ರಸ್ತೆಯ ಸುರಕ್ಷತೆಗೆ ಆದ್ಯತೆ । ಎರಡೂ ಬದಿಯಲ್ಲಿ ಬಾಕ್ಸ್ ಚರಂಡಿ ನಿರ್ಮಾಣ
ಕನ್ನಡಪ್ರಭ ವಾರ್ತೆ, ತರೀಕೆರೆಲಕ್ಕವಳ್ಳಿ ಗ್ರಾಮದ ಮುಖ್ಯ ರಸ್ತೆ ಅಗಲೀಕರಣ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಲಕ್ಕವಳ್ಳಿ ಗ್ರಾಮ ಪಂಚಾಯಿತಿ ಅಬ್ದುಲ್ ರೆಹಮಾನ್ ಹೇಳಿದಾರೆ. ಲಕ್ಕವಳ್ಳಿ ಗ್ರಾಮದ ಮುಖ್ಯರಸ್ತೆ ಹೆಚ್ಚಿನ ಪ್ರಮಾಣದಲ್ಲಿ ವಾಹನಗಳ ಸಂಚಾರ ದಟ್ಟಣೆ ನಿವಾರಿಸಿ ರಸ್ತೆಯ ಸುರಕ್ಷತೆಗೆ ಅನುವು ಮಾಡಿ ಕೊಡುವ ಉದ್ದೇಶದಿಂದ ಹಾಗೂ ಹೊಸ ತಾಂತ್ರಿಕಕತೆಯಂತೆ ರಸ್ತೆ ಎರಡೂ ಬದಿಯಲ್ಲಿ ಬಾಕ್ಸ್ ಚರಂಡಿ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.ರಸ್ತೆಯಲ್ಲಿರುವ ಅಂಗಡಿ ಮುಂಗಟ್ಟು ತೆರವುಗೊಳಿಸಿ ರಸ್ತೆ ಮಧ್ಯೆ ಭಾಗದಿಂದ 33 ಅಡಿಯಿಂದ 40ಅಡಿಯಂತೆ ರಸ್ತೆ ಒಳ ಭಾಗದಲ್ಲಿರುವ ಕಟ್ಟಡಗಳನ್ನು ಜೆಸಿಬಿ ಯಂತ್ರದಿಂದ ನೆಲಸಮ ಮಾಡಿ ಕಾಮಗಾರಿ ಪ್ರಾರಂಭಿಸಲಾಗಿದೆ. ಆಯಾ ಕಟ್ಟಡದ ಮಾಲೀಕರ ಸ್ವಯಂ ಸಹಕಾರದಿಂದ ಕಾಮಗಾರಿ ಕೈಗೊಳ್ಳಲು ಸಹಕರಿಸಿ ರಸ್ತೆ ಅಗಲೀಕರಣಕ್ಕೆ ಒತ್ತು ನೀಡಲಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ರೆಹಮಾನ್ ಮತ್ತು ಗ್ರಾಪಂ ಸರ್ವಸದಸ್ಯರು ಕಟ್ಟಡಗಳ ಮಾಲೀಕರೊಂದಿಗೆ ಯಶಸ್ವಿ ಮಾತುಕತೆ ನಡೆಸಿ ರಸ್ತೆ ಅಭಿವೃದ್ಧಿ ಪಡಿಸಲು ಮನವೊಲಿಸಿ ಕಾಮಗಾರಿ ಕೈಗೊಳ್ಳಲಾಗಿದೆ. ಶಾಸಕ ಶ್ರೀನಿವಾಸ್ ಚರಂಡಿ ನಿರ್ಮಾಣಕ್ಕೆ ₹2.75 ಕೋಟಿ, ಕರೆಂಟ್ ಕಂಬಗಳ ಮತ್ತು ಫುಟ್ ಪಾತ್ ನಿರ್ಮಾಣಕ್ಕೆ ₹2.50.ಕೋಟಿ ಮತ್ತು ರಸ್ತೆ ಅಭಿವೃದ್ಧಿಗೆ ₹12 ರಿಂದ 15 ಕೋಟಿ ರು. ಅನುದಾನ ಒದಗಿಸಿದ್ದಾರೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ರೆಹಮಾನ್ ತಿಳಿಸಿದ್ದಾರೆ.ಕಟ್ಟಡದ ತೆರವು ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ರೆಹಮಾನ್, ಸದಸ್ಯ ಬಾಲರಾಜ್, ಗ್ರಾಮ ಮಾಜಿ ಅಧ್ಯಕ್ಷ ಬಸವರಾಜ, ಮಾಜಿ ಸದಸ್ಯ ಎಲ್.ಟಿ. ಹೇಮಣ್ಣ, ತಾ.ಪಂ.ಮಾಜಿ ಅಧ್ಯಕ್ಷ ಎಲ್.ಎಸ್.ಶಿವಯೋಗಿ, ಗ್ರಾಮ ಜ್ಯೋತಿ ವಿದ್ಯಾ ಸಂಸ್ಥೆ ಖಜಾಂಚಿ ಎಲ್. ಆರ್. ಹರೀಶ್ ಭಾಗವಹಿಸಿದ್ದರು.-
26ಕೆಟಿಆರ್.8ಃತರೀಕೆರೆ ಸಮೀಪದ ಲಕ್ಕವಳ್ಳಿ ಮುಖ್ಯ ರಸ್ತೆ ಅಗಲೀಕರಣ ಹಿನ್ನಲೆಯಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಗ್ರಾಪಂ ಅಧ್ಯಕ್ಷ , ಅಬ್ದಲ್ ರೆಹಮಾನ್. ಮಾಜಿ ಸದಸ್ಯ ಎಲ್. ಟಿ. ಹೇಮಣ್ಣ ಮತ್ತಿತರರು ಇದ್ದರು.