಡ್ಲುಪೇಟೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಬುದ್ಧಿವಂತ ಹಾಗೂ ಜಾಣ ಶಾಸಕರಾದ ನಿಮಗೆ ಕಳೆದ ಎರಡೂವರೆ ವರ್ಷಗಳಿಂದ ಕೆರೆಗಳಿಗೆ ನೀರು ತುಂಬಿಸಲು ಆಗಲಿಲ್ಲ ಪಾಪ. ನಿನಗೆ ಕೆರೆಗೆ ನೀರು ತುಂಬಿಸಲು ಆಸಕ್ತಿ ಇಲ್ಲ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ ಸ್ಥಳೀಯ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಕ್ಷೇತ್ರದಲ್ಲಿ ರೈತರು ಅಹೋರಾತ್ರಿ ಧರಣಿ ಕಳೆದ 32 ದಿನಗಳಿಂದಲೂ ನಡೆಸುತ್ತಿದ್ದು, ರೈತರ ಸಮಸ್ಯೆ ಬಗೆಹರಿಸಲು ಎಷ್ಟೇಕೆ ತಾತ್ಸಾರ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಮತ್ತೆ ಪ್ರಶ್ನಿಸಿದ್ದಾರೆ.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರೈತರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದರೆ ತಾಲೂಕಿನ ಮಾನ ಮಾರ್ಯಾದೆ ಹೋಗ್ತಿದೆ ಎಂದು ಬೇಸರ ಹೊರಹಾಕಿದರು.ಬುದ್ಧಿವಂತ ಹಾಗೂ ಜಾಣ ಶಾಸಕರಾದ ನಿಮಗೆ ಕಳೆದ ಎರಡೂವರೆ ವರ್ಷಗಳಿಂದ ಕೆರೆಗಳಿಗೆ ನೀರು ತುಂಬಿಸಲು ಆಗಲಿಲ್ಲ ಪಾಪ. ನಿನಗೆ ಕೆರೆಗೆ ನೀರು ತುಂಬಿಸಲು ಆಸಕ್ತಿ ಇಲ್ಲ. ಗ್ರಾವೀಟಿಲಿ ನಾನು ಕೆರೆಗಳಿಗೆ ನೀರು ತುಂಬಿಸಿದ್ದಕ್ಕೆ ಅಂತರ್ಜಲ ಹೆಚ್ಚಿದೆ ಎಂದರು.ನಾನು ಪೆದ್ದ ಎಂದು ನೀವು(ಶಾಸಕರು) ಅಂದಿದ್ದೀರಾ? ನಿಜ, ನಾನು ಪೆದ್ದ ಅದಕ್ಕೆ ಕೆರೆಗಳಿಗೆ ಮೂರು ವರ್ಷ ನೀರು ತುಂಬಿಸಿದೆ, ನೀವು ಜಾಣ ಹಾಗೂ ಬುದ್ದಿವಂತರಲ್ಲವೇ ಯಾಕೆ ಎರಡೂವರೆ ವರ್ಷದಿಂದ ನೀರು ತುಂಬಿಸಲಿಲ್ಲವೇಕೆ ಎಂದು ಶಾಸಕರನ್ನು ಪ್ರಶ್ನಿಸಿದರು.ಕೆರೆಗಳಿಗೆ ನೀರು ತುಂಬುವ ಮುನ್ನ ಸಾವಿರ ಅಡಿ ತನಕ ಭೂಮಿ‌ ಕೊರೆದರೂ ನೀರು ಬರುತ್ತಿರಲಿಲ್ಲ. ಈಗ ಇನ್ನೂರಡಿಗೆ ನೀರು ಬರುತ್ತಿದೆ. ಇದು ನಿಮಗೆ ಗೊತ್ತಿಲ್ವ ಜಾಣ ಶಾಸಕರೇ? ಕೆರೆಗಳಿಗೆ ನೀರು ಹರಿಸಿದರೆ ಸಾಲದು, ಆ ಯೋಜನೆ ಫಲಕಾರಿಯಾಗಬೇಕಲ್ವ ಎಂದು ಪ್ರಶ್ನೆಗಳ ಸುರಿಮಳೆಗೈದರು.ಪ್ರಶ್ನೆ ಮಾಡಂಗಿಲ್ವ:ಸ್ಥಳೀಯ ಶಾಸಕರು ಬಿಜೆಪಿ ಕಾಲ್ನಡಿಗೆ ಜಾಥಾ ನಡೆಸಿದ್ದಕ್ಕೆ ಸ್ಥಳದಲ್ಲಿ ಇಲ್ಲದವರ ಮೇಲೆ ಎಫ್‌ಐಆರ್ ಹಾಕಿಸಿದ್ರೀ? ಬಿಜೆಪಿಗರ ಮೇಲೆ ಎಫ್‌ಐಆರ್ ಆಗಲು ನಿಮ್ಮ ಕುಮ್ಮಕ್ಕಿದೆ. ನಿಮ್ಮ ಕುಮ್ಮಕ್ಕಿನಿಂದಲೇ ಪೊಲೀಸರು ಕೇಸು ದಾಖಲಿಸಿದ್ದು ಎಂದರು.ಹೆದರಲ್ಲ, ಜಗ್ಗಲ್ಲನಿಮ್ಮಪ್ಪ, ನಿಮ್ಮಮ್ಮ ಶಾಸಕರು ಹಾಗೂ ಸಚಿವರಾಗಿದ್ರು, ನೀವು ಶಾಸಕರಾಗಿದ್ದೀರಾ? ಜನರ ಕೆಲಸ ಮಾಡಿ ಅಂದ್ರೆ ಬಿಜೆಪಿ ಕಾರ್ಯಕರ್ತರ ಹೆದರಿಸಲು ಹೊರಟಿದ್ದೀರಾ? ಇದು ಇನ್ಮುಂದೆ ನಡೆಯೊಲ್ಲ ಶಾಸಕರೇ ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಡಲ ಬಿಜೆಪಿ ಅಧ್ಯಕ್ಷ ಸಿ.ಮಹದೇವಪ್ರಸಾದ್, ಪ್ರಧಾನ ಕಾರ್ಯದರ್ಶಿ ಮಹೇಂದ್ರ, ಮುಖಂಡರಾದ ಮಹದೇವಶೆಟ್ಟಿ, ಪ್ರವೀಣ್, ಬಸವರಾಜು, ನಾಗೇಶ್ ಇದ್ದರು.

ಬಾಕ್ಸ್‌.....

ಕೆರೆಗೆ ನೀರು ತುಂಬಿಸೋಕೆ ನಿಮ್ಮಪ್ಪ ಆಗಲ್ಲ ಅಂದಿದ್ರು!

ಗುಂಡ್ಲುಪೇಟೆ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವ ಹೋರಾಟ ಸಮಿತಿ ಸದಸ್ಯರು ನಿಮ್ಮ ತಂದೆ ಮಹದೇವಪ್ರಸಾಸ್‌ಗೆ ಅರ್ಜಿ ಕೊಟ್ಟಾಗ ಕುಹಕವಾಡಿ ತಮಾಷೆ ಮಾಡ್ತೀರಾ? ಕೆರೆಗೆ ನೀರು ತುಂಬಿಸೋಕಾಗಲ್ಲ‌ ಎಂದಿದ್ರು ಎಂದು ಶಾಸಕ‌ ಎಚ್.ಎಂ.ಗಣೇಶ್ ಪ್ರಸಾದ್ ರನ್ನು ಮಾಜಿ‌ ಶಾಸಕ ಸಿ.ಎಸ್. ನಿರಂಜನ್ ಕುಮಾರ್ ಹೇಳಿದರು.ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಯೋಜನೆಗೆ ಅನುದಾನ ಕೊಟ್ಟು ಯೋಜನೆಗೆ ಚಾಲನೆ‌ ಕೊಟ್ಟಿದ್ದರು. ಅದೇ ರೀತಿ ಬೇಗೂರು ಹತ್ತಿ ಮಾರು ಕಟ್ಟೆ ಹಾಗೂ ಬೊಮ್ಮನಹಳ್ಳಿ ಅಂಬೇಡ್ಕರ್ ವಸತಿ ಶಾಲೆಗೂ ಬಿಜೆಪಿ ಸರ್ಕಾರದಲ್ಲೇ ಅನುದಾನ ಕೊಟ್ಟಿತ್ತು ಎಂದರು.---------------ಪುಂಡ ಪೋಕರಿಗಳು ಆಗುತ್ತಾರಾ

ಗುಂಡ್ಲುಪೇಟೆ:

ನಿಮ್ಮನ್ನು ಪ್ರಶ್ನಿಸಿದರೆ ಬಿಜೆಪಿಗರು ಪುಂಡ ಪೋಕರಿಗಳು ಆಗುತ್ತಾರಾ? ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅವರನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್ ಪ್ರಶ್ನಿಸಿದರು.ಸುಳ್ಳು ಎಫ್ಐಆರ್ ದಾಖಲಿಸಿದ್ದಕ್ಕೆ ಪೊಲೀಸರ ನ್ಯಾಯ ಕೇಳಲು ಬಿಜೆಪಿಗರು ಠಾಣೆಗೆ ಹೋದರೆ ನಾವು ಪುಂಡ ಪೋಕರಿಗಳಾ? ನಿಮ್ಮ ನಡವಳಿಕೆ ಹಾಗು ಶಾಸಕರ ಕರ್ತವ್ಯ ಪ್ರಶ್ನಿಸಿದ‌ ಬಿಜೆಪಿ ಕಾರ್ಯಕರ್ತರಿಗೆ ಸ್ವತಃ ಶಾಸಕರೇ ಹೆದರಿಸುತ್ತಿದ್ದಾರೆಂದರೆ ನೀವು ಶಾಸಕರಾಗಲು ಅರ್ಹರಲ್ಲ ಎಂದರು.ನಾನು ಶಾಸಕನಾದ ಬಳಿಕ ಕ್ಷೇತ್ರದ ಎರಡು ಯೋಜನೆಗಳಿಗೆ ಒಳ ಪಡುವ ಕೆರೆಗಳನ್ನು ತುಂಬಿಸಲು ಆಗಿಲ್ಲ. ಕೂಡಲೇ ಶಾಸಕರು ರೈತರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

----------------

14ಸಿಎಚ್‌ಎನ್‌53ಗುಂಡ್ಲುಪೇಟೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್. ನಿರಂಜನ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

PREV

Recommended Stories

ಪೊನ್ನಾಚಿಯಲ್ಲಿ ಚಿರತೆ ದಾಳಿ ಮೇಕೆ ಬಲಿ
ಮೇಕೆದಾಟು ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು