ಸಾರ್ವಜನಿಕರನ್ನು ವಿನಾಕಾರಣ ಅಲೆದಾಡಿಸುವುದು ಲಂಚ ಪಡೆಯುವುದಕ್ಕೆ ಸಮಾನ: ಎಸ್ಪಿ ಸುರೇಶ್ ಬಾಬು

KannadaprabhaNewsNetwork |  
Published : Nov 15, 2025, 01:30 AM IST
14ಕೆಎಂಎನ್ ಡಿ15 | Kannada Prabha

ಸಾರಾಂಶ

ಪುರಸಭೆಯ ವ್ಯಾಪ್ತಿವರೆಗೂ ಒಂದು ರಸ್ತೆ ಸರಿಯಾಗಿಲ್ಲ. ವಿಳಾಸ ಹುಡುಕಲು ಪ್ರಯಾಸವಾಗುತ್ತಿದೆ. ರಸ್ತೆಗಳಿಗೆ ಗಣ್ಯ, ಮಹನೀಯರ ಹೆಸರುಗಳನ್ನು ಇಡಲು ಕ್ರಮವಹಿಸಿ ಎಂದು ಅರ್ಜಿ ನೀಡಿದರೆ ಅಸಡ್ಡೆ ತೋರುತ್ತಾರೆ .

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದ ತಾಲೂಕು ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಸಮಸ್ಯೆಗಳನ್ನು ಆಲಿಸಿದರು.

ಜಿಲ್ಲಾ ಲೋಕಾಯುಕ್ತ ಎಸ್.ಪಿ. ಸುರೇಶ್‌ಬಾಬು, ಡಿವೈಎಸ್ಪಿ ಸುನಿಲ್‌ಕುಮಾರ್, ಲೋಕಾಯುಕ್ತ ಇನ್ಸ್ ಪೆಕ್ಟರ್ ಬ್ಯಾಟರಾಯಿಗೌಡ ನೇತೃತ್ವದ ಲೋಕಾಯುಕ್ತ ಅಧಿಕಾರಿಗಳ ತಂಡ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ನಂತರ ಜನರಿಂದ ಅಹವಾಲು ಸ್ವೀಕರಿಸಿದರು.

ಈ ವೇಳೆ ಎಸ್ಪಿ ಸುರೇಶ್ ಬಾಬು ಮಾತನಾಡಿ, ಸಕಾಲಕ್ಕೆ ಸಾರ್ವಜನಿಕರು ಹಾಗೂ ರೈತರ ಕೆಲಸಗಳನ್ನು ಸೇವಾ ಭಾವನೆಯಿಂದ ಮಾಡಿಕೊಡಬೇಕು. ವಿನಾಕಾರಣ ಅಲೆದಾಡಿಸಬಾರದು. ನಿಗದಿತ ಅವಧಿಯೊಳಗೆ ಕೆಲಸ ಮಾಡಿಕೊಡದಿದ್ದರೆ ಅದು ಲಂಚ ಪಡೆಯುವುದಕ್ಕೆ ಸಮನಾಗುತ್ತದೆ ಎಂದು ಎಚ್ಚರಿಸಿದರು.

ನಿಗದಿತ ಅವಧಿಯೊಳಗೆ ಕೆಲಸ ಮಾಡಿಕೊಡದೇ ಅಲೆದಾಡಿಸಿದರೆ ನೊಂದ ಅರ್ಜಿದಾರರಿಂದ ದೂರು ಬಂದರೆ ತಕ್ಷಣ ಅಂತಹ ಅಧಿಕಾರಿಗಳು ಅಥವಾ ನೌಕರರ ಮೇಲೆ ಎಫ್.ಐ.ಆರ್. ದಾಖಲಿಸಿ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಾಲೂಕಿನ ಬಿ.ಬಿ.ಕಾವಲು ಅರಣ್ಯ ಪ್ರದೇಶದ ಒತ್ತುವರಿ ವಿಚಾರದಲ್ಲಿ ಹಿಡುವಳಿ ರೈತರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ದೂರು ನೀಡಲು ಆಗಮಿಸಿದಾಗ ಸಂಬಂಧಪಟ್ಟ ತಾಲೂಕು ವಲಯ ಅರಣ್ಯಾಧಿಕಾರಿಗಳು ಸಭೆಗೆ ಬಾರದಿರುವುದನ್ನು ತಿಳಿದು ಕೆಂಡಾ ಮಂಡಲವಾದರು.

ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಅವರು ಕೂಡಾ ಯಾವುದೆ ಸಭೆಗಳಿಗೆ ವಲಯ ಅರಣ್ಯಾಧಿಕಾರಿಗಳು ಬಾರದೆ ಅಸಡ್ಡೆ ತೋರುತ್ತಿದ್ದಾರೆ ಎಂದು ದೂರಿದರು. ತಕ್ಷಣವೇ ಇವರ ವಿರುದ್ದ ಕ್ರಮಕ್ಕೆ ಒತ್ತಾಯಿಸಲು ಸೂಚಿಸಿ ತನಿಖೆ ಮಾಡಲಾಗುವುದು ಎಂದು ತಿಳಿಸಿದರು.

ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಎ.ಎನ್.ಮೂರ್ತಿರಾಯರ ಉದ್ಯಾನವನದ ಸಮೀಪ ಟೀ ಅಂಗಡಿ ಹೊಂದಿದ್ದ ವ್ಯಕ್ತಿಯು, ಈಗಾಗಲೇ ಎಲ್ಲಾ ದಾಖಲೆಗಳನ್ನು ಗ್ರಾಪಂಗೆ ನೀಡಿದ್ದರೂ ಸಹ ಮತ್ತೊಮ್ಮೆ ರಾಜಕೀಯ ಪ್ರಭಾವಕ್ಕೆ ಒಳಗಾಗಿ ಖಾಲಿ ಮಾಡುವಂತೆ ನೋಟಿಸ್ ನೀಡಿದ್ದಾರೆ. ನಾನು ಬಡವ ಇದರಿಂದ ತೊಂದರೆಯಾಗುತ್ತದೆ ಎಂದು ಮನವಿ ನೀಡಿದರು. ಸ್ಥಳದಲ್ಲಿದ್ದ ತಾಪಂ ಇಒ ಮತ್ತು ಪಿಡಿಒ ಅವರಿಗೆ ಸೂಚಿಸಿ ಈ ಅಸಹಾಯಕನ ನೆರವಿಗೆ ನಿಲ್ಲಬೇಕು. ತಕ್ಷಣ ನನಗೆ ವರದಿ ಸಲ್ಲಿಸಬೇಕೆಂದು ತಾಕೀತು ಮಾಡಿದರು.

ತಾಲೂಕು ನಯನಜ ಕ್ಷತ್ರೀಯ ಸಮಾಜದ ಅಧ್ಯಕ್ಷ ಕೆ.ಎಂ.ಶಿವಪ್ಪ ಮಾತನಾಡಿ, ಪುರಸಭೆಯ ವ್ಯಾಪ್ತಿವರೆಗೂ ಒಂದು ರಸ್ತೆ ಸರಿಯಾಗಿಲ್ಲ. ವಿಳಾಸ ಹುಡುಕಲು ಪ್ರಯಾಸವಾಗುತ್ತಿದೆ. ರಸ್ತೆಗಳಿಗೆ ಗಣ್ಯ, ಮಹನೀಯರ ಹೆಸರುಗಳನ್ನು ಇಡಲು ಕ್ರಮವಹಿಸಿ ಎಂದು ಅರ್ಜಿ ನೀಡಿದರೆ ಅಸಡ್ಡೆ ತೋರುತ್ತಾರೆ ಎಂದು ದೂರಿದರು.

ಟಿಎಪಿಸಿಎಂಎಸ್ ಚೇತನ್ ಅವರು, ಮೈಸೂರು ಹಾಗೂ ಚನ್ನರಾಯಪಟ್ಟಣ ರಸ್ತೆಯ ಟೌನ್‌ಕ್ಲಬ್ ಬಳಿ ಸಾರಿಗೆ ಬಸ್‌ಗಳು ನಿಲುಗಡೆಯಾಗುತ್ತಿಲ್ಲ. ವೃದ್ದರು ಹಾಗೂ ಮಕ್ಕಳಿಗೆ ತೊಂದರೆಯಾಗುತ್ತಿದೆ. ಇದರ ಬಗೆಗೆ ಅಧಿಕಾರಿಗಳಿಗೆ ನಿರ್ದೇಶನವನ್ನು ನೀಡಿ ಎಂದು ಮನವಿ ಮಾಡಿದರು.

ಸಭೆಯಲ್ಲಿ ಒಟ್ಟು 31 ದೂರು ಅರ್ಜಿಗಳನ್ನು ಸ್ವೀಕರಿಸಲಾಯಿತು. ಈ ಪೈಕಿ ಸಾರಿಗೆ ಇಲಾಖೆ ವಿರುದ್ದ 1 ಎಫ್.ಐ.ಆರ್ ಹಾಗೂ ಕಂದಾಯ ಇಲಾಖೆ ವಿರುದ್ದ ೩ ಎಫ್.ಐ.ಆರ್. ಗಳನ್ನು ಲೋಕಾಯುಕ್ತ ಅಧಿಕಾರಿಗಳು ಸ್ಥಳದಲ್ಲಿಯೇ ದಾಖಲಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ತಾಪಂ ಇಒ ಸುಷ್ಮ, ಗ್ರೇಡ್-2 ತಹಸೀಲ್ದಾರ್ ಲೋಕೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈಯಕ್ತಿಕ ಕಾರಣದಿಂದ ಬೇಸತ್ತು ಕಿರುತೆರೆ ಯುವ ನಟಿ ಆತ್ಮ*ತ್ಯೆ
ಜ.6 ಇಲ್ಲವೇ 9ಕ್ಕೆ ಡಿಕೆಶಿ ಸಿಎಂ 200% ಕನ್ಫರ್ಮ್: ಇಕ್ಬಾಲ್