ಸಿಎಂ ರಾಜೀನಾಮೆ ಪ್ರಶ್ನೆಯೇ ಇಲ್ಲ । ‘ಮೈತ್ರಿ’ ಪಾದಯಾತ್ರೆ ಸಿಎಂ ಜನಪ್ರಿಯತೆ ಕುಗ್ಗಿಸುವ ತಂತ್ರ
ಏನು ತಪ್ಪು ಮಾಡದೆ, ಯಾವುದೇ ಹಗರಣ, ಭ್ರಷ್ಟಾಚಾರ ನಡೆಸದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಕೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು? ಅವರ ಜನಪ್ರಿಯತೆ ಸಹಿಸದೆ ಬಿಜೆಪಿ ವಿನಾಕಾರಣ ಆರೋಪ ಮಾಡುವ ಮೂಲಕ ತಂತ್ರಗಾರಿಕೆ ನಡೆಸುತ್ತಿದೆ, ಹಾಗಾಗಿ ರಾಜೀನಾಮೆ ನೀಡುವ ಪ್ರಶ್ನೆಯೆ ಇಲ್ಲ ಎಂದು ಸಂಸದ ಸುನೀಲ್ ಬೋಸ್ ಹೇಳಿದರು.
ಏನು ತಪ್ಪು ಮಾಡದೆ, ಯಾವುದೇ ಹಗರಣ, ಭ್ರಷ್ಟಾಚಾರ ನಡೆಸದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಕೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು? ಎಂದು ಸಂಸದ ಸುನೀಲ್ ಬೋಸ್ ಪ್ರಶ್ನಿಸಿದರು. ಕೊಳ್ಳೇಗಾಲದ ನದಿ ಪಾತ್ರದ ಗ್ರಾಮಗಳಿಗೆ ಭೇಟಿ ನೀಡಿ ಮಾತನಾಡಿದರು. ನದಿ ಪಾತ್ರದ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಗ್ರಾಮಸ್ಥರ ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದ ಬಳಿಕ ಮಾತನಾಡಿದರು.ಮುಡಾ ಹಗರಣ ಮತ್ತು ವಾಲ್ಮೀಕಿ ನಿಗಮದ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾತ್ರವಿಲ್ಲ, ಮುಡಾ ಹಗರಣ ನಡೆದಿರುವುದು ಬಿಜೆಪಿ ಸಕಾ೯ರದಲ್ಲಿ, ಈ ವಿಚಾರವಾಗಿ ಎಸ್ಐಟಿ ತನಿಖೆ ನಡೆಸುತ್ತಿದ್ದು, ಸತ್ಯಾಸತ್ಯತೆ ಹೊರಬರುತ್ತೆ, ತಪ್ಪಿತಸ್ಥರಿಗೆ ಖಂಡಿತ ಶಿಕ್ಷೆ ಆಗುತ್ತೆ. ತನಿಖೆ ಪೂತಿ೯ಗೊಂಡಿಲ್ಲದಿದ್ದರೂ ಬಿಜೆಪಿಯವರು ಸಿಎಂ ಜನಪ್ರಿಯತೆ ಕುಗ್ಗಿಸುವ ತಂತ್ರ ಮಾಡಲು ಅವರ ಮೇಲೆ ಆರೋಪ ಹೊರಿಸಲಾಗುತ್ತಿದೆ. ಇದು ಸರಿಯಲ್ಲ ಎಂದರು.
ನದಿ ಪಾತ್ರದಲ್ಲಿನ ಗ್ರಾಮಗಳಿಗೆ ಶಾಶ್ವತ ಪರಿಹಾರ:
ನಾನು ನದಿಪಾತ್ರದ ಜನರ ಸಮಸ್ಯೆ ಬಗ್ಗೆ ಅವರಿಂದ ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೆನೆ. ಹಾನಿಗೊಳಗಾದ ಆಸ್ತಿ, ಮನೆಗಳಿಗೆ ಯಾವ ರೀತಿ ಪರಿಹಾರ ನೀಡಬೇಕು ಎಂಬ ವಿಚಾರದಲ್ಲಿ ಸೂಕ್ತ ಪರಿಹಾರಕ್ಕೆ ಅಗತ್ಯ ಕ್ರಮವಹಿಸಲಾಗುವುದು ಎಂದರು.
ಎಸ್‌ಐ ಪರಶುರಾಂ ಆತ್ಮಹತ್ಯೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಸಿಐಡಿ ತನಿಖೆ ನಡೆಸಲಿದೆ ಎಂದರು.
ಉಟೋಪಚಾರ ಉತ್ತಮ ರೀತಿ ನೀಡಲಾಗುತ್ತಿದೆಯೇ?
ಈ ವೇಳೆ ಹಾಜರಿದ್ದ ಸಂತ್ರಸ್ತರು ಊಟೋಪಚಾರ ನೀಡಲಾಗುತ್ತಿದೆ. ಆದರೆ ನಮಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಹಾಗೂ ಶಾಶ್ವತ ಪರಿಹಾರ ಸೂಚಿಸಿ ಎಂದು ಮನವಿ ಮಾಡಿದರು.